ರಾಣೇಬೆನ್ನೂರು: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುಮಾರ ಪಟ್ಟಣಂ.
ಕುಮಾರ ಪಟ್ಟಣಂ ತುಂಗಭದ್ರಾ ನದಿಯ ದಡದ ಮೇಲೆ ಇದ್ದು ಅಪಾರವಾದ ನದಿ ಸಂಪತ್ತನ್ನ ಹೊಂದಿದೆ. ಇಲ್ಲಿನ ಮರಳಿಗೆ ಮತ್ತು ಇಟ್ಟಿಗೆ ಹೊರ ರಾಜ್ಯದಲ್ಲಿ ತುಂಬಾ ಬೇಡಿಕೆ ಇದೆ.
ತುಂಗಭದ್ರಾ ನದಿ ತೀರದಲ್ಲಿ ಸಿಗುವ ಮರಳು ಮತ್ತು ಇಲ್ಲಿ ತಯಾರಾಗುವ ಇಟ್ಟಿಗೆಗಳು ಈ ಭಾಗದ ಜನರ ಪ್ರಮುಖ ಆದಾಯದ ವಸ್ತುಗಳಾಗಿವೆ.
ಕುಮಾರ ಪಟ್ಟಣಂ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಜನರೊಂದಿಗೆ ನಗುನಗುತ್ತ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಪಿಎಸ್ಐ ಸಂತೋಷ್ ಬಾಗೋಜಿ.
ಸಂತೋಷ್ ಬಾಗೋಜಿ ಅವರು ಕರ್ತವ್ಯದಲ್ಲಿ ತೋರುತ್ತಿರುವ ದಕ್ಷತೆಯ ಪರಿಣಾಮ ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಬ್ರೇಕ್ ಬಿದ್ದಿದೆ ಎಂದೇ ಹೇಳಬಹುದು.
ಈಗಾಗಲೇ ಕುಮಾರ ಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಮಟ್ಕಾ ದಂಧೆಗಳಿಗೆ ಬ್ರೇಕ್ ಹಾಕಿದ್ದು ತಮ್ಮ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ಸಂತೋಷ್ ಬಾಗೋಜಿ ಅವರು ಠಾಣಾಧಿಕಾರಿ ಯಾಗಿ ತಮ್ಮ ಪೊಲೀಸ್ ಠಾಣೆಯನ್ನು ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿ ಮಾರ್ಪಡಿಸಿದ್ದಾರೆ. ಜನರು ತಮ್ಮ ಕಷ್ಟವನ್ನು ಹೇಳಿಕೊಂಡು ಇವರ ಬಳಿ ಬಂದರೆ ಇವರು ನಗು ಮುಖವೇ ಅವರ ಅರ್ಧ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿರುತ್ತದೆ. ಸಾಧ್ಯವಾದಷ್ಟು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಪಿಎಸ್ಐ ಸಂತೋಷ್ ಬಾಗೋಜಿ ಅವರು ತಮ್ಮ ಪೊಲೀಸ್ ಠಾಣಾ ಸರಹದ್ದಿನ ಜನರ ನೆಮ್ಮದಿಯ ಬದುಕಿಗೆ ಕಾರಣರಾಗಿದ್ದು ,ಜನರ ಅಚ್ಚುಮೆಚ್ಚಿನ ಠಾಣಾಧಿಕಾರಿ ಎಂಬ ಹೆಸರನ್ನ ಪಡೆದುಕೊಂಡಿದ್ದಾರೆ.
ಸದ್ಯ ಇವರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅಕ್ರಮ ಚಟುವಟಿಕೆಗಳು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ. ಇವರು ತಮ್ಮಲ್ಲಿರುವ ಸಿಬ್ಬಂದಿಗಳ ಸಹಾಯದಿಂದಲೇ ಸಾಧ್ಯವಾದಷ್ಟು ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದು, ಇವರ ಗಮನಕ್ಕೆ ಬಾರದೆ ಅಲ್ಲೊಂದು -ಇಲ್ಲೊಂದು ಅಕ್ರಮ ಚಟುವಟಿಕೆಗಳು ನಡೆಯುತ್ತಿರಬಹುದು .ಆದರೆ ಇದು ಇವರ ಗಮನಕ್ಕೆ ಬಾರದೆ ನಡೆಯುತ್ತಿರುವ ಚಟುವಟಿಕೆಗಳಾಗಿದೆ. ಕಾರಣ ಇವರು ಅತಿ ಹೆಚ್ಚಿನ ಬಂದೋಬಸ್ತ್ ಹೋದ ಸಂದರ್ಭದಲ್ಲಿ ಕೆಲ ಅಕ್ರಮ ಚಟುವಟಿಗಳು ನಡೆಯುತ್ತಿದೆ. ಇವುಗಳೇ ಇವರ ಕರ್ತವ್ಯಕ್ಕೆ ಅಡ್ಡಿಯಾಗುತ್ತಿದೆ. ಕೆಲವರು ಇಂತಹ ಘಟನೆಗಳನ್ನೇ ಮುಂದಿಟ್ಟುಕೊಂಡು ಪಿಎಸ್ಐ ಅವರನ್ನು ಪ್ರಶ್ನಿಸುತ್ತಿದ್ದಾರೆ. ಇವರು ಕೈಗೊಂಡ ಉತ್ತಮ ಕಾರ್ಯಗಳು ಜನರಿಗೆ ಕಾಣದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ.
ಪೋಲಿಸ್ ಇಲಾಖೆ ಅತಿ ಹೆಚ್ಚು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಇಲಾಖೆಯಾಗಿದ್ದು, ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ. ಅಂತಹುದರ ಮಧ್ಯೆ ಸಾಧ್ಯವಾದಷ್ಟು ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಹೊರಟಿರುವ ಅಧಿಕಾರಿಗಳ ಬೆಂಬಲಕ್ಕೆ ಜನಸಾಮಾನ್ಯರು ನಿಲ್ಲಬೇಕಾಗಿದೆ ಅಲ್ಲವೇ?
0 Comments