ದರ್ಗಾ ಮುಂಭಾಗದ ರಸ್ತೆ ಕಾಮಗಾರಿಯನ್ನು ಸೋಮವಾರದ ಒಳಗೆ ಆರಂಭಿಸಿ: ಜಯ ಕರ್ನಾಟಕ ಸಂಘಟನೆಯಿಂದ ಗಡುವು.

ಮಂದಾರ ನ್ಯೂಸ್, ಹರಿಹರ : ಹರಿಹರ ನಗರ ವ್ಯಾಪ್ತಿಗೆ ಬರುವ ಬೀರೂರು - ಸಮಸ್ಸಿಗೆ ಹೆದ್ದಾರಿ ಹಳೆ ಪಿಬಿ ರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಜೋಡಿ ಸೇತುವೆಯ ಸಮೀಪದ ದರ್ಗಾ ಮುಂಬಾಗದ ರಸ್ತೆಯು ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದ್ದು ಈ ರಸ್ತೆಯ ಅಭಿವೃದ್ಧಿ ಕಾಮಗಾರಿಯೂ ವಿಳಂಬದ ಕಾರಣ ಈಗಾಗಲೇ ಅನೇಕ ಅನಾಹುತಗಳು ನಡೆದಿದೆ. 

ಕೂಡಲೇ ಸಂಬಂಧಪಟ್ಟ ಇಲಾಖೆಯವರು ಸೋಮವಾರದ ಒಳಗೆ ಈ ರಸ್ತೆ ಅಭಿವೃದ್ಧಿ  ಕಾಮಗಾರಿಯನ್ನು ಆರಂಭಿಸಬೇಕು, ಇಲ್ಲದಿದ್ದರೆ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಬಾರಿ ವಾಹನಗಳ ಸಂಚಾರಕ್ಕೆ ತಡೆ ನೀಡುವ ಮೂಲಕ ಬೃಹತ್ ರಸ್ತೆ ತಡೆಯನ್ನು ನಡೆಸಬೇಕಾಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಎಸ್ ಗೋವಿಂದ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಇಂದು ಹರಪನಹಳ್ಳಿ ಸರ್ಕಲ್ ನಿಂದ ತಾಲೂಕು ದಂಡಾಧಿಕಾರಿ ಕಚೇರಿಯವರಿಗೆ ಮೌನ ಪ್ರತಿಭಟನೆಯ ಮೂಲಕ ಉಪ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿ ಕೂಡಲೇ ರಸ್ತೆ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆ ನೀಡಬೇಕು ಎಂದು ತಹಸಿಲ್ದಾರ ಅವರಲ್ಲಿ ಮನವಿ ಮಾಡಿಕೊಂಡರು.

ಈಗಾಗಲೇ ಈ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡಿದ್ದು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಎರಡು ಕೋಟಿ ರೂಪಾಯಿ ಅನುದಾನ ದೊರೆತಿದೆ. ದಿನಾಂಕ 23 -2- 2023 ರಂದು ರಸ್ತೆ ಕಾಮಗಾರಿ ಆರಂಭಿಸುವಂತೆ ಆದೇಶಿಸಲಾಗಿದೆ.

ಈ ರಸ್ತೆ ಅಭಿವೃದ್ಧಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಅನುದಾನ ಮಂಜೂರಾತಿ ದೊರೆತಿದ್ದರು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷರಾದ ಎಸ್ ಗೋವಿಂದ ಅವರು ಅಧಿಕಾರಿಗಳ  ನಿರ್ಲಕ್ಷತನಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ರೋಶವನ್ನು ಹೊರ ಹಾಕಿದರು.
ರಾಘವೇಂದ್ರ ಸ್ವಾಮಿ ಮಠದಿಂದ ಕೆಇಬಿ ಕಚೇರಿಯ ವರೆಗಿನ ದುರಸ್ತಿಗೊಂಡಿರುವ ರಸ್ತೆಯಿಂದ ಅನೇಕ ವಾಹನ ಸವಾರರು ಹಾಗೂ ಪಾದಚಾರಿಗಳು ಈಗಾಗಲೇ ಅನೇಕ ರೀತಿಯಲ್ಲಿ ಅನಾಹುತವನ್ನು ಅನುಭವಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಇದೆ ರಸ್ತೆಯಲ್ಲಿ ಬದುಕಿ ಬಾಳಬೇಕಾದ ಬಾಲಕನೊಬ್ಬ ಮೃತಪಟ್ಟಿದ್ದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅಷ್ಟೇ ಯಾಕೆ ಈಗಾಗಲೇ ಅನೇಕ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ತಮ್ಮ ಕೈ- ಕಾಲುಗಳನ್ನ ಮುರಿದುಕೊಂಡ ಘಟನೆಗಳು ನಡೆದಿದೆ. ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ರಾಜಕೀಯದ ಒತ್ತಡದ ಕಾರಣ ಈ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನ ಕೈಗೊಳ್ಳುವಲ್ಲಿ ಮುಂದಾಗುತ್ತಿಲ್ಲ.

ಸದ್ಯ ಈ ರಸ್ತೆಯು ರಾಜಕಾರಣದ ವಸ್ತು ಕೇಂದ್ರವಾಗಿದ್ದು ವಿವಿಧ ಪಕ್ಷದ ನಾಯಕರು ತಮ್ಮಗಳ ಸ್ವಾರ್ಥಕ್ಕಾಗಿ ರಸ್ತೆಯನ್ನ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವು ಸಾರ್ವಜನಿಕರಿಂದ ಆಗಿಂದಾಗ್ಗೆ ಕೇಳಿ ಬರುತ್ತಿದೆ.

ಏನೇ ಹೇಳಿ ಅಭಿವೃದ್ಧಿ ಕಾರಣದ ಈ ರಸ್ತೆಯಿಂದ ಪ್ರತಿದಿನ ವಾಹನ ಸವಾರರು ಮತ್ತು ಪಾದಚಾರಿಗಳು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಇಂದು ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷರು ನೀಡಿರುವ ಗಡುವಿಗೆ ಎಚ್ಚೆತ್ತುಕೊಂಡು ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವಲ್ಲಿ ಮುಂದಾಗುತ್ತಾರೆ ಕಾದು ನೋಡಬೇಕಾಗಿದೆ.

ಕೂಡಲೇ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರು ವಾಹನ ಸವಾರರು ಮತ್ತು ಪಾದಚಾರಿಗಳ ಹಿತದೃಷ್ಟಿಯಿಂದ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಈ ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವಂತೆ ತಾಕಿತ್ತು ಮಾಡಬೇಕಾಗಿದೆ.
ಶಾಸಕರು ಒಂದು ವಿಚಾರವನ್ನ ಗಮನಿಸಬೇಕು ಈ ರಸ್ತೆಯ ವಿಚಾರವನ್ನು ಮುಂದಿಟ್ಟುಕೊಂಡು ತಮ್ಮ ಜನಪ್ರಿಯತೆಗೆ ಧಕ್ಕೆ ತರುವಂತಹ ಪ್ರಯತ್ನಗಳು ಕೆಲ ಇಲಾಖೆ ಅಧಿಕಾರಿಗಳಿಂದ ನಡೆಯುತ್ತಿದೆ. ಕೂಡಲೇ ಈ ರಸ್ತೆಯ ಸೂಕ್ಷ್ಮ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಈ ರಸ್ತೆಯ ಅಭಿವೃದ್ಧಿಯ ಕಾಮಗಾರಿಯನ್ನು ಕೈಗೊಳ್ಳುವ ಮೂಲಕ ತಮ್ಮ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕಾಗಿದೆ.

ಈ ರಸ್ತೆಯ ಅಭಿವೃದ್ಧಿ ಕಾಮಗಾರಿಯ ವಿಳಂಬಕ್ಕೆ ಕ್ಷೇತ್ರದ ಶಾಸಕರು ಅಡ್ಡಿಪಡಿಸುತ್ತಿದ್ದಾರೆ ಎಂಬ ವಿಚಾರವನ್ನ ಕ್ಷೇತ್ರದ ಮತದಾರರ ತಲೆಯಲ್ಲಿ ಕೆಲ ಇಲಾಖೆ ಅಧಿಕಾರಿಗಳು ತುಂಬುತ್ತಿದ್ದಾರೆ ಎಂಬ ಮಾಹಿತಿ ಸಾರ್ವಜನಿಕರಿಂದ ಕೇಳಿ ಬಂದಿದೆ. ಆದ್ದರಿಂದ ತಾವು ಈ ರಸ್ತೆಯ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನ ನಡೆಸುವ ಮೂಲಕ ತಾವು ಮತ್ತೊಮ್ಮೆ ಅಭಿವೃದ್ಧಿಯ ಹರಿಕಾರ ಎಂಬುವುದನ್ನು ಕ್ಷೇತ್ರದ ಮತದಾರರಿಗೆ ತೋರಿಸಿ ಕೊಡುವ ಅನಿವಾರ್ಯತೆ ಒದಗಿ ಬಂದಿದೆ.

ಇಂದಿನ ಜಯ ಕರ್ನಾಟಕ ಸಂಘಟನೆಯ ಹೋರಾಟದಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.

Post a Comment

0 Comments