ಮಂದಾರ ನ್ಯೂಸ್ ,ಹರಿಹರ: ಹರಿಹರ ನಗರದ ರಾಘವೇಂದ್ರ ಸ್ವಾಮಿ ಮಠದಿಂದ ಕೆಇಬಿ ಕಚೇರಿ ವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದು ಈ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯು ಕಳೆದ ಐದು ವರ್ಷದಿಂದ ನಿರಂತರವಾದ ಹೋರಾಟವನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಈ ದಪ್ಪ ಚರ್ಮದ ಬೇಜವಾಬ್ದಾರಿ ಅಧಿಕಾರಿಗಳು ಹೋರಾಟವನ್ನು ನಿರ್ಲಕ್ಷ್ಯ ಮಾಡುತ್ತಲೇ ಇದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಜಯ ಕರ್ನಾಟಕ ಸಂಘಟನೆಯು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ರಸ್ತೆಯ ದುರಸ್ತಿ ಕಾಮಗಾರಿಯನ್ನು ಸೋಮವಾರದ ಒಳಗೆ ಕೈಗೊಳ್ಳುವಂತೆ ಗಡುವು ನೀಡಿದ್ದರು.
ಜಯ ಕರ್ನಾಟಕ ಸಂಘಟನೆಯು ನೀಡಿದ ಗಡುವು ಇಂದಿಗೆ ಮುಗಿದಿದ್ದು, ಅಧಿಕಾರಿಗಳು ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳದೆ ಇರುವ ಕಾರಣ ನಾಳೆ ಬೆಳಗ್ಗೆ ಸಂಘಟನೆಯ ಕಾರ್ಯಕರ್ತರು ನಗರದ ಲೋಕೋಪಯೋಗಿ ಇಲಾಖೆಯ ಮುಂಭಾಗದ ದುರಸ್ತಿಗೊಂಡಿರುವ ರಸ್ತೆ ಮಧ್ಯೆ ಬೃಹತ್ ರಸ್ತೆಡೆಯನ್ನು ನಡೆಸಲಿದ್ದಾರೆ.
ಇದಕ್ಕೂ ಮೊದಲು ನಗರದ ಮಧ್ಯ ಇರುವ ಊರಮ್ಮ ದೇವಸ್ಥಾನದ ದೇವಿಗೆ 101 ಇಡಿಗಾಯಿ ಸೇವೆಯನ್ನ ಸಲ್ಲಿಸಿ ನಂತರ ಲೋಕೋಪಯೋಗಿ ಇಲಾಖೆಯವರೆಗೆ ರಸ್ತೆ ಉದ್ದಕ್ಕೂ ದೀರ್ಘ ನಮಸ್ಕಾರ ದೊಂದಿಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಿದ್ದು, ತದನಂತರ ಲೋಕೋಪಯೋಗಿ ಇಲಾಖೆ ಮುಂಬಾಗ ಹದಗೆಟ್ಟಿರುವ ರಸ್ತೆಯ ಮಧ್ಯದಲ್ಲಿ ನಡೆಸುತ್ತಿದ್ದಾರೆ.
ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ನಾಳೆಯ ಹೋರಾಟ ಜನಸಾಮಾನ್ಯರ ಪರವಾಗಿದ್ದು, ವಾಹನ ಸವಾರರು, ಪಾದಾಚಾರಿಗಳು, ಪ್ರಜ್ಞಾವಂತ ನಾಗರಿಕರು ವಿವಿಧ ಸಂಘಟನೆಯ ಕಾರ್ಯಕರ್ತರು ಬೆಂಬಲ ನೀಡುವ ಮೂಲಕ ಇವರ ಹೋರಾಟಕ್ಕೆ ಕೈಜೋಡಿಸುವ ಅನಿವಾರ್ಯತೆ ಇದೆ.
ಇದು ಅಂತಿಮ ಹೋರಾಟವಾಗಿದ್ದು ,ವಾಹನ ಸವಾರರು ಹಾಗೂ ಪಾದಚಾರಿಗಳು ಮತ್ತು ನಗರದ ನಾಗರಿಕರು ಹದಗೆಟ್ಟಿರುವ ರಸ್ತೆಯಿಂದ ಸಾವು- ನೋವುಗಳನ್ನ ಅನುಭವಿಸುತ್ತಿದ್ದು ,ಅವರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದಾರೆ ಎಂಬುದನ್ನ ನೆನಪಿಟ್ಟುಕೊಂಡು ಅವರ ಹೋರಾಟವನ್ನ ಬೆಂಬಲಿಸುವ ಮೂಲಕ ನಾಗರಿಕರು ತಮ್ಮ ಜವಾಬ್ದಾರಿಯನ್ನ ನಿಭಾಯಿಸಬೇಕಾಗಿದೆ.
ನಗರ ಸಭೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಮಾಜಿ ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ಪಕ್ಷದ ಮುಖಂಡರು ನಾಳಿನ ಹೋರಾಟದಲ್ಲಿ ಪಾಲ್ಗೊಂಡು ಹದಗೆಟ್ಟಿರುವ ರಸ್ತೆ ಕಾಮಗಾರಿಯನ್ನ ಕೂಡಲೇ ಆರಂಭಿಸುವಂತೆ ಒತ್ತಾಯಿಸುವ ಮೂಲಕ ಮತದಾರರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನ ಉಳಿಸಿಕೊಳ್ಳುವಂತೆ ಈ ಮೂಲಕ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷರು ಮನವಿ ಮಾಡಿಕೊಂಡಿದ್ದಾರೆ.
ನಾಳಿನ ಹೋರಾಟದಲ್ಲಿ ಯಾರೆಲ್ಲಾ ಬೆಂಬಲ ನೀಡುತ್ತಾರೆ ಎಂಬುದರ ಮೇಲೆ ರಸ್ತೆ ಅಭಿವೃದ್ಧಿ ಕಾಮಗಾರಿ ನಿಂತಿದೆ. ಕೇವಲ ಉಪಯೋಗಕ್ಕೆ ಬಾರದ ಮಾತುಗಳನ್ನಾಡುತ್ತಾ ಸಮಯವನ್ನು ವ್ಯರ್ಥ ಮಾಡುವ ಬದಲು ನಾಳೆಯ ಹೋರಾಟದಲ್ಲಿ ಪಕ್ಷಾತೀತವಾಗಿ ಪಾಲ್ಗೊಂಡು ನಾಗರೀಕರ ಹಿತವನ್ನ ಕಾಪಾಡುವತ್ತ ತಮ್ಮ ಜವಾಬ್ದಾರಿಗಳನ್ನ ನಿಭಾಯಿಸಿ ಎಂಬುವುದೇ ನಮ್ಮ ಮಾಧ್ಯಮದ ಆಶಯವಾಗಿದೆ.
0 Comments