ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹರಿಹರ ತಾಲೂಕು ಘಟಕದ ಪದಾಧಿಕಾರಿಗಳಿಂದ ನೂತನ ತಹಶೀಲ್ದಾರ್ ಅವರಿಗೆ ಗೌರವ - ಸನ್ಮಾನ.



ಮಂದಾರ, ನ್ಯೂಸ್ ,ಹರಿಹರ: ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ 100/2012-13. ಹರಿಹರ ತಾಲೂಕು ಘಟಕದ ಪದಾಧಿಕಾರಿಗಳು ಇಂದು ಹರಿಹರ ನಗರಕ್ಕೆ ನೂತನವಾಗಿ ಬಂದಿರುವ ತಾಲೂಕ್ ದಂಡಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಗುರು ಬಸವರಾಜ್ ಇವರನ್ನು ಸಂಘಟನೆಯ ಕಾರ್ಯಕರ್ತರು ಗೌರವಿಸಿ ಸನ್ಮಾನಿಸಿದರು.

ನಂತರ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು ನೂತನ ತಾಲೂಕ್ ದಂಡಾಧಿಕಾರಿಗಳು ತಾಲೂಕಿನ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡುವ ಉದ್ದೇಶದಿಂದ ಹರಿಹರದ ತಾಲೂಕ್ ಯಂತ್ರವನ್ನು ಚುರುಕುಗೊಳಿಸಬೇಕು. ಜನಸಾಮಾನ್ಯರಿಗೆ ಸರ್ಕಾರದಿಂದ ಸಿಗುವ ಮೂಲಭೂತ ಸೌಲಭ್ಯವನ್ನು ಅವರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸವನ್ನು ಮಾಡಬೇಕು ಇದರ ಜೊತೆಗೆ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆಯನ್ನ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಾದ ಜಿಎಂ ಮಂಜುನಾಥ್, ಮಂಜುನಾಥ್, ವಿಶ್ವನಾಥ್ ಬೇವಿನಹಳ್ಳಿ, ಹರೀಶ್, ಭಾಸ್ಕರ್ ಉಪಸ್ಥಿತರಿದ್ದರು.

Post a Comment

0 Comments