ಮಂದಾರ ನ್ಯೂಸ್ ದಾವಣಗೆರೆ : ಜಗಳೂರು ತಾಲೂಕಿಗೆ ಸಂಬಂಧಿಸಿದ ಭೂ ದಾಖಲೆಯ ಅಧಿಕಾರಿಯನ್ನು ಬೇಟೆಯಾಡುವಲ್ಲಿ ಲೋಕಾಯುಕ್ತರು ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ದೊಡ್ಡ ತಿಮಿಂಗಲವನ್ನು ತಮ್ಮ ಬಲೆಗೆ ಬಿಳಿಸುವಲ್ಲಿ ಇಂದು ಯಶಸ್ವಿಯಾಗಿದ್ದಾರೆ.
ಜಗಳೂರು ತಾಲೂಕು ಪಲ್ಲಾಗಟ್ಟೆ ಗ್ರಾಮದ ರಿಜಿಸ್ಟರ್ ಸರ್ವೇ ನಂಬರ್ 65/7 ರಲ್ಲಿ 12 ಗುಂಟೆ ಜಮೀನಿನ ಚೆಕ್ ಬಂದಿ ಮತ್ತು ಪೋಡು ನಂಬರ್ ಅದಲು ಬದಲಾಗಿರುವುದನ್ನು ಸರಿಪಡಿಸಿಕೊಡಲು ಭೂ ದಾಖಲೆಯ ಅಧಿಕಾರಿ ಕೇಶವಮೂರ್ತಿ ಅವರಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ಕೇಶವ್ ಮೂರ್ತಿಯವರು ಮುನಿಯಪ್ಪ ಇವರ ಹೆಸರಿನಲ್ಲಿರುವ ಜಮೀನಿನ ಲೋಪವನ್ನ ಸರಿಪಡಿಸಿಕೊಡಲು 40,000 ಹಣಕ್ಕೆ ಬೇಡಿಕೆಯನ್ನು ಇಟ್ಟಿರುತ್ತಾರೆ. ಮುನಿಯಪ್ಪನವರು 40,000 ಕೊಡಲು ಆಗುವುದಿಲ್ಲ ಎಂದು ತಿಳಿಸಿರುತ್ತಾರೆ. ಆದರೆ ಫಲಾನುಭವಿ ಅಷ್ಟು ಕೊಡಲು ಸಾಧ್ಯವಿರೋದಿಲ್ಲ ಕೊನೆಯದಾಗಿ ಭೂ ದಾಖಲೆಯ ಅಧಿಕಾರಿ ಕೇಶವಮೂರ್ತಿ ಅವರು ಮುನಿಯಪ್ಪ ಅವರಿಗೆ ರೂ.30000 ಲಂಚದ ಹಣ ನೀಡಿದರೆ ನಿಮ್ಮ ಕೆಲಸವನ್ನು ಮಾಡಿಕೊಡುತ್ತೇನೆ ಎಂಬ ಬೇಡಿಕೆಯನ್ನ ಇಡುತ್ತಾರೆ.
ಮುನಿಯಪ್ಪನವರು ಕೇಶವಮೂರ್ತಿ ಅವರ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದ ಕಾರಣ ಇಂದು ದಾವಣಗೆರೆ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿರುತ್ತಾರೆ.
ಮುನಿಯಪ್ಪ ಇವರ ದೂರಿನ ಆಧಾರದ ಮೇಲೆ ದಾವಣಗೆರೆ ಲೋಕಾಯುಕ್ತರು ತಮ್ಮ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆಯನ್ನು ದಾಖಲಿಸಿಕೊಂಡಿರುತ್ತಾರೆ
ಭೂ ದಾಖಲೆಯ ಅಧಿಕಾರಿ ಕೇಶವಮೂರ್ತಿ ಅವರು ಇಂದು ಸಂಜೆ 4 ಗಂಟೆಗೆ ದಾವಣಗೆರಿ ಜಿಲ್ಲಾಧಿಕಾರಿಗಳ ಕಚೇರಿಯ ಕಾರ್ಯಾಲಯದಲ್ಲಿ ಪಿರ್ಯಾದಾರರಿಂದ ಮುಂಗಡವಾಗಿ 5000 ರೂಪಾಯಿ ಲಂಚದ ಹಣವನ್ನ ಪಡೆಯುವಂತಹ ಸಂದರ್ಭದಲ್ಲಿ ದಾವಣಗೆರೆ ಲೋಕಾಯುಕ್ತರು ಟ್ರ್ಯಾಪ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸುವ ಲೋಕಾಯುಕ್ತರು ದೊಡ್ಡ ತಿಮಿಂಗಳ ಒಂದನ್ನ ತಮ್ಮ ಬಳೆಗೆ ಕೆಡುವುಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿಯ ವಿರುದ್ಧ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ 19/2023 ಕಲಂ 7(a) ಪಿಸಿ ಆಕ್ಟ್ 1988 (ತಿದ್ದುಪಡಿ ಕಾಯ್ದೆ 2018 )ರಿತ್ಯಾ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಂದಿನ ಯಶಸ್ವಿ ಕಾರ್ಯಾಚರಣೆಯನ್ನು ಲೋಕಾಯುಕ್ತ ಅನಕ್ಷಕರಾದ ಶ್ರೀ ಎಂ ಎಸ್ ಕೌಲಾಪುರೆ ಇವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ರೀ ಎಚ್.ಎಸ್ ರಾಷ್ಟ್ರಪತಿ ಮತ್ತು ಶ್ರೀ ಮಧುಸೂದನ್ ಸಿ, ಶ್ರೀ ಪ್ರಭು ಬ ಸೂರಿನ ಹಾಗೂ ಸಿಬ್ಬಂದಿಗಳಾದ ಶ್ರೀ ವೀರೇಶಯ, ಮಲ್ಲಿಕಾರ್ಜುನ್, ಧನರಾಜ್, ಗಿರೀಶ್, ಕೋಟಿ ನಾಯ್ಕ ,ಕೃಷ್ಣ ನಾಯ್ಕ, ಬಸವರಾಜ್ ರವರಗಳು ದಾಳಿ ಮಾಡಿ ಆರೋಪಿ ಕೇಶವಮೂರ್ತಿ ಅವರನ್ನ ಟ್ರ್ಯಾಪ್ ಮಾಡಿ ವಶಕ್ಕೆ ಪಡೆದು ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ.
0 Comments