ಮಂದಾರ ನ್ಯೂಸ್ ಹರಿಹರ: ಹರಿಹರ ತಾಲೂಕ್ ದಂಡಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೃಥ್ವಿ ಸಾನಿಕಂ ಇವರು ವರ್ಗಾವಣೆಯಾಗಿದ್ದು, ಇವರ ಜಾಗಕ್ಕೆ ಗುರು ಬಸವರಾಜ್ ಅವರು ನಿಯೋಜನೆಗೊಂಡಿದ್ದಾರೆ.
ಪೃಥ್ವಿಸಾನಿಕಂ ಇವರನ್ನು ಬೆಳ್ತಂಗಡಿಗೆ ವರ್ಗಾವಣೆ ಮಾಡಲಾಗಿದ್ದು ಗುರು ಬಸವರಾಜ್ ಅವರನ್ನು ಪೃಥ್ವಿ ಸಾನಿಕಂ ಇವರಿಂದ ತೆರವಾಗಿರುವ ಸ್ಥಾನಕ್ಕೆ ತಂದು ಕುರಿಸಲಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಗುರು ಬಸವರಾಜ್ ಅವರು ಹರಿಹರ ತಾಲೂಕ್ ದಂಡಾಧಿಕಾರಿಗಳಾಗಿ ಒಂದು ದಿನದ ಮಟ್ಟಿಗೆ ಅಧಿಕಾರವನ್ನು ವಹಿಸಿಕೊಂಡಿದ್ದರು. ತದನಂತರ ಪೃಥ್ವಿ ಸಾನಿಕಂ ಅವರು ಸರ್ಕಾರಿ ನೌಕರರ ಕೋರ್ಟ್ನಲ್ಲಿ ವರ್ಗಾವಣೆಗೆ ತಡೆ ತರುವ ಮೂಲಕ ಮತ್ತೆ ಹರಿಹರ ತಾಲೂಕು ದಂಡಾಧಿಕಾರಿಗಳಾಗಿ ಮುಂದುವರೆದಿದ್ದರು. ಇದೀಗ ಮತ್ತೆ ಗುರು ಬಸವರಾಜ್ ಅವರು ಹರಿಹರ ತಾಲೂಕ್ ದಂಡಾಧಿಕಾರಿಗಳಾಗಿ ಸೋಮವಾರ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ.
ಪೃಥ್ವಿ ಸಾನಿಕಂ ಅವರೇ ಬೆಳ್ತಂಗಡಿ ತಾಲೂಕಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಬಲಮೂಲಗಳಿಂದ ಲಭ್ಯವಾಗಿದೆ.
ಸೋಮವಾರ ಗುರು ಬಸವರಾಜ್ ಇವರಿಗೆ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ.
0 Comments