ಬಿಪಿ ಹರೀಶ್ ಗುಡುಗಿದರೆ ಆಡಳಿತ ಯಂತ್ರ ನಡುಗುವುದು.!!

ಹರಿಹರ ನ್ಯೂಸ್: ಕರ್ನಾಟಕದಲ್ಲಿ ಯಡಿಯೂರಪ್ಪನವರು ಗುಡುಗಿದ್ದರೆ ವಿಧಾನಸೌಧ ನಡುಗುತ್ತದೆ ಎಂಬ ಮಾತು ನಾವು ಕೇಳಿದ್ದೇವೆ. ಅದೇ ರೀತಿ ಹರಿಹರದ ಸಮಗ್ರ ಅಭಿವೃದ್ಧಿಗೆ ಕ್ಷೇತ್ರದ ಶಾಸಕರಾದ ಬಿಪಿ ಹರೀಶ್ ಗುಡುಗಿದರೆ ಇಡೀ ಆಡಳಿತ ಯಂತ್ರ ನಡುಗುತ್ತದೆ.

ಸರ್ಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಬೇಜವಾಬ್ದಾರಿ ಅಧಿಕಾರಿಗಳಿಂದ ಜನಸಾಮಾನ್ಯರ ಕೆಲಸ- ಕಾರ್ಯಗಳು ನಿಗದಿತ ಸಮಯದಲ್ಲಿ ಆಗಬೇಕಾದರೆ ಬಿಪಿ ಹರೀಶ್ ಅವರು ಗುಡುಗಲೇಬೇಕು .ಅವರು ಗುಡುಗಿದರೆ ಮಾತ್ರ ಆಡಳಿತ ಯಂತ್ರ ನಡುಗಲು ಸಾಧ್ಯ. 

ಕೆಲವರಿಗೆ ಬಿಪಿ ಹರೀಶ್ ಗುಡುಗಿದರೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ . ಬೇಜವಾಬ್ದಾರಿ ಅಧಿಕಾರಿಗಳನ್ನು ಎಚ್ಚರಿಸುವ ಉದ್ದೇಶದಿಂದ ಅವರು ಗುಡುಗಿದ ಮಾತುಗಳು ಕೆಲವರಿಗೆ ಅವ್ಯಾಚ ಶಬ್ದಗಳಿಂದ ಕೂಡಿರುವಂತೆ ಕೇಳಿಸುತ್ತದೆ. ಪಾಪ ಅವರಿಗೆ ಅವ್ಯಾಚ ಶಬ್ದ ಎಂದರೆ ಏನು ಎಂಬುದೇ ಗೊತ್ತಿರುವುದಿಲ್ಲ.

ಕಳೆದ ಎರಡು ದಿನಗಳ ಹಿಂದೆ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿಪಿ ಹರೀಶ್ ಅವರು ಲೋಕೋಪಯೋಗಿ ಇಲಾಖೆಯ ಇಇ ಇವರನ್ನು ತಮ್ಮ ಮಾತಿನ ಮೂಲಕ ತರಾಟೆಗೆ ತೆಗೆದುಕೊಂಡಿದ್ದರು. 

ನಾನು ಇಲ್ಲದ ಸಂದರ್ಭದಲ್ಲಿ ಸದನದ ಕಲಾಪದಲ್ಲಿ ಭಾಗವಹಿಸಿದಾಗ ತಾವುಗಳು ನನ್ನ ಗಮನಕ್ಕೆ ತಾರದೆ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದೀರಾ. ಅಭಿವೃದ್ಧಿ ಕಾರ್ಯ ನಡೆಯಬೇಕು ಎಂಬುದು ನಮ್ಮ ಬಹುದಿನದ ಬೇಡಿಕೆಯಾಗಿದೆ. ಅದಕ್ಕಾಗಿ ಕಳೆದ ಐದಾರು ವರ್ಷದಿಂದ ನಿರಂತರವಾದ ಪ್ರಯತ್ನವನ್ನು ಮಾಡಿದ್ದೇನೆ. ನಾನು ಶಾಸಕನಾಗಿರದ ಸಂದರ್ಭದಲ್ಲಿ ಅಂದಿನ ಶಾಸಕರು ನಮ್ಮ ಹೋರಾಟಕ್ಕೆ ಸಹಕಾರ ನೀಡಿರಲಿಲ್ಲ. ಇಂದು ನಾನು ಕ್ಷೇತ್ರದ ಶಾಸಕನಾಗಿದ್ದೇನೆ ನಾನು ಶಾಸಕನಾಗಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ. ಹಾಗಾಗಿ ನಾನು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ನಾನು ಇರುವಂತಹ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲಿ ಕೈಗೊಳ್ಳುವಂತೆ ತಿಳಿಸಿದ್ದೇನೆ.
ಈ ಹಿಂದೆಯೂ ಸಹ ತಾಲೂಕ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಯಾವುದೇ ರೀತಿಯಲ್ಲಿ ಅನ್ಯ ಧರ್ಮದ ಕಟ್ಟಡಗಳಿಗೆ ಹಾನಿಯಾಗದ ರೀತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಿ, ಗುದ್ದಲಿ ಪೂಜೆಗೆ ಎಲ್ಲವನ್ನು ತಯಾರಿ ಮಾಡಿಕೊಳ್ಳಿ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇದರ ಜೊತೆಗೆ ತಾಲೂಕು ಪಂಚಾಯಿತಿ ಸಭಾಂಗಣದ ತ್ರೈಮಾಸಿಕ ಪ್ರಗತಿ ಪರಿಶೀಲನ ಸಂದರ್ಭದಲ್ಲಿ ಗುದ್ದಲಿ ಪೂಜೆಗೆ ತಯಾರಿ ಮಾಡಿಕೊಳ್ಳುವಂತೆ ಅಧಿಕಾರಿಗೆ ತಿಳಿಸಿದ್ದೆ. ಆದರೆ ಅವರ್ಯಾರು ನಾನು ತಿಳಿಸಿದಂಥ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಮುಂದಾಗಲಿಲ್ಲ.

ದುರಸ್ತಿಗೊಂಡಿರುವ ರಸ್ತೆಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಅನೇಕ ರೀತಿಯಲ್ಲಿ ಅನಾಹುತಗಳನ್ನು ಅನುಭವಿಸಿದ ಕಾರಣ ಮತ್ತು ಸಂಘಟನೆಯ ಕಾರ್ಯಕರ್ತರು ಇದನ್ನು ಹತ್ತಿರದಿಂದ ಕಂಡ ಕಾರಣ ಅವರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.

ಸಂಘಟನೆಯ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸುತ್ತಿರುವ ಪ್ರತಿಫಲವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಚುರುಕು ಮುಟ್ಟಿದೆ.ಸಂಘಟನೆಯ ಕಾರ್ಯಕರ್ತರ ಪ್ರಬಲವಾದ ಹೋರಾಟದಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಅನುದಾನದ ಮಾಹಿತಿಯು ಹೊರಬಿದ್ದಿದೆ. ಕೂಡಲೇ ಸರ್ಕಾರದಿಂದ ಮಂಜೂರಾದ ಅನುದಾನದಂತೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಿ ಎಂಬುವುದು ಸಂಘಟನೆಯ ಕಾರ್ಯಕರ್ತರ ಆಗ್ರಹವಾಗಿದೆ.
ಸಂಘಟನೆಯ ಕಾರ್ಯಕರ್ತರ ಹೋರಾಟಕ್ಕೆ ಬೆದರಿದ ಅಧಿಕಾರಿಗಳು ತರಾತುರಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿದ್ದಾರೆ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಂದಾಗಿರುವುದು ತಪ್ಪಲ್ಲ. ಆದರೆ ನಾನು ಇಲ್ಲದಂತ ಸಂದರ್ಭದಲ್ಲಿ ನನ್ನ ಗಮನಕ್ಕೆ ತಾರದೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು ಮತ್ತು ಗುದ್ದಲಿ ಪೂಜೆ ನಡೆಸದೆ ಕಾಮಗಾರಿ ಆರಂಭಿಸಿದ್ದು ತಪ್ಪು. ಇದನ್ನು ಪ್ರಶ್ನೆ ಮಾಡುವ ಸಂಬಂಧ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದೇವೆ ವಿನಹ ಬೇರೆ ಇನ್ಯಾವ ಉದ್ದೇಶವು ಹೊಂದಿರುವುದಿಲ್ಲ.

ಒಬ್ಬ ಚುನಾಯಿತ ಜನಪ್ರತಿನಿಧಿಯಾಗಿ ತನ್ನ ಕರ್ತವ್ಯವನ್ನ ನಿಭಾಯಿಸುವ ಸಂದರ್ಭದಲ್ಲಿ ಮತ್ತು ಸುಗಮ ಆಡಳಿತ ನೀಡುವ ದೃಷ್ಟಿಯಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಮಾತ್ರ ಜನಸಾಮಾನ್ಯರ ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಆಗಲು ಸಾಧ್ಯವಾಗುತ್ತದೆ. ಆದರೆ ಕೆಲವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಚಾರವನ್ನೇ ಮುಂದಿಟ್ಟುಕೊಂಡು ನಾನು ಅಧಿಕಾರಿಗಳಿಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿದ್ದೇನೆ ಅವರ ಮೇಲೆ ದರ್ಪ ತೋರುದ್ದೇನೆ ಎಂದು ಹೇಳುವುದು ಸರಿಯಲ್ಲ.

ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಬೇಕಾದರೆ ನಾವು ಅವರ ಮೇಲೆ ಗುಡುಗಬೇಕಾಗುತ್ತದೆ. ಗುಡುಗುವು ಮಾತುಗಳು ಕೆಲವರಿಗೆ ಅವ್ಯಾಚ್ಚ ಶಬ್ದದಿಂದ  ಮತ್ತೊಬ್ಬರಿಗೆ ಕೇಳಿಸುತ್ತದೆ ಎಂದರೆ ಅದು ನನ್ನ ತಪ್ಪಲ್ಲ.

ಕಳೆದ ಎರಡು ದಿನಗಳ ಹಿಂದೆ ಕೆಇಬಿ ಕಚೇರಿಯಿಂದ ತುಂಗಭದ್ರ ಹೊಸ ಸೇತುವೆಯವರೆಗೆ ನೆನೆಗುದ್ದಿಗೆ ಬಿದ್ದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಅವರ ವರ್ತನೆಗೆ ಸಂಬಂಧಿಸಿದಂತೆ ನಾನು ಜನರ ಧ್ವನಿಯಾಗಿ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದೇನೆ ಇದು ನನ್ನ ಜವಾಬ್ದಾರಿ. ಆ ಜವಾಬ್ದಾರಿಯನ್ನ ನಿಭಾಯಿಸುವ ಬರದಲ್ಲಿ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದೇನೆ. ತರಾಟೆಗೆ ತೆಗೆದುಕೊಳ್ಳುವ ಹಿಂದಿನ ಉದ್ದೇಶ ಅಧಿಕಾರಿಗಳು ಎಚ್ಚೆತ್ತುಕೊಂಡು ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಬೇಕು ಮತ್ತು ತಾಲೂಕಿನಲ್ಲಿ ಯಾವುದೇ ರೀತಿಯ ಸಂಘರ್ಷಕ್ಕೆ ಆಸ್ಪದ ಕೊಡದ ರೀತಿಯಲ್ಲಿ ಎಲ್ಲರಿಗೂ ಒಪ್ಪುವ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಉದ್ದೇಶ ಹೊಂದಿದೆ. ಆದರೆ ಕೆಲವರು ನನ್ನ ಮಾತುಗಳನ್ನು ತಿರುಚುವ ಪ್ರಯತ್ನದಲ್ಲಿ ನಾನು ಅವ್ಯಾಚ್ಚ ಶಬ್ದದಿಂದ ನಿಂದಿಸಿದ್ದೇನೆ ಎಂದು ನನ್ನನ್ನು ತೇಜೋದೆ ಮಾಡಲು ಹೊರಟಿದ್ದಾರೆ. ಒಂದು ಮಾತು ನೆನಪಿರಲಿ ನಾನು ಗುಡುಗಿದರೆ ಆಡಳಿತ ಯಂತ್ರ ನಡುಗುತ್ತದೆ ಇಲ್ಲದಿದ್ದರೆ ಆಡಳಿತ ಯಂತ್ರ ದುರ್ಬಲಗೊಳ್ಳುತ್ತದೆ. ಆಡಳಿತ ಯಂತ್ರ ಚುರುಕಾಗಿ ಕೆಲಸ ಮಾಡಬೇಕಾದರೆ ನಾನು ಗುಡುಗಲೇ ಬೇಕು .ಗುಡುಗುವ ವಿಚಾರದಲ್ಲಿ ಏನೇ ಅಡೆ-ತಡೆ ಬಂದರೂ ಅದರ ಬಗ್ಗೆ ತಲೆಕೆಡಿಸುವ ವ್ಯಕ್ತಿ ನಾನಲ್ಲ.

ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತೇವೆ .ಕಾಮಗಾರಿ ಆಗುತ್ತದೆ .ಆದರೆ ಕೆಲವರಿಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಆಗಬೇಕು ಎಂದು ಜನರ ಮುಂದೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಹಿಂದಗಡೆ ತಮ್ಮ ಆಟವನ್ನು ಆಡುತ್ತಿದ್ದಾರೆ ಇದೆಲ್ಲವನ್ನು ನಾನು ಅರ್ಥೈಸಿಕೊಂಡಿದ್ದೇನೆ.
ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಯಾರಿಗೂ ನೋವಾಗದ ರೀತಿಯಲ್ಲಿ ಒಂದು ಒಳ್ಳೆಯ ತೀರ್ಮಾನವನ್ನು ತೆಗೆದುಕೊಂಡು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳುವ ಮೂಲಕ ಸಂಘಟನೆಗಳ ಹೋರಾಟಕ್ಕೆ ಬೆಲೆ ನೀಡುವ ಉದ್ದೇಶ ಹೊಂದಿದ್ದೇನೆ. 

ಇದು ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರ ಉದ್ದೇಶವಾಗಿತ್ತು. ಆದರೆ ಕೆಲವರು ಅವರು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಗುಡುಗಿದ ಮಾತುಗಳನ್ನೇ ತಿರುಚುವ ಪ್ರಯತ್ನದಲ್ಲಿ ಅವರನ್ನ ಹಾಗೂ ಅವರ ಸಿಂಹ ಘರ್ಜನೆಯನ್ನ ಅಡಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇದರಲ್ಲಿ ಅವರು ಯಶಸ್ಸು ಕಾಣಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರು ಸತ್ಯ ಒಂದಲ್ಲ ಒಂದು ದಿನ ಗೊತ್ತಾಗುತ್ತದೆ .ಧರ್ಮ ಗೆದ್ದೇ ಗೆಲ್ಲುತ್ತದೆ.

Post a Comment

0 Comments