ಶೋಕಿ ಮಾಮಾ ತಗ್ಲಾಕೊಂಡ....!

ಮಂದಾರ ನ್ಯೂಸ್, ಹರಿಹರ : ಹರಿಹರ ನಗರ ಠಾಣೆಯ ಪೊಲೀಸ್ ಪೇದೆ ತನ್ನ ಶೋಕಿ ಜೀವನಕ್ಕಾಗಿ ಆರೋಪಿಯಿಂದ ಹಣವನ್ನು ಪಡೆಯುವ ಮೂಲಕ ತನ್ನ ನಿಜ ಬಣ್ಣವನ್ನು ತಾನೇ ಬಯಲು ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಶೋಕಿ ಪೋಲಿಸ್ ಮಾಮಾ ಕಮ್ಮಿ ಇಲ್ಲ. ಶೋಕಿ ಜೀವನಕ್ಕಾಗಿ ಯಾರ ತಲೆಯನ್ನು ಬೇಕಾದರೂ ಹಿಡಿಯುತ್ತಾನೆ. ಈ ಪೊಲೀಸಪ್ಪ ತಾನು ಶೋಕಿ ಮಾಡಿಕೊಳ್ಳುವ ಬರದಲ್ಲಿ ಆರೋಪಿಯಿಂದ ಲಂಚದ ರೂಪದಲ್ಲಿ ಹಣ ಪಡೆದು ಇಲಾಖೆಯ ಗೌರವವನ್ನು ಬೀದಿ ಪಾಲು ಮಾಡಿದ್ದಾನೆ.
ಈ ಶೋಕಿ ಮಾಮಾ ಆರೋಪಿಯಿಂದ ಲಂಚದ ರೂಪದಲ್ಲಿ ಹಣ ಪಡೆದುಕೊಂಡಿದ್ದಲ್ಲದೆ ಆರೋಪಿಯ ಅಕೌಂಟಿನಲ್ಲಿರುವ ಹಣವನ್ನ ಫೋನ್ ಪೇ ಮೂಲಕ ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದಾನೆ. ಅಲ್ಲಿಗೆ ಈ ಶೋಕಿ ಮಾಮ ಹಣ ಪಡೆದಿದ್ದು ಸತ್ಯ ಎಂದಾಯಿತು. ಹರಿಹರ ನಗರ ಪೊಲೀಸ್ ಠಾಣಾಧಿಕಾರಿಗಳು ಇದನ್ನು ಒಪ್ಪಿಕೊಂಡು ತಮ್ಮ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ತಿಳಿಸಿರುತ್ತಾರೆ.

ಮಾನ್ಯ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಂಪೂರ್ಣ ವರದಿಯ ಆಧಾರದ ಮೇಲೆ ಪೊಲೀಸ್ ಪೇದೆ, ಮಂಜುನಾಥ್ ಬಿವಿ ಇವರನ್ನು ಅಮಾನತ್ತು ಮಾಡಿರುತ್ತಾರೆ. ಅಂದರೆ ಇವರು ಹಣ ಪಡೆದಿದ್ದು ನಿಜ ಎಂದಾಯಿತು. ಕೇವಲ ಕರ್ತವ್ಯದಿಂದ ಅಮಾನತ್ತು ಮಾಡಿದರೆ ಸಾಕೇ? ಇವನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಬೇಕಿತ್ತು ಅಲ್ಲವೇ? ಇವರು ಸಹ ಆರೋಪಿ ಸ್ಥಾನದಲ್ಲೇ ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಬೇಕಿತ್ತು ಅಲ್ಲವೇ? ನ್ಯಾಯಾಲಯ ಈ ದೇಶದ ಕಾನೂನಿನ ಅನ್ವಯ ಇವರಿಗೆ ಶಿಕ್ಷೆ ಅಥವಾ ವಿಚಾರಣೆಗೆ ಅಥವಾ ನ್ಯಾಯಾಂಗ ಬಂಧನ ಇಲ್ಲ ಪೊಲೀಸ್ ಕಸ್ಟಡಿ ಒಪ್ಪಿಸಬೇಕಿತ್ತು ಅಲ್ಲವೇ? ಆದರೆ ಇದು ಯಾವುದೂ ಆಗಲಿಲ್ಲ. ಕೇವಲ ಇವರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ ಮತ್ತು ಈ ವ್ಯಕ್ತಿ ಯಾವುದೇ ಜಾಮೀನು ಪಡೆದಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ ಇದು ಎಷ್ಟರಮಟ್ಟಿಗೆ ಸತ್ಯವೋ ಗೊತ್ತಿಲ್ಲ.
ಈ ಶೋಕಿ ಮಾಮ ಏನೂ ನಡೆದೇ ಇಲ್ಲ ಎನ್ನುವಂತೆ ಅದೇ ಆರೋಪಿಯ ಸಂಬಂಧಿಕರ ಮುಂದೆ ಶೋಕಿ ಮಾಡಿಕೊಂಡು ತಿರ್ಗಾಡುತ್ತಿದ್ದ. ಹಾಗಾದರೆ ಜನಸಾಮಾನ್ಯರಿಗೊಂದು ಕಾನೂನು , ಸರ್ಕಾರಿ ಅಧಿಕಾರಿಗಳಿಗೊಂದು ಕಾನೂನು  ಈ ದೇಶದಲ್ಲಿ ಇದೆ ಎಂದಾಯಿತಲ್ಲವೇ?

ಪೋಲಿಸ್ ಇಲಾಖೆ ತಮ್ಮ ಸಿಬ್ಬಂದಿಗಳ ರಕ್ಷಣೆಯನ್ನು ಯಾವ ರೀತಿ ಮಾಡಿಕೊಳ್ಳುತ್ತದೆ ಎಂಬುದಕ್ಕೆ ತಾಜಾ ಉದಾಹರಣೆ ಚಿಕ್ಕಮಂಗಳೂರಿನಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಬಹುದಲ್ಲವೇ?  ಇದರ ಜೊತೆಗೆ ಹರಿಹರದ ಪೊಲೀಸ್ ಕಾನ್ಸ್ಟೇಬಲ್ ವಿಚಾರದಲ್ಲೂ ಅದೇ ಆಗಿದೆ.

ಇದೇನಿದು ಮಂದಾರ ನ್ಯೂಸ್ ವೆಬ್ ಪೋರ್ಟಬಲ್ ಸುದ್ದಿ ವಾಹಿನಿ ಯಾವ ವಿಚಾರವನ್ನು ಓದುಗರ ಮಿತ್ರ ಮುಂದೆ ಇಡಲು ಹೊರಟಿದ್ದಾರೆ ಎಂಬ ಗೊಂದಲ ನಿಮ್ಮ ಮನಸ್ಸಿನಲ್ಲಿ ಮೂಡಿದೆ ಅಲ್ಲವೇ? ಬನ್ನಿ ನಾವು ಹೇಳಲು ಹೊರಟಿರುವುದು ಈ ಕೆಳಗಿನ ವಿಚಾರ. ತಡವೇಕೆ ಬನ್ನಿ...

ಬಂಧಿತ ಆರೋಪಿಯಿಂದ ಲಂಚ ಪಡೆದ ಹಿನ್ನೆಲೆಯಲ್ಲಿ ಹರಿಹರ ನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್‌​ ಮಂಜುನಾಥ್ ಬಿ.ವಿ. ಎಂಬವರನ್ನು ಅಮಾನತು ಮಾಡಲಾಗಿದೆ. ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿ ಠಾಣೆಗೆ ಕರೆತಂದಿದ್ದ ಆರೋಪಿಯೊಬ್ಬರಿಂದ ಕಾನ್‌ಸ್ಟೆಬಲ್‌ ಲಂಚ ಪಡೆದಿದ್ದರು. ಎಸ್ಪಿ ಉಮಾ ಪ್ರಶಾಂತ್‌ ಹತ್ತು ದಿನಗಳ ಹಿಂದೆಯೇ ಅಮಾನತು ಆದೇಶ ಹೊರಡಿಸಿದ್ದರು.ಠಾಣೆಗೆ ಕರೆತಂದಿದ್ದ ಆರೋಪಿಗೆ ಕಾನ್‌ಸ್ಟೆಬಲ್‌ ಮಂಜುನಾಥ್ ಅವರು, ನಿನ್ನ ಮೇಲೆ ಫೋಕ್ಸೊ ಪ್ರಕರಣ ದಾಖಲು ಮಾಡ್ತೀನಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪವೂ ಕೇಳಿಬಂದಿದೆ. ನಂತರ ಠಾಣೆಯಲ್ಲೇ ಆರೋಪಿಯನ್ನು ಹೆದರಿಸಿ 12 ಸಾವಿರ ರೂ ಲಂಚ ಪಡೆದಿದ್ದರು. ಇದಲ್ಲದೇ ಅದೇ ಆರೋಪಿ ಬಳಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಆರೋಪಿ ಹಣ ಇಲ್ಲ ಎಂದು ಹೇಳಿದ ತಕ್ಷಣ, ಆತನ ಬಳಿ ಇದ್ದ ಮೊಬೈಲ್ ಕಸಿದುಕೊಂಡ ಫೋನ್ ಪೇಯಲ್ಲಿ ಎಷ್ಟು ಹಣ ಬ್ಯಾಲೆನ್ಸ್​ ಇದೆ ತೋರಿಸು ಎಂದೂ ಒತ್ತಾಯಿಸಿದ್ದಾರೆ. ಬ್ಯಾಲೆನ್ಸ್ ಚೆಕ್ ಮಾಡಿದಾಗ ಆರೋಪಿಯ ಖಾತೆಯಲ್ಲಿ 25 ಸಾವಿರ ರೂ ಇರುವುದು ತಿಳಿದಿದೆ. ಆಗ ಆರೋಪಿಯ ಬಳಿಯಿದ್ದ ಹಣವನ್ನು ಮಂಜುನಾಥ್ ವರ್ಗಾವಣೆ ಮಾಡಿಕೊಂಡಿದ್ದಾರೆ. ಆರೋಪಿಯ ಸಹೋದರ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಹರಿಹರ ನಗರ ಠಾಣೆಯ ಇನ್ಸ್​ಪೆಕ್ಟರ್ ದೇವಾನಂದ್ ವರದಿಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಮಾನತು ಮಾಡಿದ್ದೇವೆ ಎಂದು ಎಸ್ಪಿ ಖಚಿತಪಡಿಸಿದ್ದಾರೆ.
ನೋಡಿದಿರಲ್ಲ ಈ ಶೋಕಿ ಮಾಮನ ಕಥೆ. ಇಷ್ಟೇ ಅಲ್ಲ ಈ ಹಿಂದೆಯೂ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಇದ್ದಾಗಲೂ ಇದೇ ರೀತಿಯ ಕೆಲಸವನ್ನ ಮಾಡಿ ಅಮಾನತ್ತು ಮಾಡಿದರು ಎಂಬ ಮಾಹಿತಿಯು ಇದೆ. ಅಷ್ಟೇ ಅಲ್ಲದೆ ಹರಿಹರದಲ್ಲೂ ಇನ್ನು ಅದೆಷ್ಟು ಆರೋಪಿಗಳಿಂದ ಮತ್ತು ಆರೋಪಿಯ ಸಂಬಂಧಿಕರಿಂದ ಇದೇ ರೀತಿಯ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪವು ಕೇಳಿ ಬಂದಿದೆ. 

ಕೂಡಲೇ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಗಳು ಅಮಾನತ್ತುಗೊಂಡಿರುವ ಪೊಲೀಸ್ ಕಾನ್ಸ್ಟೇಬಲ್ ಮಂಜುನಾಥ್ ಬಿವಿ ಇವರನ್ನು ತಮ್ಮ ಕಷ್ಟಡಿಗೆ ಪಡೆಯುವ ಮೂಲಕ ಹೆಚ್ಚಿನ ವಿಚಾರಣೆಯನ್ನು ನಡೆಸಿ ನೊಂದ ಜೀವಗಳಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಮಾಡಿ ಇಲಾಖೆಯ ಗೌರವವನ್ನು ಹೆಚ್ಚಿಸಿಕೊಳ್ಳುವಂತೆ ಈ ಮೂಲಕ ನೊಂದ ಜನರ ಪರವಾಗಿ ಮನವಿ ಮಾಡಿಕೊಳ್ಳುತ್ತೇವೆ.

ಈ ಶೋಕಿ ಮಾಮನನ್ನು ಮುಂದೆ ಇಲಾಖೆಗೆ ಬರಮಾಡಿಕೊಳ್ಳದೆ ಶಾಶ್ವತವಾಗಿ ಕೆಲಸದಿಂದ ತೆಗೆದು ಹಾಕುವ ಮೂಲಕ ಇಲಾಖೆಯ ಗೌರವ ಮತ್ತು ಜನಸಾಮಾನ್ಯರ ಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಪೊಲೀಸ ಇಲಾಖೆ ಮಾಡಲಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.

Post a Comment

0 Comments