ಮಂದಾರ ನ್ಯೂಸ್ , ಹರಿಹರ: ಯಾವುದೇ ಸರ್ಕಾರಗಳು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿಯಲಿ ಭ್ರಷ್ಟಾಚಾರ - ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣ ಹಾಕಲು ಸಾಧ್ಯವಿಲ್ಲ.
ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜಕಾರಣಿಗಳ ಆಡುವ ಮಾತುಗಳು ಬರೀ ಬೊಗಳೆ ಮಾತುಗಳೇ ಆಗಿದೆ.
ಭ್ರಷ್ಟಾಚಾರ ಎಂಬುದು ಇಂತಹ ಇಲಾಖೆಯಲ್ಲಿ ನಡೆಯುತ್ತಿಲ್ಲ ಎಂಬ ಒಂದೇ ಒಂದು ಉದಾಹರಣೆಗಳು ಕಾಣಸಿಗದು. ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ವ್ಯಾಪಿಸಿಕೊಂಡಿದೆ.
ಆರ್ ಬಿ. ತಿಮ್ಲಾಪುರ ಸಾಹೇಬ್ರೆ ಈ ಸುದ್ದಿ ನೋಡ್ರಿ.. ಭ್ರಷ್ಟಾಚಾರ- ಅಕ್ರಮಕ್ಕೆ ಅಬಕಾರಿ ಇಲಾಖೆ ಮತ್ತೊಂದು ಉದಾಹರಣೆ ಆಗಬಲ್ಲದೆ.?
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಬಾರ್ ಲೈಸೆನ್ಸ್ ಸಂಬಂಧಿಸಿದಂತೆ ದೊಡ್ಡ ಮಟ್ಟದ ಚರ್ಚೆ ನಡೆದಿರುವುದನ್ನು ಇಡೀ ರಾಜ್ಯದ ಜನತೆ ಗಮನಿಸಿದ್ದಾರೆ. ಸಿಎಲ್ -7 ಮತ್ತು ಸಿಎಲ್ -2 ಸನ್ನದುಗಳ ಮಂಜೂರಾತಿಯಲ್ಲಿ ಅಬಕಾರಿ ನೀತಿಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಮನಸ್ಸಿಗೆ ಬಂದಂತೆ ಸಿ ಎಲ್ - 7 ಮತ್ತು ಸಿಎಲ್ -2 ಸನ್ನದ್ದುಗಳನ್ನ ನೀಡಲಾಗುತ್ತಿದೆ ಎಂಬ ಸದಸ್ಯರ ಆರೋಪಕ್ಕೆ ನೂರಕ್ಕೆ ನೂರರಷ್ಟು ಸತ್ಯ ಎಂಬಂತೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಿನ ಬಾರ್ ಗಳಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿ.
ಸಿಎಲ್ - 2 , ಎಂ ಆರ್ ಪಿ ಬಾರ್ ಲೈಸೆನ್ಸ್ ಪಡೆದು ಮಧ್ಯದ ಅಂಗಡಿಯನ್ನ ನಡೆಸುತ್ತಿರುವವರು ಅಬಕಾರಿ ನೀತಿಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡುತ್ತಿರುವ ದೃಶ್ಯಗಳು ನಮ್ಮ ಪತ್ರಿಕಾ ಮಾಧ್ಯಮಕ್ಕೆ ಕಂಡು ಬಂದಿದೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಮಲೆಬೆನ್ನೂರು ಪುರಸಭಾ ವ್ಯಾಪ್ತಿಯಲ್ಲಿರುವ ಎಂ ಹೆಚ್ ಹನುಮಂತಪ್ಪ ಒಡೆತನದ ನಂ; ಇ.ಎಸ್ 20230627965, ಮತ್ತು ಗೋಪಾಲ್ ಕಲಾಲ್ ಮಂಜುನಾಥ್ ಒಡೆತನದ ಲೈಸೆನ್ಸ್ ನಂ; 20230624760, ಹಾಗೂ ಎಮ್ ಸಿ ಕರಿಬಸಪ್ಪ ಒಡೆತನದ ಲೈಸೆನ್ಸ್ ನಂ ಇಎಸ್ 20230627660, ಈ ಎಂ ಆರ್ ಪಿ ಬಾರುಗಳಲ್ಲಿ ಸರ್ಕಾರದ ಅಬಕಾರಿ ನೀತಿಗಳನ್ನ ಉಲ್ಲಂಘಿಸಿ ಸಾರ್ವಜನಿಕರಿಗೆ ಮಧ್ಯವನ್ನು ನೀಡುತ್ತಿದ್ದಾರೆ.
ಇವರು ಪಡೆದ ಲೈಸೆನ್ಸ್ ಪ್ರಕಾರ ಮದ್ಯಪ್ರಿಯರಿಗೆ ಮದ್ಯವನ್ನು ನೀಡಬೇಕು ಆದರೆ ಇವರು ಪಡೆದ ಲೇಸನ್ಸ್ ವಿರುದ್ಧವಾಗಿ ಮದ್ಯಪ್ರಿಯರಿಗೆ ಮದ್ಯವನ್ನು ತಮ್ಮ ಅಂಗಡಿಯಲ್ಲಿ ನೀಡುತ್ತಿದ್ದಾರೆ.
ಇವರು ಪಡೆದಿರುವುದು ಮದ್ಯವನ್ನು ಮದ್ಯ ಪ್ರಿಯರಿಗೆ ಪಾರ್ಸಲ್ ಮಾಡುವ ಅನುಮತಿ ಮಾತ್ರ ಹೊಂದಿರುತ್ತಾರೆ. ಯಾವುದೇ ಕಾರಣಕ್ಕೂ ಇವರು ತಮ್ಮ ಬಾರ್ ಗಳಲ್ಲಿ ಕುಳಿತುಕೊಂಡು ಕುಡಿಯಲು ಅವಕಾಶವಿಲ್ಲ. ಅಲ್ಲದೆ ಎಂ ಆರ್ ಪಿ ಗಿಂತ ಹೆಚ್ಚಿನ ಮೊತ್ತ ಮಧ್ಯಪ್ರಿಯರಿಂದ ಪಡೆಯುವಂತಿಲ್ಲ. ಯಾವುದೇ ಕಾರಣಕ್ಕೂ ರೆಸ್ಟೋರೆಂಟ್ ನಡೆಸುವಂತಿಲ್ಲ. ರಾತ್ರಿ 10 ಗಂಟೆಗೆ ತಮ್ಮ ಬಾರ್ ಅಂಗಡಿಗಳನ್ನು ಮುಚ್ಚತಕ್ಕದ್ದು. ಹೀಗೆ ಅನೇಕ ಸಿ ಎಲ್ -2 ಲೈಸೆನ್ಸ್ ಪಡೆದು ಬಾರ್ ನಡೆಸುತ್ತಿರುವವರಿಗೆ ಅನ್ವಯಿಸುತ್ತದೆ. ಆದರೆ ಈ ಮೇಲಿನ ಅಂಗಡಿಯ ಮಾಲೀಕರು ಇದ್ಯಾವುದನ್ನು ಪಾಲನೆ ಮಾಡದೆ ಸರ್ಕಾರದ ಅಬಕಾರಿ ನೀತಿಗಳನ್ನ ಉಲ್ಲಂಘಿಸಿ ರಾಜಾರೋಶವಾಗಿ ಮಧ್ಯಪ್ರಿಯರಿಗೆ ಮದ್ಯವನ್ನು.
ನೀಡುತ್ತಿದ್ದಾರೆ.
ಇಂತಹ ಬಾರ್ ಗಳ ಲೈಸೆನ್ಸ್ ಗಳನ್ನು ಮುಟ್ಟುಗೋಳು ಹಾಕುವ ಅಧಿಕಾರವನ್ನು ಸಂಬಂಧಿಸಿದ ಪೋಲಿಸ್ ಠಾಣೆಯವರೆಗೂ ಇದೆ ಎಂಬುದನ್ನು ಮರೆತಿದ್ದಾರೆ.
ಅಬಕಾರಿ ಇಲಾಖೆಯ ಆರ್ .ಬಿ ಸಾಹೇಬರೇ ನಿಮ್ಮ ಇಲಾಖೆಯ ಕಾನೂನು ಕಟ್ಟಲೆಗಳನ್ನು ಹಾಗೂ ಆಗಿಂದಾಗ್ಗೆ ಹೊರಡಿಸುವ ಸುತ್ತೋಲೆಗಳನ್ನು ಸಂಬಂಧಿಸಿದ ಅಬಕಾರಿ ಇಲಾಖೆಯವರು ಉಲ್ಲಂಘನೆ ಮಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಕೂಡಲೇ ಹರಿಹರ ತಾಲೂಕು ಮಲೆಬೆನ್ನೂರು ಪುರಸಭಾ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಈ ಮೇಲಿನ ಬಾರ್ ಗಳ ಲೈಸೆನ್ಸ್ ಗಳನ್ನು ಕೂಡಲೇ ರದ್ದುಪಡಿಸಿ. ಪತ್ರಿಕೆಯಲ್ಲಿ ಬಂದಿರುವ ಸುದ್ದಿಯ ಆಧಾರದ ಮೇಲೆ ಬಾರ್ ಗಳ ಮಾಲೀಕರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಲ್ಲಿ ಮುಂದಾಗಿ. ಕೂಡಲೇ ದಾವಣಗೆರೆ ಜಿಲ್ಲಾ ಅಬಕಾರಿ ಆಯುಕ್ತರಿಗೆ ಸೂಚನೆ ನೀಡಿ.
ಈ ಮೇಲಿನ ಬಾರಿನ ಮಾಲೀಕರು ರೌಡಿಗಳಂತೆ ವರ್ತಿಸುತ್ತಿದ್ದು ಅಬಕಾರಿ ಇಲಾಖೆಯ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಬಾರ್ ಗಳನ್ನು ನಡೆಸುತ್ತಿದ್ದರು ಸಂಬಂಧಿಸಿದ ಅಬಕಾರಿ ಇಲಾಖೆಯವರು ಮತ್ತು ಪೊಲೀಸ್ ಇಲಾಖೆಯವರು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿರುವುದರ ಹಿಂದಿನ ಮರ್ಮವಾದರೂ ಏನು ?ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
0 Comments