ಮಂದಾರ ನ್ಯೂಸ್ :ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಕರ್ತವ್ಯ ನಿಮಿತ್ತವಾಗಿ ಸಂತೇಬೆನ್ನೂರು ಕಡೆ ಹೋಗುವಾಗ ಬಾಡಾ ರಸ್ತೆಯ ದ್ಯಾಮೇನಹಳ್ಳಿ ಗ್ರಾಮದ ಬಳಿ ರಾತ್ರಿ ೯ ಗಂಟೆಗೆ ಟೊಮ್ಯೋಟೋ ತುಂಬಿದ ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತ ನಡೆದಿದೆ, ಇದನ್ನು ನೋಡಿದ ಎಸ್ ಪಿ ಅವರು ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ಇಳಿದು ಗಾಯಾಳು ಬೈಕ್ ಸವಾರ ಅಲ್ಲಾ ಭಕ್ಷಿ ಯನ್ನು ಅದೇ ರಸ್ತೆಯಲ್ಲಿ ದಾವಣಗೆರೆ ಕಡೆ ಹೋಗುತ್ತಿದ್ದ ಕಾರ್ ನಲ್ಲಿ ತಮ್ಮ ಗನ್ ಮ್ಯಾನ್‌ಗೆ ಗಾಯಾಳು ಜೊತೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿ ತೀವ್ರ ವಾಗಿ ಗಾಯಗೊಂಡ ಅಲ್ಲಾ ಭಕ್ಷಿಯನ್ನು ದಾವಣಗೆರೆ ಸಿ ಜಿ ಆಸ್ಪತ್ರೆಗೆ ದಾಖಲು ಮಾಡಿ ಮಾನವಿಯತೆ ತೋರಿದ್ದಾರೆ,
ಗಾಯಾಳು ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ . ಹೆಚ್ಚಿನ ಚಿಕಿತ್ಸೆ ಗಾಗಿ ಎಸ್ ಎಸ್ ಹೈಟೈಕ್ ಆಸ್ಪತ್ರೆಗೆ ಗಾಯಾಳುವನ್ನು ದಾಖಲು ಮಾಡಲಾಗಿದೆ,ಮಾಯಕೊಂಡ ಪೊಲೀಸ್ ಠಾಣೆ ಯಲ್ಲಿ ಕೇಸ್ ದಾಖಲಾಗಿದೆ..
ದಾವಣಗೆರೆ ಎಸ್ ಪಿ ಉಮಾ ಪ್ರಶಾಂತ್ ಹಾಗೂ ಅವರ ಸಿಬ್ಬಂದ್ದಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಬೇಕು..ಅಪಘಾತವಾದಾಗ ಅಂಬ್ಯುಲೆನ್ಸ್ ಬರುವ ತನಕ ಕಾಯದೇ ಯಾವಾದದಾರೂ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದರೆ ಜೀವ ಉಳಿಸಬಹುದು..
0 Comments