ಅಂತೂ ಇಂತೂ ರಸ್ತೆಗೆ ಮಾರ್ಕ್ ಬಿತ್ತು , ಗುದ್ದಲಿ ಪೂಜೆ ಯಾವಾಗ.?

ಮಂದಾರ ನ್ಯೂಸ್ ,ಹರಿಹರ: ಜಯ ಕರ್ನಾಟಕ ಸಂಘಟನೆಯ ಹೋರಾಟಕ್ಕೆ ಬೆದರಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು. ಕೊನೆಗೂ ಕೆಇಬಿ ಯಿಂದ ರಾಘವೇಂದ್ರ ಸ್ವಾಮಿ ಮಠದವರೆಗೆ ನೆನೆಗುದ್ದಿಗೆ ಬಿದ್ದಿದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಮಾರ್ಕ್ ಹಾಕುವ ಮೂಲಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಚಾಲನೆ ನೀಡಿದ್ದಾರೆ ಎಂದೆ ಹೇಳಬಹುದು.

ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಈ ರಸ್ತೆ ಅಭಿವೃದ್ಧಿಗಾಗಿ ಕಳೆದ ಐದಾರು ವರ್ಷಗಳಿಂದ ನಿರಂತರವಾದ ಹೋರಾಟವನ್ನು ನಡೆಸಿಕೊಂಡು ಬಂದಿದ್ದರು. ಕಳೆದ ಒಂದು ವಾರದಿಂದ ನಿರಂತರ ಧರಣಿ ಸತ್ಯಾಗ್ರಹವನ್ನು ಹರಿಹರ ತಾಲೂಕು ದಂಡಾಧಿಕಾರಿಗಳ ಕಚೇರಿಯ ಮುಂಬಾಗದಲ್ಲಿ ನಡೆಸುತ್ತಿದ್ದರು. ಇದಕ್ಕೂ ಮೊದಲು ಲೋಕೋಪಯೋಗಿ ಇಲಾಖೆಯ ಮುಂಭಾಗದಲ್ಲಿ ಬೃಹತ್ ರಸ್ತೆ ತಡೆಯನ್ನು ಸಹ ನಡೆಸಿದ್ದರು. 
ಈ ಬಾರಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ತಮ್ಮ ಹೋರಾಟವನ್ನ ಸಡಿಲಸದೆ ರಸ್ತೆ ಕಾಮಗಾರಿ ಕೈಗೊಳ್ಳುವವರೆಗೂ ತಮ್ಮ ಹೋರಾಟವನ್ನು ನಡೆಸೆ ತೀರುತ್ತೇವೆ ಎಂದು ಹಠಕ್ಕೆ ಬಿದ್ದವರಂತೆ ಅಧಿಕಾರಿಗಳ ವಿರುದ್ಧ ಸೆಟೆದು ನಿಂತಿದ್ದರು.

ಕೊನೆಗೂ ಜಯ ಕರ್ನಾಟಕ ಸಂಘಟನೆಯ ಹೋರಾಟಕ್ಕೆ ಬೆಚ್ಚಿಬಿದ್ದ ಅಧಿಕಾರಿಗಳು ರಸ್ತೆ ಕಾಮಗಾರಿ ಕೈಗೊಳ್ಳುವ ತೀರ್ಮಾನಕ್ಕೆ ಬಂದರು. 

ಇಂದು ಹೊಸ ಸೇತುವೆಯಿಂದ ಕೆಬಿ ಮುಂಬಾಗದವರೆಗೂ ಹದಗೆಟ್ಟ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಚೇರಿಯ ಸಿಬ್ಬಂದಿಗಳ ಸಹಾಯದಿಂದ ಮಾರ್ಕ್ ಹಾಕಿದರು.

ಹಳೆ ಡಾಂಬರು ರಸ್ತೆಯನ್ನು ಮಧ್ಯ ಮಾಡಿಕೊಂಡು, ರಸ್ತೆಯ ಮಧ್ಯ ಭಾಗದಿಂದ ಸರಿಸಮವಾಗಿ ಎರಡು ಭಾಗವನ್ನು ಮಾಡಿ ಸುಮಾರು 40 ಅಡಿ ರಸ್ತೆ ನಿರ್ಮಾಣಕ್ಕೆ ಏನು ಬೇಕು ಮತ್ತು ಎಷ್ಟು ಜಾಗ ಬೇಕು ಅಷ್ಟು ಜಾಗಕ್ಕೆ ಇಂದು ಮಾರ್ಕ್ ಹಾಕುವ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದ್ದಾರೆ.
ಅಧಿಕಾರಿಗಳೇನು ಇಂದು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ .ಇನ್ನೂ ಗುದ್ದಲಿ ಪೂಜೆ ಬಾಕಿ ಇದೆ. ನಾಳೆ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಬಹುದೇ? ಏಕೆಂದರೆ ಅಧಿಕಾರಿಗಳು ಹೇಳುವಂತೆ ನಾಳೆ ಬೆಳಗ್ಗೆ 10 ಗಂಟೆಯಿಂದಲೇ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜೆಸಿಬಿ ಯಂತ್ರಗಳ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಗುವುದು ಎಂಬ ಭರವಸೆಯನ್ನ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರಿಗೆ ಇಂದು ನೀಡಿದ್ದಾರೆ. ಅವರು ಹೇಳಿದಂತೆ ನಾಳೆ ಕಾಮಗಾರಿಗೆ ಅಧಿಕೃತ ಚಾಲನೆ ದೊರೆಯಬೇಕಾದರೆ ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಬೇಕಾಗಿದೆ. ಈ ಗುದ್ದಲಿ ಪೂಜಾ ಕಾರ್ಯಕ್ರಮ ನಡೆಯಬಹುದೇ? ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ವಲಯದಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಒಟ್ಟಾರೆಯಾಗಿ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ 250 ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರ ಹೋರಾಟದಿಂದ ಅಧಿಕೃತವಾಗಿ ಚಾಲನೆ ದೊರೆತಿದೆ ಎಂದೇ ಹೇಳಬಹುದು. 

ಯಾವುದೇ ವಿಘ್ನಗಳು ಇಲ್ಲದೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿ ಎಂಬುವುದೇ ನಮ್ಮ ಮಾಧ್ಯಮದ ಆಶಯವಾಗಿದೆ.

ವಾಹನ ಸವಾರರೆ ಹಾಗೂ ಪಾದಾಕ್ಷರಿಗಳೇ ಜಯ ಕರ್ನಾಟಕ ಸಂಘಟನೆಯ ಹೋರಾಟದಿಂದ ನಿಮ್ಮ ಬಹುದಿನದ ಬೇಡಿಕೆಯು ಈಡೇರುವ ಲಕ್ಷಣ ಕಾಣುತ್ತಿದೆ. ಯಾವುದಕ್ಕೂ ಬೆಳಗ್ಗೆ ವರೆಗೂ ಕಾಯೋಣ........

Post a Comment

0 Comments