ಮಂದಾರ ನ್ಯೂಸ್ ,ಹರಿಹರ : ಎಂತಹ ಕಾಲ ಬಂತಯ್ಯ ತುಂಗಭದ್ರಾ ನದಿಯನ್ನ ಒಡಲಿನಲ್ಲೇ ಇಟ್ಟುಕೊಂಡು ನೀರಿಗಾಗಿ ಹಾಹಾಕಾರ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಮಾತ್ರ ಅತ್ಯಂತ ಬೇಸರದ ಸಂಗತಿ.
ಹರಿಹರ ತಾಲೂಕು ಬನ್ನಿಕೋಡು ಗ್ರಾಮದ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ ,ನೀರಿಗಾಗಿ ಜನರು ಹಾಹಾಕಾರ ಪಡುತ್ತಿದ್ದಾರೆ. ಪಿಡಿಒ ವಿರುದ್ಧ ಜನರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಊರಿನ ಗ್ರಾಮಸ್ಥರು ಇಂದು ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಗ್ರಾಮದ ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಒದಗಿಸುವಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಣುಕಬಾಯಿ ವಿಫಲರಾಗಿದ್ದಾರೆ.ಅವರು ನಿರ್ಲಕ್ಷ ತೋರಿದ ಕಾರಣ ಇಂದು ಗ್ರಾಮದ ಜನರಿಗೆ ಸಮರ್ಪಕವಾಗಿ ನೀರು ದೊರೆಯುತ್ತಿಲ್ಲ ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದರು.
ಸಮಯ 11 ಗಂಟೆಯಾದರೂ ಪಂಚಾಯತಿಗೆ ಯಾರು ಬಂದಿಲ್ಲ. ಈಗಾಗಲೇ ಗ್ರಾಮದ ಜನರಿಗೆ ಕಳೆದ ಒಂದು ವಾರದಿಂದ ಸಮರ್ಪಕವಾಗಿ ಕುಡಿಯುವ ನೀರು ದೊರೆಯುತ್ತಿಲ್ಲ. ಅಭಿವೃದ್ಧಿ ಅಧಿಕಾರಿಗಳು ಮಾತ್ರ ತಮ್ಮ ಕುರ್ಚಿಗೆ ಭಂಗ ಇಲ್ಲ ಎಂಬುವಂತೆ ವರ್ತಿಸುತ್ತಿದ್ದಾರೆ. ಇದುವರೆಗೂ ಕಚೇರಿಗೆ ಆಗಮಿಸಿದ ಅಧಿಕಾರಿಗಳ ವಿರುದ್ಧ ಪಂಚಾಯತಿ ಕಚೇರಿಗೆ ಗ್ರಾಮಸ್ಥರೇ ಸ್ವತಃ ಬೀಗ ಹಾಕಿದ್ದು ಅಭಿವೃದ್ಧಿ ಅಧಿಕಾರಿಗಳು ಬಂದು ಬೀಗದ ಕೈಯನ್ನು ಪಡೆಯಲಿ ಎಂದು ಸವಾಲು ಹಾಕಿದರು.
ಅಭಿವೃದ್ಧಿ ಅಧಿಕಾರಿ ರೇಣುಕಾಬಾಯಿಯವರು ಯಾವುದೇ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸಲಿ ಅವರ ನಿರ್ಲಕ್ಷತನ ಹೀಗೆ ಮುಂದುವರಿಯುತ್ತಿದೆ. ಇವರು ಕರ್ತವ್ಯ ನಿರ್ವಹಿಸುವ ಪಂಚಾಯತಿಗಳು ಅಭಿವೃದ್ಧಿ ಕಾಣದೆ ಸೊರಗಿದ ಉದಾರಣೆಗಳು ಬಹಳಷ್ಟು ಇದೆ. ಈ ಹಿಂದೆ ಭಾನುವಳ್ಳಿ ಗ್ರಾಮ ಪಂಚಾಯತಿಯಲ್ಲೂ ಇದೇ ರೀತಿ ಕರ್ತವ್ಯದಲ್ಲಿ ನಿರ್ಲಕ್ಷ ತೋರಿದ ಕಾರಣ ಗ್ರಾಮ ಪಂಚಾಯಿತಿಯ ಜನರೇ ತಮ್ಮ ಪಂಚಾಯತಿಯಿಂದ ಹೊರ ಹಾಕಿದರು. ಭಾನುವಳ್ಳಿಯಿಂದ ವರ್ಗಾವಣೆಯಾಗಿ ಬೆಳ್ಳೋಡಿಗೆ ವರ್ಗಾವಣೆಯಾಗಿ ಬರಬೇಕಿತ್ತು ಪಂಚಾಯತಿಯವರ ವಿರೋಧದ ಕಾರಣ ಬೆಳ್ಳೋಡಿ ಗ್ರಾಮ ಪಂಚಾಯತಿಗೆ ಈ ಅಭಿವೃದ್ಧಿ ಅಧಿಕಾರಿಗಳನ್ನು ಕಾಲಿಡಲು ಬಿಡಲಿಲ್ಲ. ನಂತರ ಅನಿವಾರ್ಯವಾಗಿ ಹನಗವಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ನೇಮಿಸಬೇಕಾಗಿತ್ತು.
ಹನಗವಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಆಗಿರುವಂತಹ ಸಂದರ್ಭದಲ್ಲಿ ಪಂಚಾಯತಿಯಲ್ಲಿ ಅನೇಕ ಅವಾಂತರಗಳು ಸೃಷ್ಟಿಯಾದವು. ಅಲ್ಲಿಯೂ ಸಹ ಇ- ಸ್ವತ್ತು ವಿಚಾರ ಸೇರಿದಂತೆ ಇನ್ನೂ ಅನೇಕ ವಿಚಾರಗಳಿಂದ ಜನರು ಬೇಸತ್ತು ಗ್ರಾಮ ಪಂಚಾಯಿತಿಗೆ ಬೀಗ ಹಾಕಿದ ಘಟನೆಗಳು ನಡೆದವು. ಗ್ರಾಮ ಸಭೆಯ ಸಂದರ್ಭದಲ್ಲಂತೂ ಈ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಆಕ್ರೋಶದ ಕಿಚ್ಚು ಹೊತ್ತುಕೊಂಡಿತ್ತು.
ಕರೋನ ಮಹಾಮಾರಿ ಸಂದರ್ಭದಲ್ಲಿ ಇವರು ಅತ್ಯಂತ ಬೇಜವಾಬ್ದಾರಿತನದಿಂದ ವರ್ತಿಸಿದ್ದ ಕಾರಣ ಇವರನ್ನು ಕೆಲ ದಿನಗಳ ಮಟ್ಟಿಗೆ ಅಮಾನತ್ತು ಮಾಡಲಾಗಿತ್ತು. ಆದರೂ ಈ ಅಭಿವೃದ್ಧಿ ಅಧಿಕಾರಿಗಳು ಎಚ್ಚೆತ್ತುಕೊಳ್ಳಲೇ ಇಲ್ಲ.
ಇದೀಗ ಬನ್ನಿಕೊಡು ಗ್ರಾಮ ಪಂಚಾಯತಿಯಲ್ಲೂ ಇವರ ನಿರ್ಲಕ್ಷತನ ಮುಂದುವರಿದೆ. ಈಗಾಗಲೇ ಗ್ರಾಮದ ಜನರು ಈ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದು ತಮ್ಮ ಗ್ರಾಮ ಪಂಚಾಯತಿಯಿಂದ ವರ್ಗಾವಣೆ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ.
ಒಟ್ಟಾರೆಯಾಗಿ ಈ ಅಭಿವೃದ್ಧಿ ಅಧಿಕಾರಿಗಳು ಕಾಲಿಟ್ಟ ಕಡೆಯಲ್ಲ ಏನಾದರೂ ಒಂದು ಅವಾಂತರಗಳು ಮತ್ತು ಸಮಸ್ಯೆಗಳು ಉದ್ಭವವಾಗುತ್ತಿದೆ.
ಕೂಡಲೇ ಮಾನ್ಯ ತಾಲೂಕು ಪಂಚಾಯತ್ ನೂತನ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಇಂತ ಅಭಿವೃದ್ಧಿ ಅಧಿಕಾರಿಗಳನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಿ ಹಾಗೂ ಗ್ರಾಮ ಪಂಚಾಯತಿಗಳ ಅಭಿವೃದ್ಧಿಗೆ ಸಮರ್ಥ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕಗೊಳಿಸಿ.
ಬನ್ನಿಕೋಡು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂಬುದೇ ನಮ್ಮ ಮಾಧ್ಯಮದ ಆಶಯವಾಗಿದೆ.
0 Comments