ಅಕ್ರಮ ಮರಳು ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಇಲಾಖೆಯಿಂದ ಹದ್ದಿನ ಕಣ್ಣು.!!

ಮಂದಾರ ನ್ಯೂಸ್ , ಹರಿಹರ:-ಗ್ರಾಮಾಂತರ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆ ತಡೆಯುವ ನಿಟ್ಟಿನಲ್ಲಿ ಹರಿಹರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ಅರವಿಂದ್ ಅವರ ಮಾರ್ಗದರ್ಶನದಲ್ಲಿ ಆಯಕಟ್ಟಿನ ಜಾಗದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಕ ಮಾಡುವ ಮೂಲಕ ಹದ್ದಿನ ಕಣ್ಣು ಇಡಲಾಗಿದೆ.
 
ಇತ್ತೀಚಿನ ದಿನದಲ್ಲಿ ಅಕ್ರಮ ಮರಳು ಗಣಿಗಾರಿಕೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಸರ್ಕಾರದ ಅನುಮತಿಯ ಮೇಲೆ ಗುತ್ತಿಗೆಯನ್ನು ಪಡೆದ ಗಣಿಗಾರಿಕೆಯಿಂದ ಮಾತ್ರ ಮರಳು ಸಾಗಾಣಿಕೆಯಾಗುತ್ತಿದೆ.ಗುತ್ತಿಗೆ ಮೇಲೆ ಮರಳು ಗಣಿಗಾರಿಕೆ ನಡೆಸಲು ಅನುಮತಿ ಪಡೆದು, ಸರ್ಕಾರಕ್ಕೆ ರಾಜಧನವನ್ನು ಸಂದಾಯ ಮಾಡಿ ಪಾಸ್ ಗಳನ್ನು ಪಡೆದು ಮರಳನ್ನು ಸಾಗಾಣಿಕೆ ಮಾಡಲಾಗುತ್ತದೆ.ಈ ಸಂದರ್ಭದಲ್ಲಿ ಪ್ರತಿ ಒಂದು ಪಾಸ್ಸ ಗೆ ಸರ್ಕಾರದ ನಿಯಮದಂತೆ ಪ್ರತಿ ಟಿಪ್ಪರ್ ಮತ್ತು ಮಜಾಡ ಲಾರಿಗಳ ಮೂಲಕ ಟನ್ ಲೆಕ್ಕದಲ್ಲಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆಯೇ? ಇಲ್ಲವೇ ?ಎಂಬುದರ ಮೇಲೆ ಮರಳು ಸಾಗಾಣಿಕೆಯಾಗುವ ಆಯಕಟ್ಟಿನ ಜಾಗದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಅಕ್ರಮ ಮರಳು ಸಾಗಾಣಿಕೆಯನ್ನು ತಡೆಯುವ ಪ್ರಯತ್ನವನ್ನು ಹರಿಹರ ಗ್ರಾಮಾಂತರ ಪೊಲೀಸ್ ಇಲಾಖೆಯವರು ಮಾಡುತ್ತಿದ್ದಾರೆ.
ಈಗಾಗಲೆ ರಾಮನ ತೀರ್ಥ ,ನಾಗೇನಹಳ್ಳಿ,ಬೈಪಾಸ್,ರಾಜನಹಳ್ಳಿ ಕ್ರಾಸ್ , ಚಿಕ್ಕಬಿದರಿ, ಸಾರಥಿ ಹೀಗೆ ಪ್ರಮುಖ ರಸ್ತೆ ಮಾರ್ಗದಲ್ಲಿ ಮರಳು ಸಾಗಾಣಿಕೆಯಾಗುವ ಲಾರಿಗಳ ತಪಾಸಣೆ ಹಾಗೂ ಪಾಸ್ ಗಳನ್ನು  ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳು ಪರಿಶೀಲಿಸುತ್ತಿದ್ದಾರೆ.
 

ಪಿಎಸ್ಐ ಅರವಿಂದ್ ಅವರ ಆದೇಶದಿಂದ ಮತ್ತು ಪೊಲೀಸ್ ಸಿಬ್ಬಂದಿಗಳ ಪರಿಶೀಲನೆಯಿಂದ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದ ಕೋಟ್ಯಾಂತರ ರೂಪಾಯಿ ಹಣವನ್ನು ಹರಿಹರ ಗ್ರಾಮಾಂತರ ಪೋಲಿಸ್ ಇಲಾಖೆಯ ಬಿಗಿ ನಡೆಯಿಂದ ಸರ್ಕಾರದ ಖಜಾನೆಗೆ ಕೋಟ್ಯಾಂತರ ರೂಪಾಯಿ ಹಣ ಹರಿದು ಬರಲು ಸಾಧ್ಯವಾಗುತ್ತಿದೆ. ಈ ವಿಚಾರದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಇಲಾಖೆಯವರ ಶ್ರಮ ಹೆಚ್ಚಿದೆ.
ಪೊಲೀಸ್ ಇಲಾಖೆಯನ್ನು ಸದಾ ಅನುಮಾನದಿಂದ ನೋಡುವವರಿಗೆ ಹರಿಹರ ಗ್ರಾಮಾಂತರ ಪೋಲಿಸ್ ಠಾಣೆಯವರ ಈ ಕಾರ್ಯ ಕಾಣಿಸುವುದಿಲ್ಲ.ಅವರು ಅಕ್ರಮ ಮರಳು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಠಾಣೆಯಲ್ಲಿ ಇರುವಂತಹ ಸಿಬ್ಬಂದಿಗಳ ಸಹಾಯದಿಂದಲೇ ಈ ಕಾರ್ಯ ಮಾಡುತ್ತಿದ್ದಾರೆ.ಒಂದು ಕಡೆ ಗ್ರಾಮಾಂತರ ಭಾಗದ ಕಾನೂನು&ಸುವ್ಯವಸ್ಥೆ ಕಾಪಾಡಬೇಕು .ಇನ್ನೊಂದು ಕಡೆ ಈ ರೀತಿಯ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಬೇಕು.
 
ಹರಿಹರ ಗ್ರಾಮಾಂತರ ಠಾಣೆಗೆ ಸರಿಸುಮಾರು ಮೂವತ್ತೈದಕ್ಕೂ ಹೆಚ್ಚು ಗ್ರಾಮಗಳು ಬರುತ್ತವೆ.ಠಾಣೆಯಲ್ಲಿ ಇರುವ ಸಿಬ್ಬಂದಿಗಳು ಕೇವಲ 33.ಅದರಲ್ಲಿ ಮಹಿಳಾ ಸಿಬ್ಬಂದಿಗಳು ಐದರಿಂದ ಆರು ಜನ.ಇದರಲ್ಲಿ ಕನಿಷ್ಠ ಏನೆಂದರೂ ಎರಡರಿಂದ ಮೂರು ಸಿಬ್ಬಂದಿಗಳು ರಜೆ ಮೇಲೆ ತೆರಳಿರುತ್ತಾರೆ.ಉಳಿದ ಮೂವತ್ತು ಸಿಬ್ಬಂದಿಗಳನ್ನು ಇಟ್ಟುಕೊಂಡು.ಒಂದೆಡೆ ಕಾನೂನು&ಸುವ್ಯವಸ್ಥೆ ಕಾಪಾಡಬೇಕು,ಇನ್ನೊಂದು ಕಡೆ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಬೇಕು.ಮತ್ತೊಂದೆಡೆ ರಾಜಕೀಯ ನಾಯಕರಿಗೆ ಬಂದೋಬಸ್ತ್ ಒದಗಿಸಬೇಕು,ಇನ್ನೊಂದೆಡೆ ಮುಂದಾಗಬಹುದಾದಂತಹ ಅನಾಹುತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗುಪ್ತಚಾರಿಕೆ ನಡೆಸಬೇಕು,ಇನ್ನೂ ಕೆಲವು ಸೂಕ್ಷ್ಮಾತಿ ಸೂಕ್ಷ್ಮ ಗ್ರಾಮಗಳಿಗೆ ಪ್ರತಿ ದಿನ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಬೇಕು,ಹೀಗೆ ಹಗಲು ರಾತ್ರಿ ಎನ್ನದೆ ತಮ್ಮ ಕರ್ತವ್ಯವನ್ನು ಒತ್ತಡದಲ್ಲಿ ನಿಭಾಯಿಸಬೇಕಾಗಿದೆ.
ಇಂತಹ ವಿಚಾರಗಳನ್ನು ಅರ್ಥ ಮಾಡಿಕೊಂಡು ಪೊಲೀಸ್ ಇಲಾಖೆಯನ್ನು ದೂರಬೇಕಾಗುತ್ತದೆ.ಸರ್ಕಾರ ಆದಷ್ಟು ಬೇಗ ಪೊಲೀಸ್ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವಂತೆ ಆಗ್ರಹಿಸಿ ಹೋರಾಟ ಮಾಡಬೇಕಾದ ಜವಾಬ್ದಾರಿ ಪ್ರತಿ ನಾಗರಿಕನ ಮೇಲೆ ಇದೆ ಅಲ್ಲವೇ?
 
ಏನೇ ಹೇಳಿ ಹರಿಹರ ಗ್ರಾಮಾಂತರ ಪೊಲೀಸ್ ಇಲಾಖೆ ತಮ್ಮ ಪರಿಮಿತಿಯಲ್ಲಿ ಸಾಧ್ಯವಾದಷ್ಟು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಿಟ್ಟವಾದ ಹೆಜ್ಜೆ ಇಟ್ಟಿರುವುದಂತೂ ಸತ್ಯ ....

Post a Comment

0 Comments