ಬಿಗ್ ಬ್ರೇಕಿಂಗ್. ಮಂದಾರ ನ್ಯೂಸ್ ಹರಿಹರ : 500 ಮುಖಬೆಲೆಯ 37 ಸಾವಿರ ರೂಪಾಯಿ ಖೋಟಾ ನೋಟುಗಳನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಗಳು ಪತ್ತೆ ಹಚ್ಚಿದ್ದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
17/1/2024 ರಂದು ಹರಿಹರ ನಗರ ವಲಯದ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದು ಹನಗವಾಡಿ ಸರ್ವಿಸ್ ರಸ್ತೆ ಬ್ರಿಡ್ಜ್ ಕೆಳಗೆ ಯಾರೋ ಅಪರಿಚಿತ ವ್ಯಕ್ತಿಗಳು ಸಾರ್ವಜನಿಕರಿಗೆ ಮೋಸ, ವಂಚನೆ ಮಾಡುವ ಉದ್ದೇಶದಿಂದ ಎಲ್ಲಿಂದಲೂ ಖೋಟಾ ನೋಟುಗಳನ್ನು ತೆಗೆದುಕೊಂಡು ಬಂದು ಚಲಾವಣೆ ಮಾಡಲು ಪ್ರಯತ್ನಿಸುತ್ತಿರುತ್ತಾರೆಂದು ಖಚಿತ ಮಾಹಿತಿ ಬಂದ ಕಾರಣ ಹರಿಹರ ಗ್ರಾಮಾಂತರ ಪಿಎಸ್ಐ ಅರವಿಂದ್ ಬಿ ಎಸ್ ಇವರು ತಮ್ಮ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಮಿಂಚಿನ ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ದಾವಣಗೆರೆ ಜಿಲ್ಲೆ ಆಂಜನೇಯ ಬ್ಯಾಂಕ್ ಹತ್ತಿರ ಕುಕ್ಕವಾಡ ಗ್ರಾಮದ 58 ವರ್ಷ ವಯಸ್ಸಿನ ತಳವಾರ ಕುಬೇರಪ್ಪ ತಂದೆ ಡೊಂಗರಪ್ಪ, ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹರಿಹರ ನಗರವಾಸಿ ಸಿಂಹಾದ್ರಿ ನಿಲಯ, ಕೋರ್ಟ್ ಹತ್ತಿರ, ಕೆಎಚ್ ಬಿ ಕಾಲೋನಿಯ ಈಗ ದಾವಣಗೆರೆಯ ಐಗೂರು ಲಿಂಗಾಪುರ ವಾಸಿಯಾಗಿರುವ 29 ವರ್ಷ ವಯಸ್ಸಿನ ಹರೀಶ್@ಹರೀಶ್ ಗೌಡ ತಂದೆ ಬಸವರಾಜಪ್ಪ ಇವರು 500 ಮುಖಬೆಲೆಯ ಒಟ್ಟು 37 ಸಾವಿರ ರೂಪಾಯಿ ಖೋಟಾ ನೋಟುಗಳು ತುಂಬಿದ ಬ್ಯಾಗನ್ನು ಹಿಡಿದುಕೊಂಡು ಹನಗವಾಡಿ ಸರ್ವಿಸ್ ರಸ್ತೆ ಬ್ರಿಡ್ಜ್ ಕೆಳಗಡೆ ಸಾರ್ವಜನಿಕರಿಗೆ ಮೋಸ ,ವಂಚನೆ ಮಾಡಲು ಎಲ್ಲಿಂದಲೋ ತಂದ ಖೋಟಾ ನೋಟುಗಳನ್ನು ಇಟ್ಟುಕೊಂಡು ಯಾರಿಗೂ ಕಾಯುತ್ತಿದ್ದಾರೆ ಎಂದು ಅಪರಿಚಿತ ವ್ಯಕ್ತಿಯಿಂದ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ಬಂದ ಕಾರಣ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಅರವಿಂದ್ ಬಿ ಎಸ್ ಇವರು ಮಿಂಚಿನ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಮೋಸ, ವಂಚನೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದು ಹೆಚ್ಚಿನ ವಿಚಾರಣೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ನಮ್ಮ ಮಂದಾರ ನ್ಯೂಸ್ ಸುದ್ದಿ ವಾಹಿನಿಗೆ ಲಭ್ಯವಾಗಿದೆ. ಈಗಾಗಲೇ ಇಬ್ಬರು ಆರೋಪಿಗಳ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿಕೊಂಡು ಇಬ್ಬರು ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.
0 Comments