ವಿಜಯೇಂದ್ರನ ಕೃಪೆಯಿಂದ ಹಾವೇರಿಯಲ್ಲಿ ಅರುಣೋದಯ.!!

ಮಂದಾರ ನ್ಯೂಸ್, ಹರಿಹರ : ಅದೃಷ್ಟಲಕ್ಷ್ಮಿ ಯಾವ ರೂಪದಲ್ಲಿ ಮನೆಗೆ ಬರುತ್ತಾಳೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಒಮ್ಮೆ ಅದೃಷ್ಟ ಹುಡುಕಿಕೊಂಡು ಬಂದರೆ ಮುಗೀತು ಅವರು ಹಿಂದುರಿಗೆ ನೋಡುವ ಪ್ರಶ್ನೆಯೇ ಇರುವುದಿಲ್ಲ.

ಕಳೆದ 2021ರಲ್ಲಿ ವಿಧಾನಸಭೆಯ ಉಪಚುನಾವಣೆಯಲ್ಲಿ ಅನಿರೀಕ್ಷಿತವಾಗಿ  ಅದೃಷ್ಟಲಕ್ಷ್ಮಿ ಅರುಣ್ ಕುಮಾರ್ ಪೂಜಾರ ಅವರ ಮನೆಗೆ ಹುಡುಕಿಕೊಂಡು ಬಂದಿತ್ತು. ಅಂದು ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಅರುಣ್ ಕುಮಾರ್ ಪೂಜಾರ್ ಅವರು ಅಭೂತಪೂರ್ವ ಜಯವನ್ನು ಸಾಧಿಸಿದರು.
ಅವರು ಶಾಸಕರಾಗಿರುವಂತಹ ಸಂದರ್ಭದಲ್ಲಿ ರಾಣೇಬೆನ್ನೂರು ಅಭಿವೃದ್ಧಿಯ ಪಥದಲ್ಲಿ ಸಾಗಿತ್ತು ಎಂದರು ತಪ್ಪಾಗಲಾರದು.

2023 ರಲ್ಲಿ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪೂಜಾರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ತಮ್ಮ ಪ್ರತಿಸ್ಪರ್ಧಿ ಪ್ರಕಾಶ್ ಕೋಳಿವಾಡ ಅವರ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಸೋಲು ಕಾಣುವಂತಾಯಿತು.

ಆದರೆ ಆ ಸೋಲು ಕಾಂಗ್ರೆಸ್ ಗ್ಯಾರಂಟಿಯ ಪರಿಣಾಮದ ಸೋಲಾಯಿತು ವಿನಹ ಅರುಣ್ ಕುಮಾರ್ ಪೂಜಾರ್ ಅವರ ಅಭಿವೃದ್ಧಿಯ ಸೋಲಾಗಿರಲಿಲ್ಲ.

ಸೊರಗಿ ಹೋಗಿರುವ ಬಿಜೆಪಿಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಯಡಿಯೂರಪ್ಪನವರ ಸುಪುತ್ರರಾದ ಬಿ ವೈ ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷರನ್ನಾಗಿ ಕಳೆದ ತಿಂಗಳು ನೇಮಕ ಮಾಡಿತ್ತು.
ಸೊರಗಿ ಹೋಗಿರುವ ಬಿಜೆಪಿಯನ್ನು ಮತ್ತೆ ಚೈತನ್ಯಗೊಳಿಸುವ ಜವಾಬ್ದಾರಿ ಬಿ ವೈ ವಿಜಯೇಂದ್ರ ಅವರ ಹೆಗಲೇರಿತ್ತು. 

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಬಿ ವೈ ವಿಜಯೇಂದ್ರ ಅವರು ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸುವ ಜವಾಬ್ದಾರಿಯ ಹೊಣೆಯನ್ನು ಹೊತ್ತು ಪಕ್ಷದ ವಿವಿಧ ಘಟಕಗಳಿಗೆ ಸಮರ್ಥ ನಾಯಕರಿಗೆ ನಾಯಕತ್ವದ ಜವಾಬ್ದಾರಿ  ನೀಡುವ ಮಹತ್ವರ ತೀರ್ಮಾನವನ್ನು ತೆಗೆದುಕೊಳ್ಳುವ ಮೂಲಕ ಬಿಜೆಪಿಯನ್ನು ಹೊಸ ಉರುಪಿನೊಂದಿಗೆ ಸಂಘಟನಾತ್ಮಕವಾಗಿ ಸಂಘಟಿಸುವ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ಬಿ ವೈ ವಿಜಯೇಂದ್ರ ಅವರು ನಿರ್ವಹಿಸುತ್ತಿದ್ದಾರೆ.

ಈಗಾಗಲೇ ರಾಜ್ಯದ ಹಲವು ಜಿಲ್ಲೆಯ ಜಿಲ್ಲಾಧ್ಯಕ್ಷರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ಮಾಡಿಕೊಡುವ ಮೂಲಕ ಬಿಜೆಪಿಯನ್ನು ರಾಜ್ಯದಲ್ಲಿ ಮತ್ತೊಮ್ಮೆ ತಳಮಟ್ಟದಿಂದ ಸಂಘಟಿಸುತ್ತಿದ್ದಾರೆ.

ಹಾವೇರಿ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಅರುಣ್ ಕುಮಾರ್ ಪೂಜಾರ್ ಅವರನ್ನು ನೇಮಕ ಮಾಡಿ, ಅವರಿಗೆ ಪಕ್ಷದಲ್ಲಿ ಹೊಸ ಜವಾಬ್ದಾರಿಯನ್ನ ನೀಡಿದ್ದಾರೆ.

ಅರುಣ್ ಕುಮಾರ್ ಪೂಜಾರ್ ಈಗ ಹಾವೇರಿ ಜಿಲ್ಲೆಯ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ಹೊಸ ಜವಾಬ್ದಾರಿಯನ್ನ ನಿಭಾಯಿಸಬೇಕಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ಗೆಲುವಿಗಾಗಿ ಪಕ್ಷವನ್ನು ಸಂಘಟಿಸುವ ಮಹತ್ತರ ಜವಾಬ್ದಾರಿಯನ್ನು ಹೊರಬೇಕಾಗಿದೆ.

ಅನಿರೀಕ್ಷಿತವಾಗಿ ಒದಗಿ ಬಂದಿರುವ ಹೊಸ ಜವಾಬ್ದಾರಿಯನ್ನು ಅರುಣ್ ಕುಮಾರ್ ಪೂಜಾರ ಅವರು ಯಾವ ರೀತಿಯಲ್ಲಿ ನಿರ್ವಹಿಸುತ್ತಾರೆ ಎಂಬುದು ಕಾದು ನೋಡಬೇಕಾಗಿದೆ. ಕಳೆದ ಬಾರಿ ರಾಣೆಬೆನ್ನೂರು ಶಾಸಕರಾಗಿ ತಮ್ಮ ಜವಾಬ್ದಾರಿಯನ್ನ ನಿಭಾಯಿಸಿದ ಪರಿಣಾಮ ರಾಣೆಬೆನ್ನೂರು ಅವರ ಅವಧಿಯಲ್ಲಿ ಅಭಿವೃದ್ಧಿ ಕಾಣುವಂತಾಯಿತು. ಶಾಸಕರಾಗಿ ಪಕ್ಷವನ್ನು ಸಂಘಟಿಸಿದ ಅನುಭವವನ್ನು ಹೊಂದಿದ್ದು ಮುಂದಿನ ದಿನದಲ್ಲಿ ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ತಮ್ಮ ಜವಾಬ್ದಾರಿಯನ್ನ ನಿಭಾಯಿಸುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನ ಗೆಲ್ಲಿಸಿ ಕಳುಹಿಸುತ್ತಾರೆ ಎಂದು ಅವರ ಅಭಿಮಾನಿಗಳು ಅಭಿಮಾನದಿಂದ ನಮ್ಮ ಮಾಧ್ಯಮದೊಂದಿಗೆ ಹಂಚಿಕೊಂಡರು. ಈಗಾಗಲೇ ಅವರ ಅಭಿಮಾನಿಗಳಿಗೆ ಇವರ ಆಯ್ಕೆ ಹರ್ಷವನ್ನುಂಟು ಮಾಡಿದ್ದು. ಕಳೆದ ಬಾರಿಯ ಚುನಾವಣೆಯ ಸೋಲಿನ ನೋವನ್ನು ಮರೆಯುವಂತೆ ಮಾಡಿದೆ.
"ವಿಜಯೇಂದ್ರನ ಕೃಪೆಯಿಂದ ಹಾವೇರಿಯಲ್ಲಿ ಅರುಣೋದಯವಾಗಿದೆ" ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅದರ ಕಿರಣಗಳು ಮತದಾರರ ಮೇಲೆ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ.

Post a Comment

0 Comments