ಕುಮಾರ ಪಟ್ಟಣಂ ಸರಹದ್ದಿನಲ್ಲಿ ಗಣಿ ಇಲಾಖೆಯ ರಕ್ಷಣೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ.!!

ಮಂದಾರ ನ್ಯೂಸ್ : ರಾಣೇಬೆನ್ನೂರು ತಾಲ್ಲೂಕು ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನಲ್ಲಿ ಗಣಿ ಇಲಾಖೆಯವರ ರಕ್ಷಣೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ?ಹಗಲು ರಾತ್ರಿಯೆನ್ನದೆ ತುಂಗಭದ್ರಾ ನದಿಯ ಒಡಲನ್ನು ಬಗೆಯುತ್ತಿರುವ ಅಕ್ರಮ ಮರಳು ದಂಧೆಕೋರರು .ಅಕ್ರಮ ಮರಳು ದಂಧೆ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಕುಮಾರಪಟ್ಟಣಂ ಪೊಲೀಸ್ ಇಲಾಖೆ ಸಂಪೂರ್ಣ ವಿಫಲ.

ರಾಣೆಬೆನ್ನೂರು ಶಾಸಕರಾದ ಪ್ರಕಾಶ್ ಕೋಳಿವಾಡ  ಅವರು ತುಂಗಭದ್ರಾ ನದಿಯನ್ನು ಅಕ್ರಮ ದಂಧೆಕೋರರಿಗೆ ಬರೆದು ಕೊಟ್ಟಿದ್ದಾರೆಯೇ ?ಹೀಗೊಂದು ಪ್ರಶ್ನೆ ಕಾಡುತ್ತಿದೆ .ಕುಮಾರಪಟ್ಟಣಂ ಪೋಲಿಸ್ ಠಾಣಾ ಸಿಬ್ಬಂದಿಗಳಿಂದ ಅಸಹಾಯಕತೆಯ ಉತ್ತರ. ಶಾಸಕರಾದ ಪ್ರಕಾಶ್ ಕೋಳಿವಾಡ ಇವರ ಬೆಂಬಲದಿಂದ ಕುಮಾರಪಟ್ಟಣಂನಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ.? ಕುಮಾರಪಟ್ಟಣಂ ಪೊಲೀಸ್ ಸಿಬ್ಬಂದಿಗಳು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ? ಅಥವಾ ಅವರ ಮೇಲೆ ಒತ್ತಡವಿದೆಯೇ?

ಒಟ್ಟಾರೆಯಾಗಿ ಕುಮಾರಪಟ್ಟಣಂ ಪೊಲೀಸ್ ಠಾಣಾ ಸರಹದ್ದಿನ ತುಂಗಭದ್ರಾ ನದಿಯ ಸುತ್ತ ಅಕ್ರಮ ಮರಳು ಗಣಿಗಾರಿಕೆಯಿಂದ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟ.

ಹಾಗಾದರೆ ಎಲ್ಲೆಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಗೊತ್ತೇ?

ಮುಂದಿನ ಸಂಚಿಕೆಯಲ್ಲಿ ವಿಸ್ತಾರವಾದ ಸುದ್ದಿ ನಿಮ್ಮ ಮುಂದೆ.

Post a Comment

0 Comments