ಮರಳಿ ಗೂಡು ಸೇರಿದ ಸಂತೋಷ್ ಕುಮಾರ್ ಪಾಟೀಲ್.

ರಾಣೆಬೆನ್ನೂರು: ಹಾವೇರಿ ಜಿಲ್ಲೆಯ ಪ್ರತಿಷ್ಠಿತ ರಾಜಕಾರಣಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಪಾಟೀಲ್ ಅವರು ಮರಳಿ ಬಿಜೆಪಿ ಪಕ್ಷವನ್ನ ಸೇರಿಕೊಳ್ಳುವಂತೆ ಅರುಣ್ ಕುಮಾರ್ ಪೂಜಾರ್ ಅವರು ಅಹ್ವಾನ ನೀಡಿದರು.

ಮತ್ತೊಮ್ಮೆ ದೇಶದಲ್ಲಿ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಅರುಣ್ ಕುಮಾರ್ ಪೂಜಾರ್ ಅವರು ಈ ತೀರ್ಮಾನವನ್ನು ತೆಗೆದುಕೊಂಡಿದ್ದು ಅವರ ತೀರ್ಮಾನಕ್ಕೆ ಅವರ ಅಭಿಮಾನಿಗಳು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಅರುಣ್ ಕುಮಾರ್ ಪೂಜಾರ್ ಅವರು ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗುತ್ತಿದ್ದಂತೆ ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಪಕ್ಷ ಸಂಘಟನೆಯನ್ನು ಮಾಡುತ್ತಿದ್ದು ಪಕ್ಷದಿಂದ ಹೊರಗುಳಿದ ಎಲ್ಲರನ್ನೂ ಮರಳಿ ಪಕ್ಷಕ್ಕೆ ಕರೆತರುವ ಕೆಲಸವನ್ನು ಮಾಡುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂತೋಷ್ ಕುಮಾರ್ ಪಾಟೀಲ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎದುರಾಳಿಗೆ ಪ್ರಬಲ ಪೈಪೋಟಿಯನ್ನು ನೀಡಿದ್ದರು. ಇವರ ಸ್ಪರ್ಧೆ ಎಲ್ಲೋ ಒಂದು ಕಡೆ ಗೆಲ್ಲುವ ಅಭ್ಯರ್ಥಿಯ ಗೆಲುವನ್ನು ಕಸಿದುಕೊಂಡಿದೆ ಎಂದರು ತಪ್ಪಾಗಲಾರದು.

ಇದೀಗ ಎಲ್ಲಾ ಮನಸ್ತಾಪವನ್ನು ಬದಿಗಿಟ್ಟು ಹಾವೇರಿ ಜಿಲ್ಲಾ ಅಧ್ಯಕ್ಷರಾದ ಅರುಣ್ ಕುಮಾರ್ ಪೂಜಾರ್ ಅವರು ಸಂತೋಷ್ ಕುಮಾರ್ ಪಾಟೀಲ್ ಅವರ ಮನೆಗೆ ತೆರಳಿ, ಬಿಜೆಪಿ ಪಕ್ಷವನ್ನ ಸೇರಿಕೊಳ್ಳುವಂತೆ ಅಹ್ವಾನ ನೀಡಿದ್ದು, ಅರುಣ್ ಕುಮಾರ ಪೂಜಾರ್ ಅವರು ನೀಡಿರುವ ಆಹ್ವಾನವನ್ನು ಸಂತೋಷ್ ಕುಮಾರ್ ಪಾಟೀಲ್ ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ ,ಮುಂದಿನ ದಿನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ  ಮಾಜಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ದೊಡ್ಡಮಟ್ಟದ ವೇದಿಕೆಯ ಕಾರ್ಯಕ್ರಮದಲ್ಲಿ  ಸಂತೋಷ್ ಕುಮಾರ್ ಪಾಟೀಲ್ ಅವರು ಬಿಜೆಪಿ ಪಕ್ಷವನ್ನ ಸೇರಿಕೊಳ್ಳಲಿದ್ದಾರೆ. ಪಕ್ಷ ಸೇರ್ಪಡೆಯ ನಂತರ ಮುಂದಿನ ದಿನದಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಕ್ಷೇತ್ರಾದ್ಯಂತ ತಿರುಗಾಟ ಮಾಡಿ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡುತ್ತೇನೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡುತ್ತೇವೆ ಆ ನಿಟ್ಟಿನಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತೇವೆ ಎಂದು ತಮ್ಮ ಅಭಿಪ್ರಾಯವನ್ನು ಮಾಧ್ಯಮ ಪ್ರತಿನಿಧಿಯೊಂದಿಗೆ ಹಂಚಿಕೊಂಡರು.
ಈಗಾಗಲೇ ಅರುಣ್ ಕುಮಾರ್ ಪೂಜಾರ್ ಅವರು ಪಕ್ಷ ಸಂಘಟನೆಯನ್ನು ಮಾಡುತ್ತಿದ್ದು ರಾಜ್ಯಾಧ್ಯಕ್ಷರು ಇವರ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿರುವುದು ಎದುರಾಳಿಗಳಿಗೆ ನುಂಗಲಾರದ ತುತ್ತಾಗಿದೆ.

ಈ ವೇಳೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಶ್ರೀ ಬಸವರಾಜ ಕೇಲಗಾರ,ಜಿಲ್ಲಾ ಪಕ್ಷ ಸೇರ್ಪಡೆ  ಸಂಚಾಲಕರಾದ ಶ್ರೀ ಮಂಜುನಾಥ್ ಓಲೆಕಾರ್, ರಾಣೆಬೆನ್ನೂರು ನಗರ ಮಂಡಲ ಅಧ್ಯಕ್ಷರಾದ ಶ್ರೀ ದೀಪಕ್ ಹರಪನಹಳ್ಳಿ, ಪಕ್ಷದ ಹಿರಿಯರಾದ ಶ್ರೀ ಶಿವಕುಮಾರ ಮುದ್ದಪ್ಪಳವರ್,ಶ್ರೀ ಎನ್.ಬಿ.ಪಾಟೀಲ್ ರಾಜಣ್ಣ, ಶ್ರೀ ಐರಣಿ ಬಾಬಣ್ಣ, ಪಕ್ಷದ ಮುಖಂಡರಾದ ಶ್ರೀ ಪರಮೇಶಣ್ಣ ಗೂಳಣ್ಣನವರ್, ಶ್ರೀ ಶಿವು ಗೌಡ ಶಿವಣ್ಣನವರ್, ಶ್ರೀ ಬಸವರಾಜ್ ಹುಲ್ಲತ್ತಿ, ಶ್ರೀ ಬಸವರಾಜ್ ಚಳಗೇರಿ, ಶ್ರೀ ಅನಂತ್ ಇಟಗಿ,ಮಾಜಿ ನಗರಸಭಾ ಸದಸ್ಯರು, ಪಕ್ಷದ ಪದಾಧಿಕಾರಿಗಳು,ಕಾರ್ಯಕರ್ತರು, ಶ್ರೀ ಸಂತೋಷ್ ಕುಮಾರ್ ಪಾಟೀಲ್ ಅಭಿಮಾನಿ ಬಳಗದವರು ಇತರರು ಉಪಸ್ಥಿತರಿದ್ದರು...


Post a Comment

0 Comments