ಮಂದಾರ ನ್ಯೂಸ್, ಹರಿಹರ : ಇಂದು ರಾಜ್ಯಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿದ್ದು , ಪರೀಕ್ಷೆಯನ್ನು ಎದುರಿಸಲು ರಾಜ್ಯದ ನಾನಾ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿವಿಧ ಜಿಲ್ಲೆಯಿಂದ ವಿದ್ಯಾರ್ಥಿಗಳು ಮಧ್ಯ ಕರ್ನಾಟಕದ ಕೇಂದ್ರ ಬಿಂದು, ಹರಿಹರ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದರು.
ಹರಿಹರ ಮಧ್ಯ ಕರ್ನಾಟಕದ ಕೇಂದ್ರಬಿಂದುವಾಗಿದ್ದು ಇಲ್ಲಿನ ಬಸ್ ನಿಲ್ದಾಣದ ಸಾವಿರಾರು ಸಂಖ್ಯೆಯ ಬಸ್ಸುಗಳು ರಾಜ್ಯದ ನಾಲ್ಕು ದಿಕ್ಕುಗಳ ಪ್ರಯಾಣಿಕರನ್ನು ಹೊತ್ತುಕೊಂಡು ಸಂಚರಿಸುತ್ತವೆ.
ಅದರಂತೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಿವಿಧ ಜಿಲ್ಲೆಗಳಿಂದ ಆಗಮಿಸಿ ಹರಿಹರದ ಬಸ್ ನಿಲ್ದಾಣದಲ್ಲಿ ಬಸ್ಸುಗಳಿಲ್ಲದೆ ಸಿಲುಕಿಕೊಂಡಿದ್ದರು.
ಸಂಜೆ 5:00 ಘಂಟೆಯಿಂದಲೇ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಬಸ್ಸಿಗಾಗಿ ಕಾಯುತ್ತಿದ್ದರು. ರಾತ್ರಿ 8 ಗಂಟೆಯಾದರೂ ವಿವಿಧ ಜಿಲ್ಲೆಯ ಪರೀಕ್ಷಾ ಕೇಂದ್ರಗಳಿಗೆ ತೆರಬೇಕಾದ ವಿದ್ಯಾರ್ಥಿಗಳಿಗೆ ಬಸ್ಸುಗಳು ಸಿಗಲೇ ಇಲ್ಲ. ಕೂಡಲೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿ ಒಬ್ಬರು ನಮ್ಮ ಮಂದಾರ ನ್ಯೂಸ್ ಸುದ್ದಿ ವಾಹಿನಿಯ ಸಂಪಾದಕರ ನಂಬರನ್ನು ಪಡೆದು ಫೋನ್ ಕಾಲ್ ಮಾಡಿ ತಮ್ಮ ಆತಂಕವನ್ನು ತೋಡಿಕೊಂಡರು.
ಸರ್ ನಾವು ನಾಳೆ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಬೆಳಗಾವಿ ,ಕಲ್ಬುರ್ಗಿ, ವಿಜಯಪುರ, ಶಿವಮೊಗ್ಗ ಕಡೆಯಿಂದ ಬಂದಿದ್ದೇವೆ. ನಮ್ಮ ಪರೀಕ್ಷಾ ಕೇಂದ್ರಗಳಿಗೆ ಇಲ್ಲಿಂದಲೇ ಮತ್ತೊಂದು ಜಿಲ್ಲೆಗೆ ಹೋಗಬೇಕಾಗಿದೆ. ಆದರೆ ಸಂಜೆ 5:00 ಘಂಟೆಯಿಂದಲೇ ನಾವು ಬೇರೆ ಜಿಲ್ಲೆಯ ಪರೀಕ್ಷಾ ಕೇಂದ್ರಕ್ಕೆ ತೆರಳಲು ಬಸ್ಸುಗಳನ್ನು ಕಾಯುತ್ತಿದ್ದೇವೆ ಆದರೆ 8:00 ಆದರೂ ಬಸ್ಸುಗಳು ನಿಲ್ದಾಣಕ್ಕೆ ಬರುತ್ತಿಲ್ಲ. ಪ್ರತಿದಿನದಂತೆ ಸಂಚರಿಸುವ ವಿವಿಧ ಮಾರ್ಗದ ಬಸ್ಸುಗಳನ್ನು ಇಂದು ಮೂಟಕುಗಳಿಸಿದ್ದಾರೆ ಎಂಬ ಮಾಹಿತಿ ಬಂದಿದ್ದು ಹರಿಹರದ ಡಿಪೋದಲ್ಲಿ ಸರಿಸುಮಾರು 45 ಬಸ್ಸುಗಳು ನಿಂತಿದ್ದಾವೆ .ಕೂಡಲೇ ನಾವು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಅನುಕೂಲವಾಗುವ ನಿಟ್ಟಿನಲ್ಲಿ ನಮಗೆ ಪರೀಕ್ಷೆ ಕೇಂದ್ರದ ಊರುಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಿ, ಕೂಡಲೇ ಸಂಬಂಧಿಸಿದವರ ಗಮನ ಸೆಳೆಯುವ ಸುದ್ದಿಯನ್ನು ಮಾಡಿ ಎಂದು ವಿನಂತಿಸಿಕೊಂಡರು.
ನಮಗೆ ಫೋನ್ ಕಾಲ್ ಮಾಡಿದ ವಿಷಯ ತಿಳಿಸಿದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದೆವು. ಆದರೆ ಸುದ್ದಿಯನ್ನು ಮಾಡಿ ಅದನ್ನು ಪ್ರಚಾರ ಮಾಡುವಷ್ಟರಲ್ಲಿ ಸಮಯ ವ್ಯರ್ಥವಾಗುತ್ತದೆ ಎಂದು ಮನಗಂಡು 'ಕೂಡಲೇ ತಾಲೂಕಿನ ಪ್ರಜ್ಞಾವಂತ ನಾಗರಿಕರಲ್ಲಿ ಮನವಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಒಂದು ಬರಹವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಯಿತು'.
ಹರಿಹರ ತಾಲೂಕಿನ ಸಮಸ್ತ ನಾಗರಿಕರು ಇರುವಂತಹ ವಾಟ್ಸಾಪ್ ಗುಂಪಿನಲ್ಲಿ ವಿದ್ಯಾರ್ಥಿಗಳ ಹರಿಹರ ಬಸ್ ನಿಲ್ದಾಣದಲ್ಲಿ ಪಡುತ್ತಿರುವ ಕಷ್ಟವನ್ನು ಸಾಮಾಜಿಕ ಕಳಕಳಿರುವ ಒಂದು ಬರಹವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡಲಾಯಿತು. ಬರಹವನ್ನು ಓದಿದ ಹರಿಹರದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರಾದ ತಾಲೂಕ ಅಧ್ಯಕ್ಷ ರಮೇಶ್ ಮನೆ ,ನಗರ ಘಟಕದ ಅಧ್ಯಕ್ಷ ಪ್ರಿಯತಮ್ ಬಾಬು ಬಸ್ ನಿಲ್ದಾಣಕ್ಕೆ ಧಾವಿಸಿ, ವಿದ್ಯಾರ್ಥಿಗಳಿಗೆ ಧೈರ್ಯ ತುಂಬ ಕೆಲಸ ಮಾಡಿ, ಸಂಬಂಧಿಸಿದ ಡಿಪೋ ಮ್ಯಾನೇಜರ್ ಇವರೊಂದಿಗೆ ಚರ್ಚಿಸಿ ಕೂಡಲೇ ಬಸ್ಸುಗಳನ್ನು ಬಿಡುವಂತೆ ಆಗ್ರಹಿಸಿದರು. ಇಲ್ಲದಿದ್ದರೆ ಮುಂದಾಗುವ ಅನಾಹುತಕ್ಕೆ ತಾವೇ ಜವಾಬ್ದಾರಾಗುತ್ತೀರಾ ಎಂಬ ಎಚ್ಚರಿಕೆಯನ್ನು ನೀಡಿದರು.
ಅದರಂತೆ ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿಪಿ ಹರೀಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಬಂದ ಮಾಹಿತಿಯನ್ನು ಆಧರಿಸಿ ನಮಗೆ ಫೋನ್ ಕಾಲ್ ಮಾಡಿ ಮಾಹಿತಿಯನ್ನು ಪಡೆದು ಕೂಡಲೇ ಡಿಪೋ ಮ್ಯಾನೇಜರ್ ಇವರೊಂದಿಗೆ ಚರ್ಚಿಸಿ ಹಾಗೂ ಸಾರಿಗೆ ಇಲಾಖೆಯ ಡಿಸಿ ಇವರೊಂದಿಗೆ ಚರ್ಚೆ ನಡೆಸಿ ಮಕ್ಕಳ ಅನುಕೂಲಕ್ಕೆ ತಕ್ಕಂತೆ ಬೇರೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿ ಎಂದು ಸೂಚನೆ ನೀಡಿದರು.
ಅದೇ ರೀತಿ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಾದ ನಂದಿಗಾವಿ ಶ್ರೀನಿವಾಸ ಅವರು ಸಹ ನಮ್ಮ ಸಾಮಾಜಿಕ ಕಳಕಳಿಯ ಬರಹಕ್ಕೆ ಸ್ಪಂದಿಸಿ ತಾವೇ ಖುದ್ದು ಬಸ್ ನಿಲ್ದಾಣಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ, ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರೊಂದಿಗೆ ಚರ್ಚೆ ನಡೆಸಿ , ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಹರಿಹರದ ಬಸ್ಟ್ ನಿಲ್ದಾಣದಲ್ಲಿ ಸಿಲುಕುಕೊಂಡು ಮುಂದೆ ಅವರು ಪರೀಕ್ಷೆ ಬರೆಯುವ ಕೇಂದ್ರಕ್ಕೆ ಹೋಗಲಾರದೆ ಆತಂಕ ಪಡುತ್ತಿದ್ದ ವಿದ್ಯಾರ್ಥಿಗಳ ಸಮಸ್ಯೆ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು , ನಂದಿಗಾವಿ ಶ್ರೀನಿವಾಸ್ ಅವರ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವರು ಕೂಡಲೇ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವಿವಿಧ ಜಿಲ್ಲೆಗಳಿಗೆ ಬಸ್ಗಳ ವ್ಯವಸ್ಥೆಯನ್ನು ಮಾಡಿದರು. ಈ ವಿಚಾರದಲ್ಲಿ ನಂದಿಗಾವಿ ಶ್ರೀನಿವಾಸ್ ಅವರು ಸಹ ತಮ್ಮ ಜವಾಬ್ದಾರಿಯನ್ನ ನಿಭಾಯಿಸಿದರು.
ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಕ್ಕೆ ತೆರಳಲು ಅನುಕೂಲವಾಗಬೇಕು ,ಯಾವುದೇ ರೀತಿಯಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂಬ ಮುಂಜಾಗ್ರತಾ ಕ್ರಮವಾಗಿ ಹರಿಹರ ನಗರ ಪೊಲೀಸ್ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೂಡಲೇ ಬಸ್ ನಿಲ್ದಾಣಕ್ಕೆ ತೆರಳಿ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅವರು ಸಹ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು.
ಹೀಗೆ ಹರಿಹರ ತಾಲೂಕಿನ ಪ್ರಜ್ಞಾವಂತ ನಾಗರಿಕರು ಪ್ರತ್ಯಕ್ಷವಾಗಿ ,ಪರೋಕ್ಷವಾಗಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಹೊಸ ಬಾಷ್ಯ ಬರುವ ನಿಟ್ಟಿನಲ್ಲಿ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನ ನಿಭಾಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳನ್ನು ಹೀಗೂ ಉತ್ತಮ ಕಾರ್ಯಗಳಿಗೆ ಬಳಸಿಕೊಳ್ಳುವುದು ಎಂಬುದನ್ನು ನಮ್ಮ ಮಂದಾರ ನ್ಯೂಸ್ ಸುದ್ದಿವಾಹಿನಿಯು ತೋರಿಸಿಕೊಟ್ಟಿದೆ.
ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ ಹರಿಹರ ತಾಲೂಕಿನ ಚುನಾಯಿತ ಜನಪ್ರತಿನಿಧಿಗಳಿಗೆ, ವಿವಿಧ ಪಕ್ಷದ ಮುಖಂಡರಿಗೆ, ಕನ್ನಡಪರ ಸಂಘಟನೆಯ ಕಾರ್ಯಕರ್ತರಿಗೆ, ತಾಲೂಕಿನ ಸಮಸ್ತ ಪ್ರಜ್ಞಾವಂತ ನಾಗರಿಕರಿಗೆ ನಮ್ಮ ಮಂದಾರ ನ್ಯೂಸ್ ಸುದ್ದಿ ವಾಹಿನಿಯ ಪರವಾಗಿ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇವೆ.
0 Comments