ರಾಮ ಜನ್ಮಭೂಮಿ ಅಯೋಧ್ಯೆಗೆ ತೆರಳಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ : ಎಚ್.ಎಸ್ ಶಿವಶಂಕರ್ ಅವರಿಂದ ಬೀಳ್ಕೊಡುಗೆ.


ಮಂದಾರ ನ್ಯೂಸ್, ದಾವಣಗೆರೆ :ಅಯೋಧ್ಯೆ ರಾಮ ಮಂದಿರ ಟ್ರಸ್ಟ್  ಆಮಂತ್ರಣ ಮೇರೆಗೆ ಕೂಡಲಸಂಗಮದ ಲಿಂಗಾಯಿತ ಪಂಚಮಸಾಲಿ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಧರ್ಮ ಕ್ಷೇತ್ರ ಕೂಡಲಸಂಗಮ ಪೀಠಾಧಿಪತಿಗಳು ಅಯೋಧ್ಯೆಗೆ ತೆರಳುವ ಸಂದರ್ಭದಲ್ಲಿ ,ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಯುತ ಹೆಚ್ಎಸ್ ಶಿವಶಂಕರ್, ಪಂಚಮಸಾಲಿ ಸಮಾಜದ ರಾಜ್ಯದ್ಯಕ್ಷರಾದ ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮಹಾಪೌರರು ಬಿ.ಜಿ ಅಜಯ್ ಕುಮಾರ್, ಚನ್ನಗಿರಿ ತಾಲೂಕಿನ ಅಧ್ಯಕ್ಷರು ಬಸವರಾಜ್ ,ಯುವ ಘಟಕದ ಅಧ್ಯಕ್ಷರು ಮಂಜುನಾಥ್ ಪೈಲ್ವಾನ್, ಕೊಳ್ಳೇನಳ್ಳಿ ನಾಗರಾಜ್, ನಿವೃತ್ತ ಶಿಕ್ಷಕರಾದ ಸಿದ್ದಪ್ಪ. ಶ್ರೀಗಳನ್ನು ಭಕ್ತಿ ಪೂರ್ವಕವಾಗಿ ಬೀಳ್ಕೊಟ್ಟರು. 

ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಹೆಚ್ಎಸ್ ಶಿವಶಂಕರ್ ಅವರು ಮಾತನಾಡಿ ಬಸವ ಭೂಮಿಯಿಂದ ಅಯೋಧ್ಯೆ ಭೂಮಿಗೆ ಶ್ರೀಗಳನ್ನು ಆಮಂತ್ರಣ ನೀಡಿರುವುದು ನಮ್ಮೆಲ್ಲರಿಗೂ ತುಂಬಾ ಸಂತೋಷವಾಗಿದೆ .ಆ ಮೂಲಕವಾಗಿ ಮುಂದಿನ ದಿನದಲ್ಲಿ ಕೂಡಲಸಂಗಮವನ್ನು ಅಯೋಧ್ಯೆದಷ್ಟೇ  ಅಂತರಾಷ್ಟ್ರೀಯ ಮಟ್ಟದಲ್ಲಿ ಪವಿತ್ರ ಪುಣ್ಯಕ್ಷೇತ್ರವನ್ನಾಗಿ ಶ್ರೀಗಳು ಮಾಡಲಿ ಎಂದು ಹೇಳಿದರು. 
ಶ್ರೀರಾಮನಿಗಾಗಿ ವಾನರರಂತೆ ಸೇತುವೆ ಕಟ್ಟುವ ಭಾಗ್ಯ ನಮಗೆ ಸಿಗಲಿಲ್ಲ. ರಾಮನ ಸೀತಾನ್ವೇಷನೆಯಲ್ಲಿ ಸಹಕರಿಸಲು ಜಟಾಯುವು ನಾವಾಗಲಿಲ್ಲ.ಕೊನೆಯ ಪಕ್ಷದಲ್ಲಿ ರಾಮನ ಮಂದಿರಕ್ಕಾಗಿ ನಡೆದ ಕರಸೇವೆಯಲ್ಲಿ ಭಾಗವಹಿಸುವ ಭಾಗ್ಯವೂ ನಮ್ಮಲ್ಲಿ ಬಹುತೇಕರಿಗೆ ಸಿಗಲಿಲ್ಲ.ಈಗ ನಿರ್ಮಾಣವಾಗುತ್ತಿರುವ ಶ್ರೀರಾಮನ ಭವ್ಯ ಮಂದಿರಕ್ಕಾಗಿ ಶ್ರಮಿಸಬಹುದಾದ ಭಾಗ್ಯ ಸಿಕ್ಕಿರುವುದೇ ನಮ್ಮ ಪುಣ್ಯ.ಈ ಐತಿಹಾಸಿಕ ಸಮರ್ಪಣಾ ಅಭಿಯಾನದಲ್ಲಿ ರಾಮ ಕಾರ್ಯಕ್ಕಾಗಿ ಈ ಒಂದು ಸಮಯದಲ್ಲಿ ಕಟುಬದ್ದರಾಗಿ ಶ್ರಮಿಸುವ ಸಂಕಲ್ಪ ಮಾಡೋಣ.ರಾಮನಿಗಾಗಿ ತನು,ಮನ,ಧನವನ್ನು ಸಮರ್ಪಣೆ ಮಾಡೋಣ ಎಂದರು.

ಶ್ರೀಗಳನ್ನು ಬಿಳ್ಕೊಡುಗೆ ನೀಡುವ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಸವ ಭಾಗ್ಯವಾಡಿ  ,ಶಂಕರಗೌಡ ಬಿರಾದರ್, ಈಶ್ವರಪ್ಪ.ಕಾರಿಗನೂರು ,ಬಸಣ್ಣ, ಮಹೇಶ್ , ಮುಂತಾದರು ಉಪಸ್ಥಿತರು.... ಜೈ ಶ್ರೀ ರಾಮ್

Post a Comment

0 Comments