ಹರಿಹರ ಗ್ರಾಮಾಂತರ ಪಿಎಸ್ಐ ಅರವಿಂದ್ ಬಿಎಸ್ ವರ್ಗಾವಣೆ, ನೂತನ ಪಿಎಸ್ಐ ಯಾಗಿ ಮಂಜುನಾಥ್ ಕುಪ್ಪೇಲೂರು ನೇಮಕ.!

ಮಂದಾರ ನ್ಯೂಸ್ , ಹರಿಹರ: ಕಳೆದ ಒಂದುವರೆ ವರ್ಷದಿಂದ ಹರಿಹರ ಗ್ರಾಮಾಂತರ ಪಿಎಸ್ಐ ಆಗಿ, ಪೊಲೀಸ್ ಠಾಣೆಯ ಜನಸ್ನೇಹಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅರವಿಂದ್ ಬಿಎಸ್ ಇವರನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ವರ್ಗಾವಣೆ ಮಾಡಿದ್ದು, ಇವರಿಂದ ತೆರವಾದ ಜಾಗಕ್ಕೆ ಬ್ಯಾಡಗಿ ಪೊಲೀಸ್ ಠಾಣೆಯ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸಿದ್ದ ಮಂಜುನಾಥ್ ಕುಪ್ಪೇಲೂರು ಇವರನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ನೂತನ ಠಾಣಾಧಿಕಾರಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಂಜುನಾಥ್ ಕುಪ್ಪೇಲೂರು ಇವರು ಸಹ ಜನ ಮೆಚ್ಚಿದ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

Post a Comment

0 Comments