ಮಂದಾರ ನ್ಯೂಸ್,ಹರಿಹರ : ವೇಮಾನಂದ ಶ್ರೀಗಳು ಮಠಗಳನ್ನು ಕಟ್ಟಲು ಬಂದವರಲ್ಲ. ಮನ- ಮನಗಳನ್ನು ಕಟ್ಟಲು ಕಂಕಣ ಬದ್ಧರಾಗಿ ಬಂದವರು. ಈ ಮೊದಲು ನಮ್ಮ ಸಮಾಜ ವಿವಿಧ ಪಂಗಡಗಳಲ್ಲಿ ರೆಡ್ಡಿ ಸಮಾಜ ಹರಿದು ಹಂಚಿಹೋಗಿತ್ತು. ಸಮಾಜವನ್ನು ಒಗ್ಗೊಡಿಸವಲ್ಲಿ ವೇಮಾನಂದ ಶ್ರೀಗಳಿಂದ ಸಾದ್ಯವಾಯಿತು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸಮೀಪದ ಹೊಸಳ್ಳಿ ಗ್ರಾಮದ ಮಹಾಯೋಗಿ ವೇಮನ ಸಂತಾನ ಮಠ ರೆಡ್ಡಿ ಗುರುಪೀಠ. ಆಕ್ಕೇರ ಶ್ರೀರಾಮವನ ಆವರಣದಲ್ಲಿರುವ ಹೇಮಾ - ವೇಮ ಸದ್ಭೋದನಾ ವಿದ್ಯಾಪೀಠದಲ್ಲಿ ಶನಿವಾರ ಸಂಜೆ ನಡೆದ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರು ಭಾಗದ ರೆಡ್ಡಿಗಳು,ಮದ್ಯ ಕರ್ನಾಟಕದ ರೆಡ್ಡಿಗಳು,ಉತ್ತರ ಕರ್ನಾಟಕದ ರೆಡ್ಡಿಗಳು, ಎಲ್ಲಾ ವಿವಿಧ ಪಂಗಡಗಳಲ್ಲಿ ಹಂಚಿಹೋಗಿದ್ದರು. ಗುರು ಪೀಠ ಸ್ಥಾಪನೆಯಾದ ಮೇಲೆ ಸಮಾಜದ ಹಿರಿಯರೆಲ್ಲರೂ ಒಂದೇ ವೇದಿಕೆಯಲ್ಲಿ ಸೇರುವಂತಾಗಿದೆ.ಎಲ್ಲರೂ ಸೇರಿ ಹೇಮ - ವೇಮನ ಮಠ ಮತ್ತು ಅದರ ಆಶ್ರಿತ ವಿದ್ಯಾಸಂಸ್ಥೆಗಳನ್ನು ಬೆಳೆಸೋಣ ಎಂದು ಸಮಾಜದ ಬಂಧುಗಳಿಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಕರೆ ನೀಡಿದರು.
ಇದೇ ದಿನ ಶ್ರೀಗಳ ಆಶಯದಂತೆ 50 ಲಕ್ಷದ ರೂಗಳ ಅನುದಾನದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಭೂಮಿ ಪೂಜೆಯನ್ನು ಮಾಡಿದ್ದೇನೆ.ಶ್ರೀಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.ಇಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ, ಸಂಸ್ಕೃತಿ, ಸಂಸ್ಕಾರವಂತರನ್ನಾಗಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.ಮಠದ ಶೈಕ್ಷಣಿಕ ಅಭಿವೃದ್ಧಿಗೆ ಬೆಂಗಳೂರಿನ ಉದ್ಯಮಿ ಜಯರಾಮರೆಡ್ಡಿ 1 ಕೋಟಿ ರೂಪಾಯಿಗಳ ದೇಣಿಗೆ ನೀಡಲಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ನೀನು ಬೇಕು ಎಂದರೆ ಬರದು, ಬೇಡ ಎಂದರೆ ಬಿಡದು, ನೀನು ಮಾಡಿದ ಕರ್ಮ ಕಟ್ಟಿ ಬರುವುದು. ಎಂದು ಆಂಗ್ಲ ಕವಿ ಹೇಳಿದಂತೆ ವೇಮಾನಂದ ಶ್ರೀಗಳ ಪರಿಶ್ರಮದಿಂದ ಹತ್ತು ವರ್ಷಗಳಲ್ಲಿ ಮಾಡಿದ ರಚನಾತ್ಮಕ ಕೈಂಕರ್ಯದಿಂದ ಸಾವಿರಾರು ವಿದ್ಯಾರ್ಥಿಗಳು ಮಾತನಾಡಿದರು.ಪರಿಶ್ರಮದಿಂದ ಹತ್ತು ವರ್ಷಗಳಲ್ಲಿ ಮಾಡಿದ ರಚನಾತ್ಮಕ ಕೈಂಕರ್ಯದಿಂದ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ, ಸಂಸ್ಕಾರದಿಂದ ಈ ದೇಶದ ಆಸ್ತಿಯನ್ನಾಗಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು ಇಂದು ಪ್ರಬುದ್ಧ ಮಾನವಾಗಿವೆ. ನಮ್ಮ ರೆಡ್ಡಿ ಸಮಾಜ ಇಂದು ಒಗ್ಗಟ್ಟಾಗಿ ಇರಲು ಶ್ರೀಗಳ ಪರಿಶ್ರಮ ಹಾಗೂ ಆಶಿರ್ವಾದವೆ ಕಾರಣವಾಗಿದೆ. ಇಂತಹ ಶ್ರೀಗಳನ್ನು ಪಡೆದ ನಾವೆಲ್ಲರೂ ಧನ್ಯರು.
ಜಾತಿ -ಮತಗಳನ್ನು ಮೀರಿ ಶಿಕ್ಷಣ ,ದಾಸೋಹ ಹರಿಕಾರರಾಗಿದ್ದಾರೆ ನಮ್ಮ ಶ್ರೀ ಶ್ರೀ ಶ್ರೀ ವೇಮಾನಂದ ಸ್ವಾಮೀಜಿಗಳು. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಮಾಜದ ಬಂಧುಗಳು 10 ಅಂಶಗಳ ಬೇಡಿಕೆ ಇಟ್ಟಿದ್ದರು .ಮಾನ್ಯ ಮುಖ್ಯಮಂತ್ರಿಗಳು ನಮ್ಮೆಲ್ಲಾ ಬೇಡಿಕೆಯನ್ನು ಈಡೇರಿಸಿದ್ದಾರೆ ಎಂದು ಕಾನೂನು ಸಚೀವ ಹೆಚ್ ಕೆ ಪಾಟೀಲ್ ಸಂತೋಷ ವ್ಯಕ್ತಪಡಿಸಿದರು.
ಶಾಸಕ ಪ್ರಕಾಶ್ ಕೋಳಿವಾಡ,ಎಂ ಬಿ ಪಾಟೀಲ್ ಪತ್ನಿ ಆಶಾ ಎಂ ಪಾಟೀಲ್ ಮಾತನಾಡಿದರು.
ಬಿಳಗಿ ಶಾಸಕ ಜೆ ಟಿ ಪಾಟೇಲ್, ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್, ದಾವಣಗೆರೆ ಜಿಲ್ಲಾ ರೆಡ್ಡಿ ಜನ ಸಂಘದ ಕೆ ವೆಂಕಟೇಶ್ ರೆಡ್ಡಿ,
ಶಾಸಕ ಬಿ ಪಿ ಹರೀಶ್, ಮಾಜಿ ಶಾಸಕ ಎಸ್ ರಾಮಪ್ಪ, ಮುಖಂಡರಾದ ನಂದಿಗಾವಿ ಶ್ರೀನಿವಾಸ , ನೀರು ಬಳಕೆದಾರರ ಸಂಘದ ದ್ಯಾವಪ್ಪ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
0 Comments