ಶಿಕ್ಷಣ ಸಚಿವರೇ ನಿದ್ದೆಯಿಂದ ಎದ್ದು ಬನ್ನಿ. ಮಣ್ಣಿನ ನೆಲದ ಮೇಲೆ ಕುಳಿತು ಶಿಕ್ಷಣ ಪಡೆಯುತ್ತಿರುವ ಮಕ್ಕಳ ಪರಿಸ್ಥಿತಿಯನ್ನು ಒಮ್ಮೆ ನೋಡಿ.

ಮಂದಾರ ನ್ಯೂಸ್, ಹರಿಹರ : ಶಿಕ್ಷಣದ ಕಾಶಿ ,ಹಲವು ಮಠಗಳ ಸಂಗಮ, ಮಧ್ಯ ಕರ್ನಾಟಕದ ಕೇಂದ್ರ ಬಿಂದು ಹರಿಹರದ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪರಿಸ್ಥಿತಿಯನ್ನ ಒಮ್ಮೆ ನೋಡಿ. ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳು ನೆಲದ ಮೇಲೆ ಕುಳಿತು ಶಿಕ್ಷಣವನ್ನ ಪಡೆಯುತ್ತಿದ್ದಾರೆ. ಶಿಕ್ಷಕರು ಅನಿವಾರ್ಯವಾಗಿ ಶಾಲಾ ಆವರಣದಲ್ಲಿ ಬೋಧನೆ ಮಾಡಬೇಕಾಗಿದೆ. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಬಡ ಹಾಗೂ ಮಧ್ಯಮ ಕುಟುಂಬದಿಂದ ಬಂದ ಗ್ರಾಮೀಣ ಭಾಗದ ಮಕ್ಕಳಾಗಿದ್ದಾರೆ. ಸ್ವತಂತ್ರ ಬಂದು 75 ವಸಂತಗಳು ಕಳೆದರೂ ಇದುವರೆಗೂ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಶಿಕ್ಷಣವನ್ನು ನಮ್ಮ ಜನರಿಗೆ ನೀಡುವಲ್ಲಿ ಆಳುವಂತ ಸರ್ಕಾರಗಳು ವಿಫಲವಾಗಿದೆ. ಮಣ್ಣಿನ ನೆಲದ ಮೇಲೆ ಕುಳಿತು ಶಿಕ್ಷಣ ಪಡೆಯುತ್ತಿರುವ ನಮ್ಮ ಶಾಲಾ ವಿದ್ಯಾರ್ಥಿಗಳ ಪರಿಸ್ಥಿತಿಯನ್ನು ಶಿಕ್ಷಣ ಸಚಿವರು ಒಮ್ಮೆ ಗಮನಹರಿಸಬಹುದೇ? 
ಶಿಕ್ಷಣ ಸಚಿವರೇ .ನಿದ್ದೆಯಿಂದ ಎದ್ದು ಬಂದು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪರಿಸ್ಥಿತಿಯನ್ನ ಒಮ್ಮೆ ಅವಲೋಕಿಸಿ. ತಾವು "ಎಸಿ ರೂಮಿನಲ್ಲಿ ,ಎಸಿ ಕಾರಿನಲ್ಲಿ ಓಡಾಡಿದರೆ ಸಾಲದು. ನಿಮ್ಮ ಮಕ್ಕಳು ಸಹ ಉತ್ತಮ ಕಟ್ಟಡದಲ್ಲಿ, ಉತ್ತಮವಾದ ನೆಲ ಹಾಸಿನ ಮೇಲೆ ಉತ್ತಮವಾದ ಶಿಕ್ಷಣ ಪಡೆಯಬೇಕು ಅಲ್ಲವೇ? 

ಈಗಲಾದರೂ ಎಚ್ಚೆತ್ತುಕೊಂಡು ಸಮಗ್ರವಾದ ವರದಿಯನ್ನು ಪಡೆದು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಡಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.

ಹರಿಹರ ನಗರದ ಹೃದಯ ಭಾಗವಾದ ಡಿ ಆರ್ ಎಂ ಪ್ರೌಢಶಾಲೆಯಲ್ಲಿ ಸರಿಸುಮಾರು 350 ವಿದ್ಯಾರ್ಥಿಗಳು ಮೂರು ಮಾಧ್ಯಮದಲ್ಲಿ ಶಿಕ್ಷಣವನ್ನ ಪಡೆಯುತ್ತಿದ್ದಾರೆ. ಇಲ್ಲಿ 20ಕ್ಕೂ ಹೆಚ್ಚು ಶಿಕ್ಷಕರು 350 ಮಕ್ಕಳಿಗೆ ಬೋಧನೆಯನ್ನು ಮಾಡುತ್ತಾರೆ. ಇಲ್ಲಿ 350 ಮಕ್ಕಳಿಗೆ ಕೇವಲ 12 ಕೊಠಡಿಗಳು ಮಾತ್ರ ಇದೆ.
12 ಕೊಠಡಿಗಳಲ್ಲಿ 350 ಮಕ್ಕಳು ಕನ್ನಡ ಇಂಗ್ಲಿಷ್ ಮತ್ತು ಉರ್ದು ಮೂರು ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದು ಈ ಕಟ್ಟಡದಲ್ಲಿ ಕ್ರೀಡಾ ಸಾಮಗ್ರಿಗಳು, ಲ್ಯಾಬ್ ಸಲಕರಣೆಗಳು, ಬಿಸಿ ಊಟಕ್ಕೆ ಬಳಸುವ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಬೇಕಾಗಿದೆ. ಇದರಲ್ಲೇ ಮುಖ್ಯ ಶಿಕ್ಷಕರ ಕಚೇರಿಯು ಇದೆ.

ತರಗತಿಯಲ್ಲಿ ಕೊಠಡಿಗಳ ಸಂಖ್ಯೆ ಕಡಿಮೆ ಇರುವ ಕಾರಣ ಶಿಕ್ಷಕರು ತಮ್ಮ ಮಕ್ಕಳಿಗೆ ಶಾಲಾ ಆವರಣದ ಮಣ್ಣಿನ ನೆಲದ ಮೇಲೆ ಬೋಧನೆಯನ್ನು ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ.

ಶಾಲಾ ಮಕ್ಕಳು ಮುಂಜಾನೆ ಎದ್ದು ಶುಭ್ರವಾದ ಬಟ್ಟೆಯನ್ನು ಧರಿಸಿ ಉತ್ತಮವಾದ ಶಿಕ್ಷಣವನ್ನ ಪಡೆಯಬೇಕು ಎಂಬ ಉದ್ದೇಶದಿಂದ ಶಾಲೆಗೆ ಬರುತ್ತಾರೆ. ಆದರೆ  ಮಕ್ಕಳು ಮಣ್ಣಿನ ನೆಲದ ಮೇಲೆ ಕುಳಿತು ಶಾಲಾ ಆವರಣದಲ್ಲಿ ಶಿಕ್ಷಣವನ್ನು ಪಡೆಯಬೇಕಾಗಿದೆ. ಈ ಘಟನೆಯಿಂದ ಇಡೀ ಶಿಕ್ಷಣ ವ್ಯವಸ್ಥೆ ತಲೆತಗ್ಗಿಸುವಂತಾಗಿದೆ. ಕೂಡಲೇ ಶಿಕ್ಷಣ ಸಚಿವರು ದಾವಣಗೆರೆ ಜಿಲ್ಲೆಯ ಹರಿಹರ ನಗರದ ಹೃದಯ ಭಾಗದಲ್ಲಿರುವ ಡಿ ಆರ್ ಎಂ ಶಾಲಾ ವಿದ್ಯಾರ್ಥಿಗಳು  ಮಣ್ಣಿನ ನೆಲದ ಮೇಲೆ ಕುಳಿತು ಶಿಕ್ಷಣ ಪಡೆಯುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸಮಗ್ರವಾದ ಮಾಹಿತಿಯನ್ನು ಪಡೆದು ಶಾಲಾ ಮಕ್ಕಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ ಉತ್ತಮ ವಾತಾವರಣದಲ್ಲಿ ಉತ್ತಮವಾದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂಬುದು ನಮ್ಮ ಮಾಧ್ಯಮದ ಆಶಯವಾಗಿದ್ದು. ಸರ್ಕಾರಿ ಶಾಲೆಯ ಮಕ್ಕಳು ಎಂದರೆ ಇಷ್ಟೊಂದು ನಿರ್ಲಕ್ಷ್ಯ ವಿರಬಾರದು. ಎಲ್ಲರಿಗೂ ಸಮಾನವಾದ ಶಿಕ್ಷಣ ದೊರೆಯಬೇಕು. ಭವ್ಯ ಭಾರತ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಅಮೂಲ್ಯವಾದದ್ದು ಆ ನೆಟ್ಟಿನಲ್ಲಿ ಅವರಿಗೆ ಉತ್ತಮವಾದ ವಾತಾವರಣದಲ್ಲಿ ಉತ್ತಮವಾದ ಕಲಿಕೆ ಸಿಗುವಂತಾಗಬೇಕು ಕೂಡಲೇ ಎಚ್ಚೆತ್ತುಕೊಂಡು ಡಿ ಆರ್ ಎಂ ಶಾಲಾ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಕೊಡಬೇಕು ಇಲ್ಲದಿದ್ದರೆ ಮುಂದಿನ ದಿನದಲ್ಲಿ ವಿದ್ಯಾರ್ಥಿಯ ಪೋಷಕರು, ಪ್ರಜ್ಞಾವಂತ ನಾಗರಿಕರು, ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಯ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಈಗಾಗಲೇ ಸಂಬಂಧಿಸಿದವರಿಗೆ ಮಾಧ್ಯಮದ ಮೂಲಕ ನೀಡಿರುತ್ತಾರೆ.

Post a Comment

0 Comments