ಜೇಡರ ಬಲೆಯಲ್ಲಿ ಸುನಿಲ್ ಬಸವರಾಜ್ ತೇಲಿ.!

ಮಂದಾರ ನ್ಯೂಸ್ : ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಿ ನಡೆದರೆ ಅವನಿಗೆ ಸಂಕಷ್ಟಗಳು ಕಟ್ಟಿಟ್ಟಬುತ್ತಿ . ಇಂದಿನ ರಾಜಕೀಯದ ವ್ಯವಸ್ಥೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇಲ್ಲ. ರಾಜಕಾರಣಿಗಳ ಹಾಗೂ ಮೇಲಧಿಕಾರಿಗಳ ಅಣತಿಯಂತೆ ನಡೆದರೆ ಅವನಿಗೆ ಗೌರವ ಸನ್ಮಾನ ಮತ್ತು ಪ್ರಮೋಷನ್. ಇಲ್ಲದಿದ್ದರೆ ಯಾವುದಾದರೂ ಷಡ್ಯಂತ್ರದಲ್ಲಿ ಸಿಲುಕಿಸಿ ಅವರನ್ನು ಕರ್ತವ್ಯದಿಂದ ಅಮಾನತ್ತು ಮಾಡುವ ಕುತಂತ್ರ ನಡೆಯುತ್ತದೆ.

ಪೋಲಿಸ್ ಸಬ್ ಇನ್ಸ್ಪೆಕ್ಟರ್ 2016ನೇ ಬ್ಯಾಚಿನ ಸುನಿಲ್ ಬಸವರಾಜ್ ತೇಲಿ ಇವರು 2020ರಲ್ಲಿ ಹರಿಹರ ನಗರ ಪೊಲೀಸ್ ಠಾಣಾ ಅಧಿಕಾರಿಯಾಗಿ ಕರ್ತವ್ಯಕ್ಕೆ ನಿಯೋಜನಗೊಂಡರು.

ಸುನಿಲ್ ಬಸವರಾಜ್ ತೇಲಿ ಇವರು ಹರಿಹರ ನಗರ ಪೊಲೀಸ್ ಠಾಣಾಧಿಕಾರಿಗಳಾಗಿ ಅಲ್ಪಸಮಯದಲ್ಲೇ ಅಪಾರ ಜನ ಮನ್ನಣೆ ಗಳಿಸಿದರು. ಇವರ ಕರ್ತವ್ಯ ನಿಷ್ಠೆಯನ್ನು ಗಮನಿಸಿದ ನಗರದ ಜನತೆ ಇವರಿಗೆ "ಹರಿಹರದ ಸಿಂಗಂ" ಎಂದು ಕರೆದರು.

ಇವರ ಅಧಿಕಾರ ಅವಧಿಯಲ್ಲಿ ಹರಿಹರ ನಗರ ಅಪರಾಧ ಮುಕ್ತ ನಗರವಾಯಿತು. ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಿದರು. ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರು ಮತ್ತು ಯಶಸ್ವಿಯಾದರು. ಟ್ರಾಫಿಕ್ ಸಮಸ್ಯೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದರು. ಇವರ ಅವಧಿಯಲ್ಲಿ ಹರಿಹರ ಅಪರಾಧ ಮುಕ್ತ ಮತ್ತು ಸುಂದರ ಹರಿಹರ ಎಂಬ ಹೆಸರು ಪಡೆಯಿತು.
ಕರೋನ ಸಂಕಷ್ಟ ಪರಿಸ್ಥಿತಿಯ ಸಂದರ್ಭದಲ್ಲಿ ನಗರ ಪ್ರದೇಶದ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಅವರಲ್ಲಿ ಧೈರ್ಯ ತುಂಬುವ ಕೆಲಸವನ್ನು ಮಾಡಿದ ಜನ ಮೆಚ್ಚಿದ ಅಧಿಕಾರಿಯಾದರು.

ಹಿಜಾಬ್ ವಿವಾದ ಗಲಾಟೆಯನ್ನು ಹತೋಟಿಗೆ ತರುವ ಮೂಲಕ ಹರಿಹರ ಮತ್ತೊಂದು ಕಾಶ್ಮೀರ ಆಗುವುದನ್ನು ತಪ್ಪಿಸಿದರು. ಹಾಗೂ ಎಲ್ಲರಲ್ಲೂ ಭಾವೈಕ್ಯತೆಯ ಸಂದೇಶವನ್ನು ಸಾರಿದರು ಮತ್ತು ಸೌಹಾರ್ದತೆಯಿಂದ ಅಣ್ಣ ತಮ್ಮಂದಿರಂತೆ ಬದುಕು ಸಾಗಿಸೋಣ ಎಂಬ ಸಲಹೆಯನ್ನು ಎರಡು ಧರ್ಮದ ಜನರಿಗೆ ಹೇಳಿದರು.

ಇವರು ಹರಿಹರದಲ್ಲಿ ಇದ್ದಷ್ಟು ದಿನ ಅಕ್ರಮ ಚಟುವಟಿಕೆಯಲ್ಲಿ ತೊಡಗಿ ಕೊಂಡವರಿಗೆ ನುಂಗಲಾರದ ತುತ್ತಾಗಿತ್ತು. ಹೇಗಾದರೂ ಮಾಡಿ ಇವರನ್ನು ತಾಲೂಕಿನಿಂದ ವರ್ಗಾವಣೆ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದಿದ್ದರು. ಆದರೂ ಕೆಲವರ ಕುತಂತ್ರ ಫಲಿಸಲಿಲ್ಲ.

ಇವರು ಹರಿಹರದಲ್ಲಿ ಸರಿಸುಮಾರು 18 ತಿಂಗಳು ಹರಿಹರ ನಗರ ಪೊಲೀಸ್ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಜನ ಸ್ನೇಹಿ ಠಾಣೆಯನ್ನಾಗಿ ಮಾಡಿದರು.

18 ತಿಂಗಳು ಹರಿಹರ ನಗರ ಪೊಲೀಸ್ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಹರಿಹರದ ಸಿಂಗಂ ಸುನಿಲ್ ಬಸವರಾಜ್ ತೇಲಿ ಇವರನ್ನು ರಾಣೇಬೆನ್ನೂರಿಗೆ ವರ್ಗಾವಣೆ ಮಾಡಲಾಯಿತು.

2022 ರಲ್ಲಿ ರಾಣೇಬೆನ್ನೂರು ಸಹರ ಪೊಲೀಸ್ ಠಾಣಾಧಿಕಾರಿಯಗಿ ಕರ್ತವ್ಯಕ್ಕೆ ನಿಯೋಜನೆಗೊಂಡ ಸುನಿಲ್ ಅವರು ಅಲ್ಲಿ ಸಹ ತಮ್ಮ ದಕ್ಷ ಆಡಳಿತವನ್ನು ಮುಂದುವರಿಸಿಕೊಂಡು ಹೋದರು. ಅವರಿದ್ದಷ್ಟು ದಿನ ರಾಣೇಬೆನ್ನೂರು ಶಹರ ಪೊಲೀಸ್ ಠಾಣೆ ಪೊಲೀಸ್ ಠಾಣೆಯಾಗಿ ಕಂಗೊಳಿಸಿತು.

ರಾಣೇಬೆನ್ನೂರು ಅಪರಾಧ ಚಟುವಟಿಕೆಗಳ ತವರೂರಾಗಿತ್ತು. ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಇವುಗಳನ್ನು ನಿಯಂತ್ರಿಸುವ ಜವಾಬ್ದಾರಿ ಸುನಿಲ್ ಬಸವರಾಜ್ ತೇಲಿ ಅವರ ಮೇಲೆ ಇತ್ತು. ಇವರು ರಾಣೆಬೆನ್ನೂರು ನಗರ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಅನುಮತಿ ನೀಡಿರಲಿಲ್ಲ. ಮಟ್ಕಾ ಚಟುವಟಿಕೆ ತಲೆ ಎತ್ತದಂತೆ ನೋಡಿಕೊಂಡರು. ಕ್ಲಬ್ ಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಸುವಂತಿಲ್ಲ ಎಂಬ ಕಟ್ಟಪ್ಪಣೆಯನ್ನು ಹೊರಡಿಸಿದರು. ಇದು ಕೆಲವರಿಗೆ ನುಂಗಲಾರದ ತುತ್ತಾಯಿತು. ಎಲ್ಲೋ ಒಂದು ಕಡೆ ಇವರನ್ನು ಮತ್ತು ಇವರ ಸುತ್ತ ಜೇಡರ ಬಲೆಯನ್ನು ಹೆಣೆಯುವ ಪ್ರಯತ್ನ ಇಲಾಖೆಯಲ್ಲಿ ನಡೆಯಿತು.

ಅಕ್ರಮ ದಂಧೆ ಕೋರರಿಗೆ ಸಿಂಹ ಸ್ವಪ್ನವಾಗಿದ್ದ ಸುನಿಲ್ ಇವರನ್ನು ಹೇಗಾದರೂ ಮಾಡಿ ರಾಣೇಬೆನ್ನೂರಿನಿಂದ ವರ್ಗಾವಣೆ ಮಾಡಿಸುವ ಕುತಂತ್ರಗಳು ತೆರೆಮರೆಯಲ್ಲಿ ನಡೆದವು. ಆದರೆ ದಂಧೆ ಕೋರರ ತಂತ್ರ ಕುತಂತ್ರಗಳು ನಡೆಯದಿದ್ದಾಗ ಅವರು ಕೈ ಹಾಕಿದ್ದೆ ಮತ್ತೊಂದು ಕುತಂತ್ರ ಕೆಲಸಕ್ಕೆ.

ಅಕ್ರಮ ದಂಧೆ ಕೋರರ ಕುತಂತ್ರದ ಫಲವಾಗಿ ರಾಣೇಬೆನ್ನೂರು ಪಿಎಸ್ಐ ಸುನಿಲ್ ಬಸವರಾಜ ತೇಲಿ ಇವರ ಮೇಲೆ ಲೋಕಾಯುಕ್ತ ದಾಳಿಯ ಮಾಸ್ಟರ್ ಪ್ಲಾನ್ ನಡೆಯಿತು.

ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ತೋರಿ ಅಕ್ರಮ ಚಟುವಟಿಕೆಗಳನ್ನ ನಿಯಂತ್ರಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟ ಸುನಿಲ್ ತೇಲಿ ಇವರನ್ನು ಲೋಕಾಯುಕ್ತ ದಾಳಿಯಲ್ಲಿ ಷಡ್ಯಂತ್ರ ರೂಪಿಸಿ ಸಿಲುಕಿಸಲಾಯಿತು. ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನ ಬೆಳೆಯುವ ಹಂತದಲ್ಲಿ ಚಿವುಟಿದರು.

ಹಲವು ಕನಸುಗಳನ್ನು ಹೊತ್ತು ಪೋಲಿಸ್ ಇಲಾಖೆಯ ಮೇಲೆ ಜನರಿಗಿದ್ದ ಅಸಮಾಧಾನವನ್ನು ದೂರ ಮಾಡುವ ನಿಟ್ಟಿನಲ್ಲಿ ಕೆಲಸಕ್ಕೆ ಸೇರಿದ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯ ಕರ್ತವ್ಯಕ್ಕೆ ಕೊಳ್ಳಿಟ್ಟರು.

ಸುನಿಲ್ ಬಸವರಾಜ ತೇಲಿ ಕ್ರೈಂ ಪ್ರಕರಣಗಳನ್ನು ಲೀಲಾ ಜಾಲವಾಗಿ ಪತ್ತೆ ಹಚ್ಚುತ್ತಿದ್ದರು. ಅಂತರಾಜ್ಯ ಕಳ್ಳರ ಎಡೆಮುಡಿ ಕಟ್ಟುವಲ್ಲಿ ಚಾಣಾಕ್ಷತೆಯನ್ನ ತೋರುತ್ತಿದ್ದರು. ಅಕ್ರಮ ಚಟುವಟಿಕೆಗಳನ್ನು ಯಾರ ಒತ್ತಡಕ್ಕೂ ಮಣಿಯದೆ ನಿಯಂತ್ರಿಸುತ್ತಿದ್ದರು. ಆದರೂ ಅಂತ ಅಧಿಕಾರಿಯನ್ನು ಕುತಂತ್ರದಿಂದ ಲೋಕಾಯುಕ್ತ ದಾಳಿಯಲ್ಲಿ ಸಿಲುಕಿದರು.

ಲೋಕಾಯುಕ್ತ ದಾಳಿಯ ಹಿಂದೆ  ಷಡ್ಯಂತ್ರ ನಡೆಸಿದ ಕಾರಣ ಎಂದು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಒಬ್ಬರು ಜೇಡರ ಬಲೆಯಲ್ಲಿ ಸಿಲುಕಿಕೊಂಡು ಮಾನಸಿಕವಾಗಿ ಕುಗ್ಗಿದ್ದಾರೆ.

ಈಗಾಗಲೇ ಲೋಕಾಯುಕ್ತರಿಂದ ಕ್ಲೀನ್ ಶೀಟ್ ಸಿಕ್ಕರು ಇವರಿಗೆ ನಿರ್ದಿಷ್ಟವಾದ ಸ್ಥಳವನ್ನ ನೀಡುವಲ್ಲಿ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದಾರೆ. ಇವರ ಕರ್ತವ್ಯಕ್ಕೆ ಅಡ್ಡಗಾಲಾಗಿ ನಿಂತಿದ್ದಾರೆ. ಇವರಿಗೂ ಯಾವುದೇ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸದಂತೆ ನೋಡಿಕೊಳ್ಳುತ್ತಿದ್ದಾರೆ.

ಸುನಿಲ್ ಬಸವರಾಜ್ ತೇಲಿ ಅವರು ಲೋಕಾಯುಕ್ತರಿಂದ ಪಡೆದ ಮೇಲು ಪೊಲೀಸ ಇಲಾಖೆಯ ಮೇಲಧಿಕಾರಿಗಳು ಇವರಿಗೆ ಸ್ಥಳ ನಿಯೋಜನೆ ಮಾಡುತ್ತಿಲ್ಲ ಮತ್ತು ಕರ್ತವ್ಯಕ್ಕೆ ಹಾಜರಾಗಲು ಏಕೆ ಬಿಡುತ್ತಿಲ್ಲ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ. ಇವರು ಕರ್ತವ್ಯಕ್ಕೆ ಬರಲಿದರೆ ಎಲ್ಲಿ ತಮ್ಮ ಬಂಡವಾಳ ಬಯಲಾಗುತ್ತದೆಯೋ ಎಂಬ ಭಯವು ಅಥವಾ ಇವರಿಂದ ಮತ್ತೆ ಅಕ್ರಮ ಚಟುವಟಿಕೆಗಳಿಗೆ ನಿಯಂತ್ರಣಕ್ಕೆ ಬಂದು ತಮ್ಮ ಖಜಾನೆ ತುಂಬಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ ಎಂಬ ಆತಂಕವು ಒಟ್ಟಾರೆಯಾಗಿ ಸುನಿಲ್ ಇವರನ್ನು ಕಂಡರೆ ಪೊಲೀಸ್ ಇಲಾಖೆಯಲ್ಲಿ ಭಯ ಶುರುವಾಗಿದೆ.

ಸತ್ಯ ಒಂದಲ್ಲ ಒಂದು ದಿನ ಗೆಲ್ಲುತ್ತದೆ ಧರ್ಮ ತನ್ನ ಗತವೈಭವವನ್ನ ಪಡೆಯುತ್ತದೆ. ಕುತಂತ್ರ ನಡೆಸಿದರು ಸುನಿಲ್ ಬಸವರಾಜ್ ತೇಲಿಯ ಹಿಂದೆ ಬಹುದೊಡ್ಡ ಯುವಕರ ಪಡೆ ಇದೆ. ಅವರಿಗಾಗಿ ಹೋರಾಟ ಮಾಡಲು ಯುವಕರು ತಯಾರಾಗಿ ನಿಂತಿದ್ದಾರೆ. ಇದ್ಯಾವುದಕ್ಕೂ ಅವಕಾಶ ಮಾಡಿಕೊಡದೆ ಸಂಬಂಧಿಸಿದವರು ಸುನಿಲ್ ಬಸವರಾಜ್ ತೇಲಿ ಅವರಿಗೆ ಕರ್ತವ್ಯ ನಿರ್ವಹಿಸಲು ಅನು ಮಾಡಿಕೊಟ್ಟರೆ ಒಳ್ಳೆಯದು ಇಲ್ಲದಿದ್ದರೆ ಮುಂದೊಂದು ದಿನ ತೇಲಿ ಪರವಾಗಿ ರಾಜ್ಯದಲ್ಲಿ ದೊಡ್ಡ ಕ್ರಾಂತಿ ನಡೆಯುತ್ತದೆ ಆಗ ಕೆಲವರ ಬಣ್ಣ ಬಯಲಾಗುತ್ತದೆ ಮುಖವಾಡ ಕಳಚಿ ಬೀಳುತ್ತದೆ. ಕೂಡಲೇ ಪ್ರಾಮಾಣಿಕ ಅಧಿಕಾರಿಯನ್ನು ಕರ್ತವ್ಯಕ್ಕೆ ಮರಳಲು ಗೃಹ ಸಚಿವರು ಸೇರಿದಂತೆ ಇಲಾಖೆಯ ಮೇಲಧಿಕಾರಿಗಳು ಸಹಕರಿಸಬೇಕು ಇದಕ್ಕೆ ಸಂಬಂಧಿಸಿದಂತೆ ಸಮಗ್ರವಾದ ಮಾಹಿತಿಯನ್ನು ಪಡೆದು ಸುನಿಲ್ ಬಸವರಾಜ್ ತೇಲಿ ಇವರ ಸುತ್ತ ಏಕೆ ಜೇಡರ ಬಲೆಯನ್ನು ಎಳೆಯಲಾಗಿದೆ ತಿಳಿಯಬೇಕು ಎಂಬುದೇ ನಮ್ಮ ಮಾಧ್ಯಮದ ಆಶಯವಾಗಿದೆ.

Post a Comment

0 Comments