ಬಿರ್ಲಾ ಗ್ರಾಸಿಂ ಕಂಪನಿಯಿಂದ ಪರಿಸರಕ್ಕೆ ಹಾನಿ ಭಾಗ-2

ಪ್ರಿಯ ಓದುಗರ ಮಿತ್ರರೇ ಕಳೆದ ಸಂಚಿಕೆಯಲ್ಲಿ ಕುಮಾರ ಪಟ್ಟಣಂ ಬಿರ್ಲಾ ಗ್ರಾಸಿಂ ಕಂಪನಿಯಿಂದ ತುಂಗಭದ್ರ ನದಿ ವಿಷವಾಗುತ್ತಿದ್ದಾಳೆ. ಅಂದರೆ ಜಲ ಮಾಲಿನ್ಯವಾಗುತ್ತಿದೆ ಎಂಬ ಸುದ್ದಿಯನ್ನು ಬಿತ್ತರಿಸಲಾಯಿತು. ಅಂದು ನಾವು ಬಿರ್ಲಾ ಗ್ರಾಸಿಮ್ ಕಂಪನಿಯಿಂದ ಜಲ ಮಾಲಿನ್ಯ, ಶಬ್ದ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಹೇಳಲಾಯಿತು. ಅದರಂತೆ ಜಲ ಮಾಲಿನ್ಯದ ನೈಜ್ಯ ವಿಡಿಯೋ ಚಿತ್ರೀಕರಣವನ್ನು ನಿಮ್ಮ ಮುಂದೆ ಬಿತ್ತರಿಸಲಾಯಿತು. 
ಈಗ ಪರಿಸರ ಮಾಲಿನ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಮುಂದೆ ನಮ್ಮ ಸುದ್ದಿ ವಾಹಿನಿಯು ವಿಸ್ತಾರವಾದ ವರದಿ ಒಂದನ್ನ ಇಡಲಿದೆ. ಸಂಪೂರ್ಣ ಕಾನೂನಿನ ಅರಿವಿನೊಂದಿಗೆ ಬರಹ ಮಾಡಲಾಗುತ್ತಿದೆ. ಪತ್ರಕರ್ತನ ಜವಾಬ್ದಾರಿಯನ್ನು ಮತ್ತು ಪತ್ರಿಕಾ ಧರ್ಮವನ್ನು ಯಾವ ರೀತಿಯಲ್ಲಿ ಪಾಲನೆ ಮಾಡಬೇಕು ಎಂಬುದನ್ನು ತೋರಿಸಲಾಗುತ್ತದೆ. "ನನಗೆ ನಾನೇ ವಕೀಲ".
ಅರಣ್ಯ ಇಲಾಖೆಯ ಪಾತ್ರ ಕೈಗಾರಿಕೆ ಸ್ಥಾಪನೆಯಲ್ಲಿ ಎಷ್ಟರಮಟ್ಟಿಗೆ ಇರುತ್ತದೆ ಎಂಬುದನ್ನ ತೋರಿಸಲಾಗುತ್ತದೆ.

ವಿಸ್ತಾರವಾದ ವರದಿ ನಿಮ್ಮ ಮಂದಾರ ನ್ಯೂಸ್ ವೆಬ್ ಪೋರ್ಟಬಲ್ ಸುದ್ದಿ ವಾಹಿನಿಯಲ್ಲಿ.

ಅಂತರ್ಜಲ ಮಟ್ಟ ತಗ್ಗುವುದಕ್ಕೆ ಕಾರಣವಾಗುತ್ತಿರುವ ನೀಲಗಿರಿ ಮರ ಬೆಳೆಯುವುದನ್ನು ರಾಜ್ಯಾದ್ಯಾಂತ ಸಂಪೂರ್ಣ ನಿಷೇಧಿಸುವ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ 2015ರ ಜುಲೈನಲ್ಲಿ ಸೂಚನೆ ನೀಡಿತ್ತು. ಗಂಗಾ ಸೇವಾ ಮಿಷನ್‌ ಟ್ರಸ್ಟ್‌ ಸಲ್ಲಿಸಿದ್ದ ಪಿಐಎಲ್‌ ಆಲಿಸಿದ ಹಂಗಾಮಿ ಸಿಜೆ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಅಧ್ಯಯನ ನಡೆಸಿ ಸೂಕ್ತ ಕ್ರಮ ಜರುಗಿಸಲು ಸೂಚಿಸಿತ್ತು. 20017 ಫೆ.25ರಂದೆ ನೀಲಗಿರಿ ಮತ್ತು ಅಕೇಶಿಯಾ ಬೆಳೆಯದಂತೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿತ್ತು. ಅಂತರ್ಜಲ ಮಟ್ಟ ಕುಸಿತಕ್ಕೆ ಈ ಮರಗಳೇ ಕಾರಣ ಎಂದು ಸರಕಾರ ಆಗ ಕಾರಣ ನೀಡಿತ್ತು. .

ನೀಲಗಿರಿ ಮರಗಳಿರುವೆಡೆ ಒಂದು ಹುಲ್ಲು ಕಡ್ಡಿಯೂ ಬೆಳೆಯದು. ಇದನ್ನಾಧರಿಸಿಯೇ ಹಿಂದಿನ ಸರಕಾರ ನಿಷೇಧ ಹೇರಿತ್ತು. ಮುಂದೆಯೂ ಯಾವುದೇ ಕಾರಣಕ್ಕೂ ತೆರವಿಗೆ ಯತ್ನಿಸಬಾರದು. ಈಗ ಇರುವ ನೀಲಗಿರಿ ಮರಗಳನ್ನೇ ತೆರವುಗೊಳಿಸಬೇಕು.

ನಿರೀಕ್ಷಿಸಿ ಬರಹ ಮುಂದುವರಿಯುತ್ತದೆ......

8880499904

Post a Comment

0 Comments