ಗೋವುಗಳನ್ನು ರಕ್ಷಣೆ ಮಾಡಿದರೆ, ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ: ಯತ್ನಾಳ.

ಹರಿಹರ ಫೆ. 12: ಗೋವುಗಳನ್ನು ರಕ್ಷಣೆ ಮಾಡಿದರೆ, ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ ರಾಮ ಮಂದಿರ ನಿರ್ಮಾಣವಾಗಿದ್ದರಿಂದ ಆಧ್ಯಾತ್ಮಿಕ ಭಾವನೆ ಜನರಲ್ಲಿ ಹೆಚ್ಚಾಗಿದೆ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಪ್ರಾಯಪಟ್ಟರು.
ಹರಿಹರದ ಸಮೀಪ ಕೋಡಿಯಲ ಹೊಸಪೇಟೆಯಲ್ಲಿ ಐದನೇ ವರ್ಷದ ತುಂಗಾ ರತಿ ಕಾರ್ಯಕ್ರಮದ ವೇದಿಕೆ  ಸಮಾರಂಭವನ್ನು ಉದ್ಘಾಟಿಸಿ ಹಾಗೂ ವಿಶ್ವ ಮಾತೆ ಪುಣ್ಯಕೋಟಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. 
ಧರ್ಮವನ್ನು ಯಾರು ರಕ್ಷಣೆ ಮಾಡುತ್ತಾರೋ ಅವರನ್ನ ಧರ್ಮ ರಕ್ಷಣೆ ಮಾಡುತ್ತದೆ ಮನುಷ್ಯನ ದೇಹಕ್ಕೆ ಮತ್ತು ಪ್ರಾಣಿ ಪಕ್ಷಿಗಳಿಗೆ ನೀರು ಅತ್ಯವಶ್ಯಕ ವಸ್ತುವಾಗಿದ್ದು ಹಾಗಾಗಿ ನದಿಗೆ ವಿಶೇಷ ಪೂಜೆ ಆರತಿ ಮಾಡುವುದರಿಂದ ಜೀವಕ್ಕೆ ಯಾವುದೇ ರೀತಿಯ ಮಾರಕವಾದ ರೋಗ ಲಕ್ಷಣಗಳು ಕಂಡುಬರುವುದಿಲ್ಲ.
ದೇಶದಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದರಿಂದ ದಿನದಿಂದ ದಿನಕ್ಕೆ ಜನರಲ್ಲಿ ಆಧ್ಯಾತ್ಮಿಕ ಭಾವನೆಗಳು ಹೆಚ್ಚಾಗಿದೆ ಜೊತೆಗೆ ಹಿರಿಯರು ಮಾಡಿಕೊಂಡು ಬಂದಂತಹ ಸಂಪ್ರದಾಯ ಕಡೆಗೆ ಉಳಿಸಿ ಬೆಳೆಸುವುದರ ಮೂಲಕ ಆಸಕ್ತಿ ತೋರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೆಡಿಕಲ್ ಇಂಜಿನಿಯರಿಂಗ್ ಇನ್ನು ಮುಂತಾದ ವಿದ್ಯಾ ಸಂಸ್ಥೆಗಳನ್ನ ತೆರೆಯುವುದನ್ನು ಕಾಣುತ್ತಿದ್ದೇವೆ. ಆದರೆ ಗೋ ರಕ್ಷಣೆ ಮಾಡುವ ನಿಟ್ಟಿನಲ್ಲಿ ಗೋ ಶಾಲೆಯನ್ನು ತೆರೆಯುವ ಸಂಖ್ಯೆ ಕಡಿಮೆಯಾಗಿದ್ದು 
ಪುಣ್ಯಕೋಟಿ ಮಠದಲ್ಲಿ ಗೋ ರಕ್ಷಣೆ ಮಾಡಲು ಬಂದರೆ ನನ್ನ ಕಡೆಯಿಂದ ಗೋವುಗಳನ್ನು ಕೊಡುವುದಕ್ಕೆ ಸಿದ್ಧನಿದ್ದು.
ಅವುಗಳನ್ನು ಲಾಲನೆ ಪಾಲನೆ ಮಾಡಿ. ಆಯಸ್ಸು ಮುಗಿದ ನಂತರ ಅವುಗಳನ್ನು ಕಸಾಯಿ ಖಾನೆಗಳಿಗೆ 
ಮಾರಾಟ ಮಾಡದೆ ಮತ್ತೆ ನಮಗೆ ವಾಪಸ್ ಕೊಡುವುದಕ್ಕೆ ಸಿದ್ಧರಿದ್ದರೆ ಮಾತ್ರ ಕೊಡುವುದಾಗಿ ಹೇಳಿದರು.
ನನ್ನ ಗೋಶಾಲೆಯಲ್ಲಿ 40 ಬಗೆಯ ಉತ್ಪನ್ನಗಳನ್ನು ಸಿದ್ಧತೆ ಮಾಡಲಾಗುತ್ತದೆ. ಜೊತೆಗೆ ದಿನಕ್ಕೆ 2 ಸಾವಿರ ಶುದ್ಧ ವಿಭೂತಿ. ಕುಂಕುಮ. ಕರ್ಪೂರ ಸೇರಿದಂತೆ ಅನೇಕ ವಸ್ತುಗಳ ಉತ್ಪಾದನೆ ಆಗುತ್ತಿದೆ. ವಿವಿಧ ಸಹಕಾರಿ ಸಂಘಗಳನ್ನು ಸ್ಥಾಪಿಸಿ ಆ ಮೂಲಕ ಸುಮಾರು 3,5 ಸಾವಿರ ಯುವಕರಿಗೆ ಉದ್ಯೋಗಗಳನ್ನು ಒದಗಿಸಿ ಅವರ ಸ್ವಲಂಬನೆ ಜೀವನ ನಡೆಸುವುದಕ್ಕೆ ದಾರಿ ಮಾಡಿಕೊಡಲಾಗಿದೆ ಎಂದು ಹೇಳಿದರು.
ವಿಧಾನಸಭೆಯ ಉಪಸಭಾಪತಿ ಹಾವೇರಿಯ ಶಾಸಕ ರುದ್ರಪ್ಪ ಮಾನಪ್ಪ ಲಮಾಣಿ ಸಜ್ಜನ ಜನನಾಯಕ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು
ಶ್ರೀ ಮಠದ ಮುಂದಿನ ಭಾಗದಲ್ಲಿ ನದಿಗೆ ಹರಿಯುವ 
ಕಲುಷಿತ ನೀರನಿಂದ ಉಂಟಾಗುವ ಸಮಸ್ಯೆಯನ್ನು ಪರಿಹರಿಸಿ ಮೇಲ್ ಡೆಕ್ ಹಾಕುವುದಕ್ಕೆ ಶಾಸಕ ಪ್ರಕಾಶ್ ಕೋಳಿವಾಡ ಮುಂದಾಗಬೇಕು ಎಂದು ಹೇಳಿದರು.
ಪ್ರಸ್ತಾವಿಕ ನುಡಿಗಳ ಭಾಷಣದಲ್ಲಿ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಬಾಲ ಯೋಗಿ ಮಹಾಸ್ವಾಮಿಗಳು ಮಾತನಾಡಿ ಮಠಕ್ಕೆ ಸಹಕಾರ ಮಾಡಿರುವವರನ್ನು ಎಲ್ಲರನ್ನೂ ಸ್ಮರಿಸಿದರು.
ಈ ವೇಳೆ ಪುನೀತ್ ಶಾಸ್ತ್ರಿ. ಕುಮಾರ್ ಶಾಸ್ತ್ರಿ. ಮಂಜಯ್ಯ ಶಾಸ್ತ್ರಿ. ರೇಣುಕಾ ಸ್ವಾಮಿ ಹಿರೇಮಠ. ರೇಣುಕಯ್ಯ ಶಾಸ್ತ್ರಿ. ಇವರುಗಳು ತುಂಗಾ ರತಿ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ನಂಜಾವದೂತ ಮಹಾಸ್ವಾಮಿ ಸ್ಪಟಿಕಪುರಿ ಮಹಾ ಸಂಸ್ಥಾನ ಪಟ್ಟ ನಾಯಕನಹಳ್ಳಿ.
ಚಂದ್ರಶೇಖರ ಶಿವಾಚಾರ್ಯ ಸ್ವಾಮಿ. ಗುರು ಶಾಂತಿ ಸ್ವರ ಸಂಸ್ಥಾನ ಹಿರೇಮಠ ಹುಕ್ಕೇರಿ.
ಡಾ.ಸಿದ್ದರಾಮ ಶಿವಾಚಾರ್ಯ ಸ್ವಾಮಿ. ವಿಶ್ವರಾಧ್ಯ ತಪೋವನ ಮಠ ಸಾಕಾಪುರ
ವೃಷಭೇಂದ್ರ ದೇಶಿಕೇಂದ್ರ ಮಹಾಸ್ವಾಮಿ ನೂಲಿ ಚಂದಯ್ಯ ಗುರು ಪೀಠ ಶ್ರೀ ಕ್ಷೇತ್ರ ನಂದಿ ಹೊದಲೂರು.
ಸಿದ್ದಲಿಂಗ ದೇವರು ಸಿದ್ದಲಿಂಗೇಶ್ವರ ಮಠ ವಿಜಯಪುರ.
ಶಾಸಕರಾದ ಪ್ರಕಾಶ್ ಕೋಳಿವಾಡ. ಬಿ.ಪಿ ಹರೀಶ್
ಮಾಜಿ ಶಾಸಕ ಎಚ್ಎಸ್ ಶಿವಶಂಕರ್.
ಆರೈಕೆ ಆಸ್ಪತ್ರೆಯ ಡಾ. ರವಿಕುಮಾರ್. ತಪೋವನದ ಸಂಸ್ಥಾಪಕ ಡಾ ಶಶಿಕುಮಾರ್ ಮೆಹರ್ವಾಡೆ.
ಡಾ ಎಚ್ ವಿಶ್ವನಾಥ್. ಕನ್ನಡ ಅಧ್ಯಯನದ ವಿಭಾಗದ ಮುಖ್ಯಸ್ಥರು.
ನಗರ ಅಭಿವೃದ್ಧಿ ಯೋಜನೆ ಅಧಿಕಾರಿ ಚೋಳಪ್ಪ.
ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ ಮಂಜುನಾಥ್.
ಗ್ರಾಮ ಪಂಚಾಯತಿ ಸದಸ್ಯರಾದ ಚೇತನ್ ಪೂಜಾರ್. ನಾಗರಾಜ ಜಿಗಳಿ. ಮಂಜುನಾಥ್ ಜಿಗಳಿ. ದಿನೇಶ್ ಬಿ ಹಳ್ಳಪ್ಪನವರ್. ಗುತ್ತಿಗೆದಾರ ಕೆಬಿ ಮಂಜುನಾಥ್.
ಹಾಗೂ ಮಠದ ಶ್ರೀ ಭಕ್ತರು ಉಪಸ್ಥಿತರಿದ್ದರು

ವರದಿ.ಯಮನೂರು

Post a Comment

0 Comments