ಮಂದಾರ ನ್ಯೂಸ್ , ಹರಿಹರ : ಕರ್ನಾಟಕದ ಹರಿಹರ ಎಂದರೇ ಕರ್ನಾಟಕದ ಮದ್ಯ ಪ್ರದೇಶ ದಕ್ಷಿಣ ಕಾಶಿ ಹಾಗೂ ಮೈಸೂರು ಪ್ರಾಂತ್ಯದ ಕೊನೆಯ ಸ್ಥಳ ಎಂದೇ ಪ್ರಸಿದ್ಧಿಯಾಗಿದೆ. ಇಂತಹದರಲ್ಲಿ ಇಲ್ಲಿ ಯಾವ ನಿಯಮಗಳು ಅಚ್ಚುಕಟ್ಟಾಗಿ ಪಾಲನೆಯಾಗುವುದಿಲ್ಲ. ಹೌದು ಇದಕ್ಕೆಲ್ಲ ಕಾರಣ ಆಡಳಿತದಲ್ಲಿ ಸ್ಥಳೀಯ ರಾಜಕಾರಣಿಗಳ ಹಸ್ತಕ್ಷೇಪ. ವ್ಯಾಪಾರಿಗಳ ಅಸಹಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮನೋಭಾವ ಹರಿಹರ ತಾಲ್ಲೂಕು ಹಿಂದುಳಿಯುವಂತೆ ಮಾಡಿದೆ. ತಾಲ್ಲೂಕಿನಲ್ಲಿ ಸಂಚಾರ ನಿಯಮಗಳೂ ಪಾಲನೆಯಾಗುವುದಿಲ್ಲ. ಪಾದಚಾರಿಗಳ ಸುರಕ್ಷತೆಗೆ ಇಲ್ಲಿ ಕವಡೆ ಕಾಸಿನ ಬೆಲೆ ಇಲ್ಲ. ಮನುಷ್ಯರ ಜೀವಕ್ಕೂ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ. ಹರಿಹರ ನಗರ ಪ್ರದೇಶ ದಿನೇದಿನೇ ಬೆಳೆಯುತ್ತಿದೆ. ಆದರೆ, ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಮೂಲಸೌಲಭ್ಯಗಳು ವಿಸ್ತರಣೆ ಆಗಿಲ್ಲದಿರುವ ಕಾರಣ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿ ಫುಟ್‌ಪಾತ್‌ಗಳಲ್ಲಿ ಅಡ್ಡಲಾಗಿ ಬೋರ್ಡ್ಗಳು, ಅಡ್ಡ ಗೋಡೆಗಳು, ಪೈಪುಗಳು, ಸ್ಟ್ಯಾಂಡ್, ವಾಹನಗಳ ಅಡ್ಡ ಗಟ್ಟುವಿಕೆ, ಬ್ಯಾರಿಕೇಡ್ ಮುಂತಾದವುಗಳನ್ನು ಅಡ್ಡಗಟ್ಟಿ ರಸ್ತೆ ಹಾಗೂ ಫುಟ್‌ಪಾತ್‌ಗಳ ಅತಿಕ್ರಮಣ, ವಾಹನ ದಟ್ಟಣೆಯಿಂದಾಗಿ ಪಾದಚಾರಿಗಳು ಜೀವ ಕೈಯಲ್ಲಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗದಿದ್ದರು ಪರವಾಗಿಲ್ಲ, ಕನಿಷ್ಠ ಪಕ್ಷ ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಪುಟ್ ಪಾತ್ ಅತಿಕ್ರಮಣ ತೆರವುಗೊಳಿಸಬೇಕು.
ಶಿವಮೊಗ್ಗ - ಹರಪನಹಳ್ಳಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ, ಹರಿಹರ ನಗರಕ್ಕೆ ಪ್ರತಿ ಮಂಗಳವಾರ, ಸಾವಿರರು ಜನರು ಸಂತೆಗೆ ಎಂದು ಬರುತ್ತಾರೆ ಇಲ್ಲಿಯ ಜನ ಸಂದಣಿ ಹಾಗೂ ವಿಪರೀತ ವಾಹನ ಚಲಿಸುತ್ತವೆ, ಮಂಗಳವಾರ ಸಂತೆ ದಿನವಾಗಿದ್ದರಿಂದ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿರುವ ಪರಿಣಾಮ ಸಂತೆ ಮಾಡಲು ಬರುವ ಮಹಿಳೆಯರು, ವೃದ್ಧರು ತೀವ್ರ ತೊಂದರೆಗೆ ಒಳಗಾಗಬೇಕಿದೆ, ಸಂತೆಗೆ ಬಂದ ಜನರಂತೂ ಪುಟ್ ಪಾತ್ ಇಲ್ಲದೆ ರಸ್ತೆಯಲ್ಲಿ ಪ್ರಯಾಣಿಸುವಾಗ ಜೀವ ಭಯದಿಂದಲೇ ಸಂಚರಿಸಬೇಕಿದೆ.
ಪ್ರತಿ ದಿನ ಇದೇ ಮಾರ್ಗಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಸಾವನ್ನಪ್ಪಿದ್ದಾರೆ. ನಗರದೆಲ್ಲೆಡೆ ಅಡ್ಡಾದಿಡ್ಡಿ ಪಾರ್ಕಿಂಗ್‌ಗೆ ಕಡಿವಾಣ ಇಲ್ಲವಾಗಿದೆ. ಇದರಿಂದ ಅಪಘಾತ ಸೇರಿದಂತೆ ವಿವಿಧ ತೊಂದರೆಗಳಿಗೆ ಸಿಲುಕುವಂತಾಗಿದೆ. ಆದ್ದರಿಂದ, ವಾಹನ ಪಾರ್ಕಿಂಗ್‌ಗೆ ನಗರಸಭೆ, ಪೊಲೀಸ್ ಇಲಾಖೆ ಜಂಟಿಯಾಗಿ ಸರಿಯಾದ ವ್ಯವಸ್ಥೆ ರೂಪಿಸಬೇಕಿದೆ, ಇಲ್ಲವಾದರೆ ಸಂಚಕಾರ ಕಟ್ಟಿಟ್ಟ ಬುತ್ತಿ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ. ಹರಿಹರ PB ರಸ್ತೆಯ ಫುಟ್‌ಪಾತ್ ಅನ್ನು ಅಂಗಡಿಕಾರರು ಅತಿಕ್ರಮಣ ಮಾಡಿದ್ದಲ್ಲದೇ ರಸ್ತೆಗೆ ಕಸವನ್ನು ಚೆಲ್ಲಿ ಗಲೀಜು ಮಾಡುತ್ತಿದ್ದಾರೆ. ಈ ಕೂಡಲೇ ಕಣ್ಣು ಮುಚ್ಚಿ ಕುಳಿತ ನಗರಸಭೆಯ ಅಧಿಕಾರಿಗಳು ಪುಟ್ ಪಾತ್ ಅತಿಕ್ರಮಣ ತೆರವುಗೊಳಿಸಿ. ಪಾದಚಾರಿಗಳ ಸಂಚಾರಕ್ಕೆ ಸುಗಮ ಮಾರ್ಗ ರೂಪಿಸಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ
0 Comments