ಮಂದಾರ ನ್ಯೂಸ್ ಅಭಿಯಾನ....ನಾವು ಶವವಾಗುವ ಮುನ್ನ.... ತುಂಗಾ ಭದ್ರಾ ನದಿಯನ್ನು ರಕ್ಷಿಸೋಣ.....

ಮಂದಾರ ನ್ಯೂಸ್ : ಹಗಲು ರಾತ್ರಿ ಒಂದು ಮಾಡಿ ಏನಾದರೂ ಸಾಧಿಸಲು ಯತ್ನಿಸಿದನು.
ಊಹುಂ ಏನೂ ಆಗಲಿಲ್ಲ. ಯಾವ ಮಂತ್ರಿ ಅಧಿಕಾರಿಯೂ ಸ್ಪಂದಿಸಲಿಲ್ಲ. ಜನರೂ ಯಾವುದೇ ಉತ್ಸಾಹ ತೋರಲಿಲ್ಲ. ಮಾಧ್ಯಮಗಳು ಪತ್ರಿಕೆಗಳಲ್ಲಿ ದೊಡ್ಡದಾಗಿ ಬರೆದರು. ಆದರೂ ಈ ವ್ಯವಸ್ಥೆಯಲ್ಲಿ ಯಾವುದೇ ಸುಧಾರಣೆ ಆಗಲಿಲ್ಲ. ಬದಲಾಗಿ ಆಹಾರ, ನೀರು, ಗಾಳಿ ಇನ್ನಷ್ಟು ಮಲಿನವಾದವು. ಈ ರೀತಿಯ ದುರಂತಗಳು ದಿನನಿತ್ಯದ ಭಾಗಗಳಾದವು.*

"ಕಿರಾತಕ ಆಡಳಿತಗಾರರೇ,
ಸತ್ಯ ಅರಿಯದ ಮಾಧ್ಯಮಗಳೇ,
ಮೂರ್ಖ ಸಾರ್ವಜನಿಕರೇ,
ಈಗಲಾದರೂ ಎಚ್ಚೆತ್ತುಕೊಳ್ಳಿ, ನಿಮ್ಮ ದುರಾಸೆಯ ಫಲವಾಗಿ ನೀವು ತುಂಬಾ ತುಂಬಾ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದ್ದೀರಿ.ನಿಮ್ಮ ನಾಶಕ್ಕೆ ಯಾವ ಬಾಂಬು ಬಂದೂಕು ಯುದ್ದಗಳು ಬೇಡ. ನಿಮ್ಮ ಗಾಳಿ ,ನೀರು, ಆಹಾರಗಳೇ ಸಾಕು ನಿಮ್ಮನ್ನು ನಿಧಾನವಾಗಿ ಕೊಲ್ಲಲು.

ಈಗಾಗಲೇ ನೀವು ಆ ವಿಷಚಕ್ರದೊಳಗೆ ಸಿಲುಕಿರಿವಿರಿ. ಗಾಳಿ ನೀರು ಆಹಾರ ಅಪಾಯದ ಮಟ್ಟವನ್ನು ತಲುಪಿ ಪ್ರತಿನಿತ್ಯ ನಿಮ್ಮ ದೇಹ ಸೇರುತ್ತಿದೆ. ನಿಮ್ಮ ಮಕ್ಕಳು ಹುಟ್ಟಿದ ತಕ್ಷಣದಿಂದ 5/10 ವರ್ಷಗಳ ವರೆಗೆ ನೀಡುತ್ತಿರುವ ಚುಚ್ಚುಮದ್ದುಗಳೇ ಹೇಳುತ್ತವೆ ಆ ಮಕ್ಕಳ ರೋಗ ನಿರೋಧಕ ಶಕ್ತಿಯ ದುರ್ಬಲತೆಯ ಬಗ್ಗೆ.

ಧೈರ್ಯವಾಗಿ ಪ್ರಕೃತಿ ಸಹಜ ಹಣ್ಣು ತರಕಾರಿಗಳನ್ನೇ ತಿನ್ನದಷ್ಟು ಅನುಮಾನಕ್ಕೆ ಒಳಗಾಗಿದ್ದೀರಿ. ಪ್ರತಿ ಗಲ್ಲಿ ಗಲ್ಲಿಗಳಲ್ಲಿ ದೇಹ ಪರೀಕ್ಷೆಯ ಲ್ಯಾಬರೇಟರಿಗಳನ್ನು ಯಾರ್ಯಾರೋ ಸಾಲ ಮಾಡಿ ಪ್ರಾರಂಭಿಸಿ ಅಪಾರ ಹಣಗಳಿಸುತ್ತಿದ್ದಾರೆ. ಅದರ ಪರಿಣಾಮ ಆರೋಗ್ಯವಂತ ವ್ಯಕ್ತಿಗಳೇ ಇಲ್ಲವಾಗಿದ್ದಾರೆ‌, ಎಲ್ಲರ ದೇಹದಲ್ಲೂ ಏನಾದರೂ ಒಂದು ಕೊರತೆ ಪತ್ತೆ ಹಚ್ಚಲಾಗುತ್ತಿದೆ.
ಭಾರತದ 100 ಶ್ರೀಮಂತರಲ್ಲಿ ಕೆಲವು ಔಷದೀಯ ಕಂಪನಿಯ ಮುಖ್ಯಸ್ಥರು ಜಾಗ ಪಡೆದಿದ್ದಾರೆ ಎಂಬುದೇ ನಮ್ಮಗಳ ಆರೋಗ್ಯ ಗುಣಮಟ್ಟದ ಕುಸಿತಕ್ಕೆ ಬಹುದೊಡ್ಡ ಸಾಕ್ಷ್ಯವಾಗಿದೆ.

ದೇಶದ ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಅಧಿಕಾರದ ಕುರ್ಚಿಗಾಗಿ ರಣ ಹದ್ದುಗಳಂತೆ - ಬಕ ಪಕ್ಷಿಗಳಂತೆ ನನ್ನಂತವರ ಹೆಣಕ್ಕಾಗಿ ಕಾಯುತ್ತಿರುವಿರಿ. ನಿಮ್ಮ ಸ್ವಾರ್ಥದ ಮ್ಯಾಜಿಕ್ ನಂಬರ್ ಗಾಗಿ ತಿಂಗಳಾನುಗಟ್ಟಲೆ, ಕೋಟ್ಯಾಂತರ ಹಣ ಖರ್ಚು ಮಾಡಿ ಕುರ್ಚಿ ಬದಲಾಯಿಸಿಕೊಳ್ಳುವಿರಿ. ಮಾಧ್ಯಮಗಳಿಗೆ ಇದು ಹಬ್ಬ. ಸಾರ್ವಜನಿಕರಿಗೆ ಮನೋರಂಜನೆ, ನತದೃಷ್ಟರಿಗೆ ತಿಥಿ.

ಇಷ್ಟೊಂದು ನಾಚಿಕೆಗೆಟ್ಟ -  ಅನಾಗರಿಕ - ಅನಾರೋಗ್ಯಕಾರಿ - ನಪುಂಸಕ ವಾತಾವರಣದಲ್ಲಿ ಬದುಕುತ್ತಿದ್ದರೂ ಇನ್ನೂ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಿರುವಿರಿ. 

ಅಯ್ಯೋ ನಿಮ್ಮ ಬಗ್ಗೆ ಮರುಕ ಉಂಟಾಗುತ್ತದೆ. ನನಗೆ ಆಗಬಹುದಾದದ್ದು ಏನೂ ಇಲ್ಲ. ಆದರೆ ಕನಿಷ್ಠ ನಿಮ್ಮ ಮಕ್ಕಳಿಗೆ ಒಳ್ಳೆಯ ಪ್ರಕೃತಿ ಸಹಜ ಸಂಪನ್ಮೂಲಗಳನ್ನು ಉಳಿಸಿಕೊಡಿ.

ಒಬ್ಬೊಬ್ಬ ಪ್ರಜೆಯೂ ಪ್ರಕೃತಿ ಉಳಿಸುವ ಸೈನಿಕರಾಗಿ. ಈ ಕಪಟ ಆಡಳಿತಗಾರರ ಮುಖವಾಡವನ್ನು ಕಳಚಿ ಹಾಕಿ. ಟೈಂಪಾಸ್ ಹೇಳಿಕೆಗಳು, ಕಾಲ ಕೊಲ್ಲುವ ಯೋಜನೆಗಳು, ದುಡ್ಡಿನ ಸಾಮ್ರಾಜ್ಯ ಕಟ್ಟಲು  ಪ್ರಕೃತಿಯ ಮೇಲೆಯೇ ಅತ್ಯಾಚಾರ ಮಾಡುವ ಕಾರ್ಪೊರೇಟ್ ಕುಳಗಳು ಮುಂತಾದ ಎಲ್ಲರ ಮೇಲೂ ಯುದ್ದೋಪಾದಿಯಲ್ಲಿ ತಿರುಗಿ ಬೀಳಿ. ಸರ್ಕಾರ ಎಂಬುದು ಹಣ ದೋಚುವ ಖಜಾನೆಯಲ್ಲ. ಅದೊಂದು ನಮ್ಮನ್ನೆಲ್ಲಾ ರಕ್ಷಿಸುವ ಬೃಹತ್ ಶಕ್ತಿ. ಅದರ ಜೊತೆ ಆಟವಾಡಲು ಯಾರಿಗೂ ಬಿಡಬೇಡಿ. ಹಣಕ್ಕಾಗಿ ವಿಷ ಉಣಿಸುವ ಕಂಪನಿಗಳ ಮೇಲೆ ದಾಳಿ ಮಾಡಿ ನಾಶಪಡಿಸಿ.

ಇದು ನಿಮಗಾಗಿ, ನಿಮ್ಮ ಮಕ್ಕಳಿಗಾಗಿ "

" ನೀವು ಶವಗಳಾಗುವ ಮುನ್ನ ಎಚ್ಚೆತ್ತುಕೊಳ್ಳಿ. ಸಾವಿಗೆ ಭಯ ಪಡಬೇಡಿ. ಜೀವಂತ ಬದುಕಿಗಿಂತ ಶವಗಳ ಸ್ಥಿತಿಯೇ ಉತ್ತಮ ಮತ್ತು ನೆಮ್ಮದಿಯಾಗಿದೆ. ಇದೇ ಮೋಕ್ಷ - ಇದೇ ಅಂತಿಮ ಸತ್ಯ, "

ತುಂಗಾ ಭದ್ರಾ ಬಚಾವೋ ಅಭಿಯಾನದಲ್ಲಿ ಪ್ರಜ್ಞಾವಂತ ನಾಗರಿಕರು ಕೈಜೋಡಿಸುವ ಮೂಲಕ ನದಿ ಸಂಪತ್ತನ್ನು ಉಳಿಸೋಣ......

*ಮಂದಾರ ನ್ಯೂಸ್*
*8880499904*

Post a Comment

0 Comments