ಮಂದಾರ ನ್ಯೂಸ್, ಸಾಗರ : ಸಾಗರ ತಾಲೂಕು ಆನಂದಪುರ ಹೋಬಳಿಯಾದ್ಯಂತ ಅಕ್ರಮ ಕಲ್ಲು ಗಣಿಗಾರಿಕೆ ಯಾರ ಭಯವಿಲ್ಲದೆ ರಾಜಾರೋಶವಾಗಿ ನಡೆಯುತ್ತಿದೆ. ಇದು ಸಂಬಂಧಿಸಿದ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳಿಗೂ ತಿಳಿದಿದೆ. ಆದರೆ ಅಕ್ರಮ ಕಲ್ಲು ಗಣಿಗಾರಿಕೆ ತಡೆಯುವ ವಿಚಾರದಲ್ಲಿ ಮಾತ್ರ ತಮ್ಮ ಅಧಿಕಾರವನ್ನು ಚಲಾಯಿಸುತ್ತಿಲ್ಲ. ಇದು ಏಕೆ? ಎಂಬ ಪ್ರಶ್ನೆ ತಾಲೂಕಿನ ಜನರಲ್ಲಿ ಕಾಡುತ್ತಿದೆ.
ಈ ಹಿಂದೆ ಸಾಗರ ತಾಲೂಕಿನಾದ್ಯಂತ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಭೂ ಮತ್ತು ಗಣಿ ಇಲಾಖೆಯ ಸಾಗರ ಮತ್ತು ಹೊಸನಗರ ವಿಭಾಗದ ಲೇಡಿ ಸಿಂಗಂ ಎಂದೆ ಖ್ಯಾತಿ ಪಡೆದ ಶಶಿಕಲಾ ಇವರು ಯಾವ ಪುರುಷ ಅಧಿಕಾರಿಗಳು ಕಮ್ಮಿ ಇಲ್ಲದಂತೆ ಕರ್ತವ್ಯವನ್ನು ನಿರ್ವಹಿಸಿದ್ದರು. ಇವರು ತಾಲೂಕಿನಲ್ಲಿ ಇರುವಷ್ಟು ದಿನ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರಿಗೆ ಸಿಂಹ ಸ್ವಪ್ನವಾಗಿ ಕಾಡಿದಂತು ಸತ್ಯ.
ಒಬ್ಬ ಹೆಣ್ಣು ಮಗಳಾಗಿ ಯಾವ ಪುರುಷರಿಗೂ ಕಮ್ಮಿ ಇಲ್ಲದಂತೆ ಅಕ್ರಮ ಕಲ್ಲುಗಳಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸಾಹಸವನ್ನು ಮೆರೆದು, ಧೈರ್ಯ ತೋರಿದ ಮಹಿಳೆ ಸಾಧ್ಯವಾದಷ್ಟು ಅಕ್ರಮ ಕಲ್ಲುಗಣಿಗಾರಿಕೆಗೆ ಕಡಿವಾಣ ಹಾಕಿದ್ದರು.
ಶಶಿಕಲಾ ಇವರು ಯಾವ ರಾಜಕೀಯ ಒತ್ತಡಕ್ಕೂ ಮಣಿಯದೆ. ಯಾವ ಪ್ರಭಾವಕ್ಕೂ ಒಳಗಾಗದೆ, "ಸರ್ಕಾರದ ಕೆಲಸ, ದೇವರ ಕೆಲಸ" ಎಂದು ಭಾವಿಸಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ದಿಟ್ಟತನವನ್ನು ಮೆರೆದಿದ್ದರೂ.
ರಾತ್ರಿ - ಹಗಲು ಎನ್ನದೇ ,ತಾವೊಬ್ಬ ಹೆಣ್ಣುಮಗಳು ಎಂಬ ಭಯವಿಲ್ಲದೆ, ಮಾಹಿತಿ ಬಂದ ಕೂಡಲೇ ತಡರಾತ್ರಿಯಾದರೂ ತಮ್ಮ ಖಾಸಗಿ ವಾಹನದಲ್ಲೇ ತೆರಳಿ ಅಕ್ರಮ ಕಲ್ಲು ಗಣಿಗಾರಿಕೆಯನ್ನು ತಡೆಯುತ್ತಿದ್ದರು. ಇಂಥ ಹೆಣ್ಣುಮಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಪರಿಣಾಮ ಸರ್ಕಾರಿ ಖಾಲಿ ಜಾಗದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುವವರು ಇಂದು ನ್ಯಾಯಾಲಯದ ಮೆಟ್ಟಿಲು ಹತ್ತಿ, ಪ್ರತಿದಿನ ಅಲೆಯುತ್ತಿದ್ದಾರೆ. ಇದಕ್ಕೆ ಕಾರಣ ಅಂದು, ಭೂ ಮತ್ತು ಗಣಿ ಇಲಾಖೆಯ ಶಶಿಕಲಾ ಅವರು ತೋರಿದ ದಿಟ್ಟತನ.
ಅವರು ವರ್ಗಾವಣೆಯಾಗಿ ಹೋದ ನಂತರ ಅವರ ಜಾಗಕ್ಕೆ ಅವಿನಾಶ್ ಎಂಬ ಪುರುಷ ವೇಷದ ಕೈಯಲ್ಲಿ ಏನೂ ಕಿಸಿಯಲಾಗದ ಅಧಿಕಾರಿ ಒಬ್ಬರು ಸಾಗರ ಮತ್ತು ಹೊಸನಗರ ವಿಭಾಗದ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಯಾಗಿ ಬಂದಿದ್ದಾರೆ.
ಇವರು ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದು, ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಅವರಿಗೆ ಶರಣಾಗಿದ್ದಾರೆ. ಒಂದು ಮಹಿಳೆಗೆ ಇದ್ದ ಧೈರ್ಯ ಇವರಿಗೆ ಇಲ್ಲದಾಗಿದೆ.
ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟುವಲ್ಲಿ ಇವರು ತಾವೊಬ್ಬ ಪುರುಷ ಅಧಿಕಾರಿ ಎಂದು ತೋರಿಸಿ ಕೊಡಬೇಕಾಗಿದೆ. ಇಲ್ಲದಿದ್ದರೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ, ಮನೆಯಲ್ಲಿ ಇರುವುದು ಒಳ್ಳೆಯದು.
ತಾವು ಎರಡು ತಾಲೂಕಿನ ವಿಭಾಗದ ಅಧಿಕಾರಿಯಾಗಿ ಬಂದು ಕಡೆದು ಗುಡ್ಡೆ ಹಾಕಿದ್ದು ಏನು ಸ್ವಾಮಿ? ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಒಂದು ಹೆಣ್ಣು ಮಗಳಾಗಿ ಶಶಿಕಲಾ ಅವರು ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಎದೆಗಾರಿಕೆಯನ್ನ ತೋರಿದರು. ಆದರೆ ಒಬ್ಬ ಪುರುಷ ಅಧಿಕಾರಿಯಾಗಿ ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟುವಲ್ಲಿ ಎದೆಗಾರಿಕೆ ತೋರಿಸುವುದನ್ನು ಬಿಟ್ಟು ಮಾಹಿತಿ ಕೊಟ್ಟವರ ಹೆಸರನ್ನೇ ಹೇಳುತ್ತೀರಲ್ಲ ನಾಚಿಕೆಯಾಗುವುದಿಲ್ಲವೇ?
ನಿಮಗೆ ನಿಮ್ಮ ಇಲಾಖೆಯವರು ನೀಡಿದ ಜವಾಬ್ದಾರಿಯನ್ನ ನಿಭಾಯಿಸಲು ಸಾಧ್ಯವಾಗದಿದ್ದರೆ ಮನೆಗೆ ಹೋಗಿ. ಜನಸಾಮಾನ್ಯರ ತೆರಿಗೆ ಹಣದಲ್ಲಿ ಸಂಬಳವನ್ನು ಏಣಿಸಿ ,ಭೂತಾಯಿ ಒಡಲನ್ನು ಬಗೆಯುತ್ತಿರುವ ಖದೀಮರ ಹೆಡೆಮುರಿ ಕಟ್ಟಲು ಸಾಧ್ಯವಾಗದ ಮೇಲೆ ಆ ಹುದ್ದೆಯಲ್ಲಿ ಏಕೆ ಮುಂದುವರಿಯುತ್ತಿದ್ದೀರ ಸ್ವಾಮಿ.!?
ಆನಂದಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯ ಮಾಹಿತಿ ನಿಮಗಿಲ್ಲವೇ? ಇದ್ದರು ನಮಗೇಕೆ ಎಂದು ಸುಮ್ಮನೆ ಕುಳಿತು ಕೊಂಡಿದ್ದೀರಾ? ಪೊಲೀಸ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಜೊತೆ ಕೈಜೋಡಿಸಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದೀರಾ? ನಿಮ್ಮ ಕೆಲಸ ಅಕ್ರಮ ಕಲ್ಲು, ಮಣ್ಣು, ಮರಳು ತಡೆಯುವುದು ಎಂಬ ವಿಚಾರ ಮರೆತಿದ್ದೀರಾ? ಒಮ್ಮೆ ಯೋಚನೆ ಮಾಡಿ ಸ್ವಾಮಿ ಅಂದು ಶಶಿಕಲಾ ಅವರು ಯಾವ ಪುರುಷರಿಗೂ ಕಮ್ಮಿ ಇಲ್ಲದಂತೆ ಧೈರ್ಯವಾಗಿ ತಡರಾತ್ರಿ ಸಮಯದಲ್ಲೇ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ ಮಾಡುತ್ತಿದ್ದರು. ಈ ವಿಚಾರದಲ್ಲಿ ಅವರು ತಮ್ಮ ಕಾರು ಚಾಲಕನನ್ನೇ ನಂಬುತ್ತಿರಲಿಲ್ಲ. ಅಕ್ರಮವನ್ನು ತಡೆಗಟ್ಟಲೇಬೇಕು ಎಂದು ದೃಢ ನಿರ್ಧಾರ ಮಾಡಿದ ಅಧಿಕಾರಿ ಅವರಾಗಿದ್ದರು. ಒಬ್ಬ ಮಹಿಳೆಯೇ ಅಷ್ಟು ಧೈರ್ಯದಿಂದ ತಡರಾತ್ರಿ ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ ಮಾಡುತ್ತಿದ್ದರು. ಇನ್ನು ನೀವು ಪುರುಷರಾಗಿ ಅವರಿಗಿಂತ 10 ಪಟ್ಟು ಹೆಚ್ಚು ಕೆಲಸ ಮಾಡಬೇಕು ಮತ್ತು ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ದಾಳಿ ಮಾಡಬೇಕು ಅಲ್ಲವೇ? ಇಲ್ಲದಿದ್ದರೆ ನಿಮ್ಮ ವೃತ್ತಿ ಮತ್ತು ನಿಮ್ಮ -- ಅವಮಾನ ಅಲ್ಲವೇ?
ಸ್ವಾಮಿ ನೀವು ಬಂದ ಮೇಲೆ ಅದೆಷ್ಟು ಅಕ್ರಮ ಕಲ್ಲು, ಮಣ್ಣು, ಮರಳನ್ನು ತಡೆದಿದ್ದೀರ? ಒಬ್ಬ ಪುರುಷ ಅಧಿಕಾರಿಯಾಗಿ ನಿಮ್ಮಿಂದ ಅಕ್ರಮ ಕಲ್ಲು, ಮಣ್ಣು, ಮರಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದರೆ ನಾಚಿಕೆಯಾಗುತ್ತದೆ ಅಲ್ಲವೇ? ನಿಮ್ಮ ಶೌರ್ಯ, ಶಕ್ತಿ- ಸಾಮರ್ಥ್ಯದ ಮೇಲೆ ನಿಮಗೆ ನಂಬಿಕೆ ಇಲ್ಲದಂತಾಯಿತೇ? ಎದ್ದೇಳಿ ಸ್ವಾಮಿ.!ಮೈ ಚಳಿ ಬಿಟ್ಟು ಎದ್ದೇಳಿ. ತಾವು ಯಾರಿಗೂ ಕಮ್ಮಿ ಇಲ್ಲದಂತೆ ಕರ್ತವ್ಯ ನಿರ್ವಹಿಸಿ. ಪತ್ರಿಕೆಯಲ್ಲಿ ಬಂದ ಬರಹ ನೋಡಿ ಕೋಪಗೊಳ್ಳಬೇಡಿ.ನಿಮ್ಮ ಕೋಪ - ತಾಪಗಳು ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ತೋರಿಸಿ.
ಸಾಗರ ತಾಲೂಕು ಆನಂದಪುರ ಪೋಲಿಸ್ ಠಾಣಾ ಸರಹದ್ದಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಡೆಯುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ. ಹೊಸನಗರ- ಸಾಗರ ವಿಭಾಗದಲ್ಲಿ ನಿಮ್ಮ ಇತಿಹಾಸವನ್ನು ನಿರ್ಮಾಣ ಮಾಡಿ. ನಿಮ್ಮಿಂದ ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟಲು ಸಾಧ್ಯವಿಲ್ಲ ಎಂದಾದರೆ ಬೇರೆ ಯಾವುದಾದರೂ ಕೆಲಸವನ್ನು ಹುಡುಕಿಕೊಂಡು ವರ್ಗಾವಣೆ ಮಾಡಿಸಿಕೊಂಡು ಹೋಗಿ. ನಿಮ್ಮ ಜಾಗಕ್ಕೆ ಬೇರೆ ಯಾರಾದರೂ ಬಂದು ಅಕ್ರಮ ಕಲ್ಲು ಗಣಿಗಾರಿಕೆ ತಡೆಯುತ್ತಾರಾ ನೋಡೋಣ.
ಒಂದು ಹೆಣ್ಣು ಮಗಳಿಗೆ ಇರುವ ಧೈರ್ಯ ಈಗ ಬಂದಿರುವ ಅಧಿಕಾರಿಗೆ ಇಲ್ಲದಾಯಿತೆ ?ಎಂಬ ಪ್ರಶ್ನೆ ತಾಲೂಕಿನ ನಾಗರಿಕರಲ್ಲಿ ಕಾಡುತ್ತಿದೆ. ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸುವ ಜವಾಬ್ದಾರಿ ನಿಮ್ಮ ಮೇಲಿದೆ.
0 Comments