ಪಾನಿಪುರಿ ತಿಂದ 19 ಮಕ್ಕಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು, ಓರ್ವನ ಸ್ಥಿತಿ ಚಿಂತಾಜನಕ.!!

ಮಂದಾರ ನ್ಯೂಸ್, ಹರಿಹರ : ಪಾನಿಪುರಿ ತಿಂದ 19 ಮಕ್ಕಳು ಅಸ್ವಸ್ಥ ಗೊಂಡಿರುವ ಘಟನೆ ಹರಿಹರ ತಾಲೂಕು ಮಲೇಬೆನ್ನೂರಿನಲ್ಲಿ ನಡೆದಿದೆ.

ಕಳೆದ ಎರಡು ದಿನಗಳ ಹಿಂದೆ ಮೇಲೆಬೆನ್ನೂರು ಪುರಸಭಾ ವ್ಯಾಪ್ತಿಯ ಜಾಮಿಯಾ ಮಸೀದಿಯಲ್ಲಿ ಪವಿತ್ರ ರಂಜಾನ್ ಉಪವಾಸವನ್ನು ಮುಗಿಸಿ ಹೊರಬಂದ ಯುವಕರು ಅಲ್ಲೇ ಸಮೀಪದಲ್ಲಿದ್ದ ಪಾನಿಪುರಿ ಅಂಗಡಿಯಲ್ಲಿ ಪಾನಿಪುರಿಯನ್ನು ಸೇವಿಸಿದ್ದಾರೆ.

ಮಸೀದಿಯ ಸಮೀಪದಲ್ಲಿ ಮಾರಾಟ ಮಾಡುತ್ತಿದ್ದ ಪಾನಿಪುರಿಯನ್ನು ಸೇವಿಸಿದ 19 ಮಕ್ಕಳು ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಕೂಡಲೆ ಮಕ್ಕಳ ಪೋಷಕರು ಸಮೀಪದ ಮೇಲೆಬೆನ್ನೂರು ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಒಟ್ಟು 19 ಮಕ್ಕಳು ಅಸ್ವಸ್ಥ ಗೊಂಡಿದ್ದು, ಅದರಲ್ಲಿ ನಾಲ್ಕು ಮಕ್ಕಳ ಸ್ಥಿತಿ ಚಿಂತಾಜನಕವಾಗಿರುವ ಕಾರಣ ಅವರನ್ನು ದಾವಣಗೆರೆಯ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದರಲ್ಲಿ ಮೂರು ಮಕ್ಕಳು ಆರೋಗ್ಯವಾಗಿದ್ದು, ಇನ್ನೊಬ್ಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಪೂಜಿ ಆಸ್ಪತ್ರೆಗೆ ಸೇರಿಸಲಾಗಿದೆ.

ಈಗಾಗಲೇ 18 ಮಕ್ಕಳ ಆರೋಗ್ಯ ಸರಿಯಾಗಿದೆ ಎಂಬ ಮಾಹಿತಿ ಬಂದಿದ್ದು ,ಇನ್ನೊಂದು ಮಗುವಿನ ಆರೋಗ್ಯದ ಮಾಹಿತಿ ಬರಬೇಕಾಗಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯಧಿಕಾರಿ ಡಾ. ಲಕ್ಷ್ಮಿ ದೇವಿಯವರು ನಮ್ಮ ಮಾಧ್ಯಮದೊಂದಿಗೆ ಹಂಚಿಕೊಂಡರು.

ಈಗಾಗಲೇ ಹರಿಹರ ತಾಲೂಕು ದಂಡಾಧಿಕಾರಿಗಳಾದ ಗುರು ಬಸುರಾಜ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ- ಕ್ಷೇಮವನ್ನು ವಿಚಾರಿಸಿದ್ದಾರೆ.

ಪಾನಿ ಪುರಿ ಸೇವನೆಯಿಂದಲೇ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿದೆಯೇ ಎಂಬುದರ ತನಿಖೆ ನಡೆಯುತ್ತಿದೆ.
ಮಲೆಬೆನ್ನೂರು ಮುಖ್ಯ ಅಧಿಕಾರಿ ಸುರೇಶ್, ತಾಲೂಕು ಆರೋಗ್ಯ ಅಧಿಕಾರಿ ಅಬ್ದುಲ್ ಖಾದರ್, ಸಹಾಯಕ ಉಮಣ್ಣ,  ರಾಜಸ್ವ ನಿರೀಕ್ಷಕ ಆನಂದ್, ಭೇಟಿ ನೀಡಿ ಮಕ್ಕಳ ಆರೋಗ್ಯವನ್ನು ವಿಚಾರಿಸಿದ್ದಾರೆ.

Post a Comment

0 Comments