ಉಕ್ಕಡಗಾತ್ರಿ ಅಜ್ಜಯ್ಯನಿಗೆ 2.50 ತೂಕದ 1.65 ಕೋಟಿ ಮೌಲ್ಯದ ವೈಭವದ ಚಿನ್ನದ ಕಿರೀಟಾಧಾರಣೆ.!!

ಮಂದಾರ ನ್ಯೂಸ್, ಹರಿಹರ : ಮಹಾಶಿವರಾತ್ರಿ ಪ್ರಯುಕ್ತ ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಸ್ವಾಮಿಗೆ ವೈಭವದ ಕಿರೀಟಾಧಾರಣೆ ನೆಡೆಯಿತು. ನಂದಿಗುಡಿ ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸಿದರು.
2.50 ತೂಕದ 1.65 ಕೋಟಿ ಮೌಲ್ಯದ ಕಿರೀಟ ಧಾರಣೆಗೆ ಲೋಕ ಸಭಾ ಸದಸ್ಯ ಜಿ ಎಂ ಸಿದ್ದೇಶ್ವರ,ಶಾಸಕ ಬಿ ಪಿ ಹರೀಶ್, ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಮುಖಂಡ ನಂದಿಗಾವಿ ಶ್ರೀನಿವಾಸ ಮತ್ತು ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಲ್ಲಿ ಕಿರೀಟಾಧಾರಣೆ ನೆಡೆಯಿತು.
ಕಿರೀಟದ ಪ್ರಭಾವಳಿ ಏಳು ಹೆಡೆಯ ಸರ್ಪವಾಗಿದ್ದು ಎಲ್ಲಾ ಸೇರಿಎಲ್ಲಾ ಸೇರಿ ಧಾರಣ ಲಿಂಗ ಮತ್ತು ಇಷ್ಟ ಲಿಂಗ ಎಲ್ಲಾ ಸೇರಿ 2.504 ಗ್ರಾಂ 90 ಮಿಲಿ ತೂಕದ ಬಂಗಾರದ ಕಿರೀಟವನ್ನು ಧಾರಣೆ ಮಾಡುವ ಪೂರ್ವದಲ್ಲಿ ಪ್ರಾಂಗಣದ ಆಸನದ ಮೇಲೆ ಆಸನಾರೋಹಣ ಮಾಡಲಾಗಿತ್ತು.
ಆಸನವನ್ನು ನಾನಾ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಟ್ರಸ್ಟ್ ಕಮಿಟಿಯವರು ಮತ್ತು ಮುಖಂಡರುಗಳಿಗೆ ಕಂಕಣಾಧಾರಣೆ ಮಾಡಿಕೊಡಲಾಯಿತು. ಸ್ವಾಮೀಜಿಗಳು ಪೂಜೆ ಸಲ್ಲಿಸಿದರು.
ನಂತರ ವಿವಿಧ ವಾದ್ಯಗಳೊಂದಿಗೆ ಟ್ರಸ್ಟ್ ಕಾರ್ಯದರ್ಶಿ ಎಸ್ ಸುರೇಶ್ ಮತ್ತು ಸದಸ್ಯರು ಪ್ರಾಂಗಣದಿಂದ ಅಜ್ಜಯ್ಯನ ಸನ್ನಿಧಿಗೆ ತಲುಪಿಸಿದರು.
ಮಹಾ ಶಿವರಾತ್ರಿ ಪ್ರಯುಕ್ತ ಅಜ್ಜಯ್ಯನಿಗೆ ಅಭಿಷೇಕ ಮಾಡಲಾಗಿತ್ತು ಮತ್ತು ಪೂಜಾಲಂಕಾರ ಮಾಡಲಾಗಿತ್ತು.
ಶಾಸ್ತ್ರೋಕ್ತ ಪೂಜಾವಿಧಿ ವಿಧಾನಗಳೊಂದಿಗೆ ಶ್ರೀಗಳು ಕಿರೀಧಾರಣೆ ನೆರವೇರಿಸಿದರು.
ನೆರೆದ ಭಕ್ತರು ಅಜ್ಜಯ್ಯನ ವೈಭವವನ್ನು ಕಂಡು ಭಕ್ತಿ ಪರವಶರಾದರು.

ಮುಖಂಡರಾದ ನಂದಿಗೌಡ್ರು,ಬಂಡೇರ ತಿಮ್ಮನಗೌಡ,ನಿಂಗರಾಜ, ಆಂಜನೇಯ ಪಾಟೀಲ, ಟ್ರಸ್ಟ್ ಕಮಿಟಿಯವರಾದ ಬಸವನಗೌಡ ಪಾಳೇದ, ವಿವೇಕಾನಂದ ಪಾಟೀಲ, ಇಂದೂಧರ್,ಗದ್ದಿಗಯ್ಯ ಪಾಟೀಲ, ಪ್ರಕಾಶ್ ಕೋಟೇರ ಇದ್ದರು.
ಮಾರ್ಚ್ 10 ರಂದು ಭಾನುವಾರ ಶ್ರೀ ಕರಿಬಸವೇಶ್ವರ ಗದ್ದಿಗೆಯ ಪೂಜೆ ಇರುತ್ತದೆ. ನಂತರ ನಂದಿ ಧ್ವಜಾರೋಹಣವನ್ನು ಸಿದ್ದರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸುವರು.
ರಾತ್ರಿ ಜಾಗರಣೆ ಅಂಗವಾಗಿ ಭಜನೆ ಹಾಗೂ ಕೀರ್ತನೆ ಇರುತ್ತದೆ.

Post a Comment

0 Comments