ಮಂದಾರ ನ್ಯೂಸ್, ಹರಿಹರ : ನ್ಯಾಯಯುತ ಬೇಡಿಕೆಳಿಗೆ ಶಾಂತಿಗೆ ಭಂಗ ಬರದಂತೆ ಧರಣಿ ಸತ್ಯಾಗ್ರಹ ನೆಡೆಸುತ್ತಿದ್ದೀರಿ. ಜಿಲ್ಲಾಡಳಿತದಿಂದ ಸತ್ಯಶೋಧನಾ ಸಮಿತಿಯನ್ನು ಗೌರವಿಸಬೇಕು. ಸ್ವಯಂ ಪ್ರೇರಿತರಾಗಿ ನಾಮಫಲಕ, ಪ್ರತಿಮೆಗಳನ್ನು ಶುಕ್ರವಾರ ತೆರವುಗೊಳಿಸಿದ್ದೀರಿ.ಇದು ಉಳಿದವರಿಗೆ ಮಾದರಿಯಾಗಿದೆ. ಸೋಮವಾರದವರೆಗೂ ನೋಡೋಣ ನಂತರ ನಾನು ನಿಮ್ಮ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮಿಗಳು ತಿಳಿಸಿದರು.
ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಸಂಗೋಳ್ಳಿ ರಾಯಣ್ಣ ಪ್ರತಿಮೆ ಪುನರಸ್ಥಾಪನೆ ಮತ್ತು ಅನಧಿಕೃತ ಮಹಾದ್ವಾರ ಮತ್ತು ನಾಮಫಲಕಗಳನ್ನು ತೆರವುಗೊಳಿಸಲು ಆಗ್ರಹಿಸಿ ಹಾಲುಮತ ಸಮಾಜದವರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಿರತರನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮಕ್ಕೆ ಆಗಮಿಸಿದ ಶ್ರೀಗಳು ಗ್ರಾಮದ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಮತ್ತು ಪೂಜಾಲಂಕಾರ ಮಾಡಲಾಗಿತ್ತು.
ನಂತರ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದರು. ಪೋಲಿಸ್ ಅದಿಕಾರಿಗಳಾದ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಜಿ ಮಂಜುನಾಥ್, ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್, ದಾವಣಗೆರೆ ಗ್ರಾಮಾಂತರ ಸಿಪಿಐ ಕಿರಣ್, ಹರಿಹರ ಗ್ರಾಮಾಂತರ ಸಿಪಿಐ ಪ್ರಶಾಂತ್ ಸಗರಿ ಇವರುಗಳ ಜೊತೆ ಗುಪ್ತ ಸಮಾಲೋಚನೆ ಮಾಡಿದರು.
ಸುಮಾರು 150 ಸಿಬ್ಬಂದಿಗಳು ಗ್ರಾಮದಲ್ಲಿ ಬಂದೋಬಸ್ತ್ ಗಾಗಿ ಮೊಕ್ಕಂ ಹೂಡಿದ್ದಾರೆ.
ಕೆಲವು ಸಮುದಾಯದವರು ಅನಧಿಕೃತವಾಗಿ ಹಾಕಲಾದ ನಾಮಫಲಕಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸಲು ಮುಂದಾಗದಿರುವುದು ತಿಳಿದುಬಂದಿದೆ.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕನ್ನಪ್ಪ, ಮುಖಂಡರಾದ ಯು ಕೆ ಅಣ್ಣಪ್ಪ,ಹೆಚ್ ಎಸ್ ಕರಿಯಪ್ಪ, ಬಿ ಎನ್ ಕೆಂಚಪ್ಪ, ಹೇಮಂತ್ ರಾಜ್, ಕೆ ಗೋವಿಂದ,ಡಿ ಹನುಮಂತಪ್ಪ,
ಗ್ರಾಮ ಪಂಚಾಯಿತಿ ಸದಸ್ಯರಾದ ಪವಾಡಿ ಮಂಜಪ್ಪ,ಬಿ ಎನ್ ಚಂದ್ರಪ್ಪ, ರೇಖಾ, ರೇಣುಕಮ್ಮ ಮತ್ತು
ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹಾಲುಮತ ಸಮಾಜದವರು ಮಹಿಳೆಯರನ್ನು ಸೇರಿದಂತೆ ಪಾಲ್ಗೊಂಡಿದ್ದರು.
0 Comments