ಯಡಿಯೂರಪ್ಪ ಕುಟುಂಬದಿಂದ ತಾಯಿಗೆ ಕತ್ತು ಹಿಸುಕುವ ಕೆಲಸ : ಕೆ. ಎಸ್. ಈಶ್ವರಪ್ಪ.

ಶಿವಮೊಗ್ಗ : ಬಿಜೆಪಿಯಲ್ಲಿ ಈಗ ಒಂದು ಕುಟುಂಬದ ಪಕ್ಷ ವಾಗಿದೆ, ಇಲ್ಲಿ ಯಾವುದೇ ಪ್ರಭಾವಿ ನಾಯಕರನ್ನು ಬೆಳೆಯಲು ಬಿಡುವುದಿಲ್ಲ ಅವರಿಗೆ ಸೈಡ್ ಲೈನ್ ಮಾಡಿ ಕೇವಲ ಅಪ್ಪ, ಮಕ್ಕಳು ಮಾತ್ರ ಇರಬೇಕು ಎನ್ನುವ ಒಂದು ಕೆಟ್ಟ ಮನಸ್ಥಿತಿಯೇ ಇಂದಿನ ಸ್ಥಿತಿಗೆ ಕಾರಣ ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು.

ಅವರು ಬೆಳಗಾಯಿತು ಪತ್ರಿಕೆಯೊಂದಿಗೆ ಮಾತನಾಡುತ್ತ ನಾನು ಬಂಡಾಯವಾಗಿ  ನಿಲ್ಲಿತ್ತಿರುವುದು ಬಿಜೆಪಿಯನ್ನು ಶುದ್ದಿಕರಣ ಮಾಡುವ ಉದ್ದೇಶ ಹಾಗೂ ಕೇವಲ ಒಂದು ಕುಟುಂಬದ ಕೈಯಲ್ಲಿರುವ ಪಕ್ಷವನ್ನು ಕಾಪಾಡಲು ಎಂದ್ರು.


ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಸರಿಯುವ ಪ್ರಶ್ನೆಯೇ ಇಲ್ಲಾ, ಇದರಲ್ಲಿ ನನ್ನ ರಾಜಕೀಯ ಭವಿಷ್ಯವಿದೆ ಬಿಜೆಪಿ ಪಕ್ಷವನ್ನು ಬಿ ಎಸ್ ಯಡಿಯೂರಪ್ಪ ಒಬ್ಬರೇ ಕಟ್ಟಿಲ್ಲ, ನಾನು ಪಕ್ಷ ಸಂಘಟನೆ ಶ್ರಮಪಟ್ಟಿದ್ದೇನೆ ಬಿಜೆಪಿ ಪಕ್ಷ ಕಟ್ಟಲು ಹಲವಾರು ಹಿರಿಯ ಶ್ರಮವಿದೆ ಇಂತಹ ಪಕ್ಷವನ್ನು ಉಳಿಸಿ ಬೆಳಸುವ ಜವಾಬ್ದಾರಿ ನಮ್ಮಂತವರ ಹಲವಾರು ನಾಯಕರಿಗೆ ಇದೆ ಎಂದ್ರು.

ಪಕ್ಷದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ನನ್ನ ಹಾಗೂ ಯಾವುದೇ ಹಿರಿಯ ನಾಯಕರ ಸಲಹೆಯನ್ನು ಪಡೆಯುವುದಿಲ್ಲ ಕೇವಲ ಯಡಿಯೂರಪ್ಪ ಮಗ ವಿಜೇಂದ್ರ ಸುಪ್ರೀಮ್ ಆಗಿಬಿಟ್ಟಿದ್ದಾನೆ. ಪಕ್ಷದಲ್ಲಿ ವಿಜೇಂದ್ರರವಗಿಂತ ಹಿರಿಯ ನಾಯಕರು ಇದ್ರು ಕೂಡಾ ಇವರಿಗೆ ಏಕೆ ರಾಜ್ಯಾಧ್ಯಕ್ಷರ ಸ್ಥಾನ ಕೊಡಬೇಕಿತ್ತು, ಎಂದು ಪ್ರಶ್ನೆ ಮಾಡಿದರು.

ಈಗಾಗಲೇ ಪಕ್ಷದ ಕೆಲವು ನಿರ್ಧಾರದಿಂದ ವಿಧಾನ ಸಭೆ ಚುನಾವಣೆಯಲ್ಲಿ ಹೀನಾಯವಾದ ಸೋಲು ಕಾಣಬೇಕಾಯಿತು. ಅದೇ ತಪ್ಪನ್ನು ಲೋಕಸಭಾ ಚುನಾವಣೆಯಲ್ಲೂ ಮಾಡುತ್ತಿದ್ದಾರೆ ಮತ್ತೆ ಬಿಜೆಪಿ ಸೋಲುವ ಭಯದಲ್ಲಿದೆ, ಇಂತಹ ಸಂಕಷ್ಟದಿಂದ ಕಾಪಾಡಬೇಕು ಎನ್ನುವ ದೃಷ್ಟಿಯಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದ್ರು.

ನಾನು ರಾಯಣ್ಣ ಬ್ರಿಗೇಡ್ ಕಟ್ಟಿ ಬಿಜೆಪಿ ಪಕ್ಷ ಬಲಪಡಿಸುವ ಉದ್ದೇಶದಿಂದ ಕೂಡಲ ಸಂಗಮದಲ್ಲಿ ದೊಡ್ಡೆ ಅಹಿಂದ ಕಾರ್ಯಕ್ರಮ ಆಯೋಜನೆ ಮಾಡಿದ್ದೆ ಆದರೆ ಬಿಎಸ್ ವೈ ಇದನ್ನು ನೋಡಿ ನಾನು ಎಲ್ಲಿ ಅಹಿಂದದ ದೊಡ್ಡ ನಾಯಕನಾಗುತ್ತಾನೆ ಎಂದು ಹೈಕಮಾಂಡ್ ದೂರು ಕೊಟ್ಟು ಅದಕ್ಕೆ ಅಡ್ಡಿ ಆದರೂ, ಇದರಿಂದ ನಷ್ಟವಾಗಿದ್ದು ನನಗಲ್ಲ ಪಕ್ಷಕ್ಕೆ ಇಂದು ಅಹಿಂದದ ಎಲ್ಲರೂ ಕಾಂಗ್ರೆಸ್ಗೆ ಬೆಂಬಲಿಸಿದ್ದಾರೆ ಎಂದ್ರು.


ಇಂದು ಸಂಧಾನಕ್ಕೆ ಬರುತ್ತಿರುವುದು ಪಕ್ಷದ ಮೇಲಿನ ಕಾಳಿಜಿಯಿಂದ ಅಲ್ಲಾ ಕೇವಲ ಅವರ ಮಗ ಬಿ. ವೈ. ರಾಘವೇಂದ್ರ ಸೋಲುತ್ತೇನೆ ಎಂಬ ಭಯದಿಂದ ಅಷ್ಟೇ, ಅವರಿಗೆ ಶಿವಮೊಗ್ಗ ಜಿಲ್ಲೆ, ಕರ್ನಾಟಕ ರಾಜ್ಯ ಇವರ ಮಕ್ಕಳು ಹಾಗೂ ಶೋಭಾ ಕೈಯಲ್ಲಿ ಇರಬೇಕು ಬೇರೆ ಎಲ್ಲಾ ಹಿರಿಯ ನಾಯಕರು ಇವರಿಗೆ ಸಲಾಮ್ ಹೊಡೆದು ಕೊಂಡು ಇರಬೇಕು ಮೊದಲು ಈ ಸಂಸ್ಕೃತಿಯಿಂದ ಬದಲಾಗಬೇಕು ಈ ಬದಲಾವಣೆಗೆ ನನ್ನ ಜೊತೆ ಹಲವಾರು ಪ್ರಭಾವಿ ಮುಖಂಡರು ಕೈಜೋಡಿಸಿದ್ದಾರೆ ಹಾಗೂ ಜಿಲ್ಲಾ ಹಲವಾರು ಮುಖಂಡರು ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಬೆಂಬಲ ಸೂಚಿಸಿದ್ದಾರೆ.


ನಾನು ಯಾವುದೇ ಸರ್ವ ಧರ್ಮ ದ  ನಾಯಕನಾಗಿ ಗುರುತಿಸಿ ಕೊಂಡವನು, ನಮ್ಮ ಭಾರತೀಯ ಹಿಂದೂ ಧರ್ಮಕ್ಕೆ ತೊಂದ್ರೆ ಬಂದ್ರೆ ಮೊದಲು ದ್ವನಿ ಎತ್ತುವುದು ನಾನೇ ಆದ್ದರಿಂದಲೇ ನನಗೆ ಹಿಂದೂ ಹುಲಿ ಎಂದು ಕರೆಯುತ್ತಾರೆ. ಹಾಗಂತ ನಾನು ಯಾವ ಧರ್ಮದ ವಿರೋಧಿಯಲ್ಲ ಆದ್ದರಿಂದ ನನ್ನನ್ನು ಪ್ರತಿಯೊಂದು ಜಾತಿಯವರು ನನ್ನ ಗೌರವದಿಂದ ಪ್ರೀತಿಸುತ್ತಾರೆ ಎಂದರು.

ನನ್ನ ಗೆಲುವು ನಿಶ್ಚಿತ, ರಾಘವೇಂದ್ರ ಸೋಲು ಖಚಿತ ಮೋದಿ ನನ್ನ ಮನೆಗೆ ಬರುವುದಿಲ್ಲ ನಾನು ಯಾವುದೇ ಕಾರಣ ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲಾ

ವರದಿ : ರಾಘು ಶೆಟ್ಟಿ

Post a Comment

0 Comments