ಮಂದಾರ ನ್ಯೂಸ್ , ಹರಿಹರ : ಭಾರತದೇಶದ , ಕರ್ನಾಟಕ ರಾಜ್ಯದ , ದಾವಣಗೆರೆ ಜಿಲ್ಲೆಯ , ಹರಿಹರ ತಾಲ್ಲೂಕಿನ , ಹರಿಹರ ನಗರದ ಪಶ್ಚಿಮ ಭಾಗದಲ್ಲಿ , ಪಶ್ಚಿಮೋತ್ತರ ವಾಹಿನಿಯಾಗಿಯೂ ಹರಿದ್ರಾವತಿ ಮತ್ತು ತುಂಗಾಭದ್ರಾ ನದಿಗಳ ಸಂಗಮ ಸ್ಥಳದ ಬಲ ಭಾಗದ ನದಿದಂಡೆಯಲ್ಲಿರುವ
ಶ್ರೀ ಶಿವ ಮತ್ತು ಶ್ರೀ ವಿಷ್ಣು ಎರಡೂ ದೇವತೆಗಳಲ್ಲಿ ಬೇಧ ಭಾವವಿಲ್ಲವೆಂದೂ , ಇಬ್ಬರೂ ಒಂದೇ ಎಂದು ತೋರಿಸಿರುವ ಸನಾತನ ಹಿಂದೂ ಧರ್ಮದ ಶ್ರೇಷ್ಠವೂ, ಜಗತ್ಪ್ರಸಿದ್ಧವಾಗಿಯೂ ಇರುವ. ಶ್ರೀ ಶ್ರೀ ವೇದವ್ಯಾಸ ಮಹರ್ಷಿಗಳು ಉಪದೇಶಿಸಿದ್ದನ್ನು ಶ್ರೀ ಗಣೇಶದೇವರು ರಚಿಸಿರುವ ೧೮ ಪುರಾಣಗಳಲ್ಲಿ ಒಂದಾದ ಸ್ಕಂದಪುರಾಣದಲ್ಲಿ ಉಲ್ಲೇಖವಾಗಿರುವ , ಶ್ರೀ ಯಮಧರ್ಮರಾಜರು ವಿರಚಿಸಿ , ಶ್ರೀ ಅಗಸ್ತ್ಯ ಋಷಿಗಳಿಂದ ಉಕ್ತವಾಗಿರುವ, ಪರಮ ಪಾವನ ಪವಿತ್ರ ಪುಣ್ಯ ಭೂಮಿಯಲ್ಲಿರುವ ಶ್ರೀ ಹರಿಹರೇಶ್ವರ ದೇವರ ಗುಹಾರಣ್ಯ ಕ್ಷೇತ್ರವು , ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿದ್ದು, ಪರಮ ಪವಿತ್ರವಾದದ್ದೂ, ಪ್ರಖ್ಯಾತ ಐತಿಹಾಸಿಕ ಪ್ರವಾಸಿ ತಾಣವಾಗಿದ್ದೂ , ಉನ್ನತ ಹೋಯ್ಸಳ ಶೈಲಿಯ ಶಿಲ್ಪ ಕಲೆಗಳಿಂದ ಕಂಗೊಳಿಸುವ ನಯನ ಮನೋಹರವಾಗಿಯೂ, ಯುಗ ಯುಗಾಂತರಗಳಿಂದ ಪ್ರಾಚೀನ ಕಾಲದಿಂದಲೂ ಇರುವಂತಹ , ಅನೇಕ ರಾಜ ಮಹಾರಾಜರು ಸೇವೆ ಸಲ್ಲಿಸಿದ ಶಿಲಾ ಶಾಸನಗಳು ಗೋಚರಿಸುತ್ತಿರುವಂತಹ ,
ಶ್ರೀ ಹರಿಹರೇಶ್ವರ ಸ್ವಾಮಿಯ ದೇವಾಲಯವಿದೆ .
ಶ್ರೀ ಹರಿಹರೇಶ್ವರ ಸ್ವಾಮಿ ದೇವಾಲಯದ ಸುತ್ತ ಮುತ್ತಲೂ ಬ್ರಹ್ಮ, ಭಾರ್ಗವ, ವಹ್ನಿ , ಋಣ ವಿಮೋಚನ, ಪಿಶಾಚಮೋಚನ, ರುದ್ರಪಾದ, ನರಸಿಂಹ, ಎಂಬಿತ್ಯಾದಿ ಹನ್ನೊಂದು ಪವಿತ್ರವಾದ ತೀರ್ಥಗಳೂ, ಒಂದು ಬೃಹತ್ತಾದ ಕಲ್ಯಾಣಿಯೂ,
ಶ್ರೀ ಗಣೇಶ , ಶ್ರೀ ಸುಬ್ರಹ್ಮಣ್ಯ , ಶ್ರೀ ಲಕ್ಷ್ಮೀ ದೇವಿಯ , ಶ್ರೀ ಪಾರ್ವತಿ ದೇವಿಯ, ಶ್ರೀ ಚಿಕ್ಕ ಹರಿಹರೇಶ್ವರ , ಶ್ರೀಸೂರ್ಯನಾರಾಯಣ ,ಶ್ರೀ ನರಸಿಂಹ , ಕೀಲಿಕೈ
ಶ್ರೀ ಆಂಜನೇಯ , ಶ್ರೀ ಗೋಪಾಲಕೃಷ್ಣ ಇರುವ ಶ್ರೀ ರಾಮ ಮಂದಿರ ,
ಶ್ರೀ ಏಕನಾಥೇಶ್ವರಿದೇವಿಯ , ಶ್ರೀ ಅಂಬಾಡಮ್ಮ ದೇವಿಯ , ನಾಲ್ಕು ದಿಕ್ಕುಗಳಲ್ಲಿಯೂ ಮತ್ತು ಮಧ್ಯ ಭಾಗದಲ್ಲಿಯೂ ಶ್ರೀ ಚೌಡೇಶ್ವರಿ ದೇವಿಯ , ಶ್ರೀ ಹನುಮಂತ ದೇವರ ,
ಶ್ರೀ ಒಡಬಂಡೇಶ್ವರ, ಬೃಹತ್ತಾದ ಶ್ರೀ ನಂದಿ , ಶ್ರೀ ಚಂಡಿಕೇಶ್ವರ , ಶ್ರೀ ಕಾಲಭೈರವ ,
ಶ್ರೀ ವಿಠ್ಠಲ ದೇವಸ್ಥಾನಗಳೂ , ಶ್ರೀ ದತ್ತಾತ್ರೇಯ ಮಂದಿರ, ಶ್ರೀ ಶಿವಾನಂದ ತೀರ್ಥರ ಮಠ, ಇನ್ನೂ ಅನೇಕ ಶ್ರೀ ಗುರು ಯತಿಗಳು ಇವರ ಸಾಲು ವೇದಿಕೆಗಳು, ಶ್ರೀ ಅಮೃತೇಶ್ವರ ,
ಶ್ರೀ ಸಂಗಮೇಶ್ವರ 2 , ಶ್ರೀ ಚಂದ್ರಶೇಖರ , ಶ್ರೀ ಗಂಗಾ ಪರಮೇಶ್ವರಿ ದೇವಿಯ ,
ಶ್ರೀ ಉಚ್ಚಂಗಿ ಎಲ್ಲಮ್ಮ ದೇವಿಯ , ಶ್ರೀ ಬನಶಂಕರಿ ದೇವಿಯ 2 , ಶ್ರೀ ವಿರೂಪಾಕ್ಷೇಶ್ವರ , ಶ್ರೀ ತುಳುಜಾ ಭವಾನಿ ದೇವಿಯ , ಶ್ರೀ ದುರ್ಗಾ ದೇವಿಯ , ಶ್ರೀ ರೇಣುಕಾ ಎಲ್ಲಮ್ಮ ದೇವಿಯ , ಶ್ರೀ ಜಮದಗ್ನಿ ಋಷಿ , ಶ್ರೀ ಪರಶುರಾಮ ದೇವರ , ಶ್ರೀ ಸಪ್ತ ಮಾತೃಕಾ ದೇವಿಯವರ , ಶ್ರೀ ವೆಂಕಟೇಶ್ವರ , ಶ್ರೀ 108 ಲಿಂಗೇಶ್ವರ , ಶ್ರೀ ವೃಷಭೇಶ್ವರ ,
ಶ್ರೀ ಅಗಸ್ತ್ಯೇಶ್ವರ , ಶ್ರೀ ಕಾರ್ತಿಕೇಯ , ಜೋಡು ಶ್ರೀ ಬಸವೇಶ್ವರರ , ಇನ್ನೂ ಅನೇಕ ದೇವಾಲಯಗಳೂ ಇಲ್ಲಿವೆ. ಅನೇಕ ಶಿಲಾ ಶಾಸನಗಳು ಇಲ್ಲಿವೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಇವುಗಳಲ್ಲಿನ ಕೆಲವು ದೇವಸ್ಥಾನಗಳು, ಬಾವಿಗಳೂ, ಪವಿತ್ರವಾದ ತೀರ್ಥಗಳೂ, ಕಲ್ಯಾಣಿಯೂ ಸಹ ಗೋಚರಿಸುತ್ತಿಲ್ಲಾ.
ಇಲ್ಲಿಂದ 300 ಮೀಟರ್ ವ್ಯಾಪ್ತಿಯಲ್ಲಿ ಸುತ್ತ ಮುತ್ತಲು ಇರುವ ಸ್ಥಳಗಳಲ್ಲಿ ಯಾವುದೇ ರೀತಿಯಲ್ಲಿ ಅಗೆಯಲು ಕಟ್ಟಡ ಕೆಡವಲು , ಕಟ್ಟಡ ನಿರ್ಮಾಣ ಕಾಮಗಾರಿ ನಡೆಸಲು , ಭಾರತೀಯ ಸಂಸ್ಕೃತಿ ಪುರಾತತ್ವ ಸರ್ವೇಕ್ಷಣಾ ಪ್ರಾಧಿಕಾರ , ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ, ಮತ್ತು ಪ್ರಾಚ್ಯ ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಇಲಾಖೆಗಳಿಂದ ನಿರ್ಬಂಧ ನಿಷೇಧ ಫಲಕಗಳು. ಕೇವಲ ಸಾರ್ವಜನಿಕರ ವೀಕ್ಷಣೆಗೆ ಮಾತ್ರ ಸೀಮಿತಗೊಂಡಿರುವಂತೆಯೇ ಇರುವುದು . ಎಂದೆನಿಸುತ್ತಿದೆಯಲ್ಲವೇ? ಏಕೆಂದರೆ ? ಈಗ ಅವುಗಳೂ ಕಣ್ಮರೆ ಯಾಗಿವೆ . ಮೇಲೆ ಕಂಡ ಇಲಾಖೆಗಳಿಂದ ನಿರ್ಬಂಧ ನಿಷೇಧ ಫಲಕಗಳು, ಇದ್ದರೂ ಸಹ ಸದರಿ ಸ್ಥಳಗಳ ಸುತ್ತ ಮುತ್ತಲೂ ಎಗ್ಗಿಲ್ಲದೇ ಎಲ್ಲಾ ರೀತಿಯ ಕಾಮಗಾರಿಗಳ ಚಟುವಟಿಕೆಗಳೂ ಹಗಲು ರಾತ್ರಿ ಎನ್ನದೇ ನಡೆಯುತ್ತಿದೆ . ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು , ಸಚಿವರು , ರಾಜಕಾರಣಿಗಳು ಸುಮ್ಮನೆ ಇರುವುದನ್ನು ನೋಡಿದರೆ , ಜಾಣಕುರುಡು ಪ್ರದರ್ಶಿಸುತ್ತಿರುವಂತೆ ಸಾರ್ವಜನಿಕರಿಗೆ ಭಾಸವಾಗುತ್ತಿರುವುದು , ವಿಪರ್ಯಾಸವೇ ಸರಿ ! ಸರ್ಕಾರದ ಕಾನೂನು ಇರುವುದು. ಗ್ರಂಥಗಳೊಂದಿಗೆ ಕಡತಗಳಲ್ಲಿ ಅಡಗಿಸಿಟ್ಟಿರುವುದಕ್ಕೆ ಮಾತ್ರ ಸೀಮಿತಗೊಂಡಿರುತ್ತದೆಯೇ ! ದೂರ ದೂರದ ಅನೇಕ ಊರುಗಳಿಂದ ಬರುವಂತಹ ಪ್ರವಾಸಿಗರಿಗೆ, ಭಕ್ತಾದಿಗಳಿಗೆ, ಯಾತ್ರಾರ್ಥಿಗಳಿಗೆ ದೇಹಬಾಧೆ ಪರಿಹರಿಸಲು ಯಾವುದೇ ರೀತಿಯ ಶೌಚಾಲಯ ಸ್ಥಳದ ಅವಕಾಶವೇ ಇರುವುದಿಲ್ಲಾ , ಯಾತ್ರಾರ್ಥಿಗಳು ಇಳಿದುಕೊಳ್ಳಲು, ಯಾವುದೇ ಒಂದು ವಸತಿಯ ಸೌಲಭ್ಯವೂ ಇರುವುದಿಲ್ಲಾ , ಇಷ್ಟೇ ಅಲ್ಲದೇ, ಬಾಯಾರಿಕೆಯಾದವರಿಗೆ ದಾಹವನ್ನು ಕಳೆದುಕೊಳ್ಳಲು ಕುಡಿಯುವ ನೀರೂ ಸಹ ಸಿಗುತ್ತಿಲ್ಲಾ . ಈ ದೇವಸ್ಥಾನದ ಹಿಂಭಾಗದಲ್ಲಿ ನೈಋತ್ಯ ಭಾಗದಿಂದ ವಾಯುವ್ಯ ಭಾಗದವರೆಗೆ , ಹರಿಹರ ನಗರದ ರಾಜಕಾಲುವೆಯ ಮುಖಾಂತರವಾಗಿ ಹರಿದು ಬರುವ ಸರ್ವ ವಿಧದ ತ್ಯಾಜ್ಯ ವಸ್ತುಗಳನ್ನು ಹೊತ್ತು ಬರುವ ಕಲುಷಿತಗೊಂಡಿರುವ ನೀರು ಸುಮಾರು ಆರೇಳು ಕಡೆಗಳಿಂದಲೂ ಬಂದು ನದಿಗೆ ಸೇರುವುದು ,
ಈ ಕಾರಣಗಳಿಂದಾಗಿ ಪವಿತ್ರವಾದ ಹರಿದ್ರಾವತಿ ಹಾಗೂ ತುಂಗಾ ಭದ್ರಾ ನದಿಗಳ ಸಂಗಮ ಸ್ಥಾನಕ್ಕೆ ಹೋಗಿ ಬರುವ ಶುದ್ಧ ರಸ್ತೆಯಾಗಲೀ ನದಿಯಲ್ಲಿ ಸ್ನಾನ ಮಾಡಿ ಗಂಗೆಯನ್ನು ಪೂಜಿಸಲು, ಶುದ್ಧವಾಗಿ ಹರಿಯುವ ಪರಮ ಪಾವನ ಪುಣ್ಯಜಲವಾಗಲೀ ಉತ್ತಮ ಸ್ನಾನ ಘಟ್ಟವಾಗಲೀ ಯಾವುದೇ ತರಹದ ವ್ಯವಸ್ಥೆಯಾಗಲೀ ಇರುವುದಿಲ್ಲಾ!
ಶ್ರೀ ಹರಿಹರೇಶ್ವರ ದೇವರ ಸೇವೆ ಮಾಡಿಸಲು , ಬರುವಂತಹ ಭಕ್ತಾದಿಗಳಿಗೆ ಯಾವುದೇ ರೀತಿಯ ಮಾಹಿತಿಯನ್ನೂ ತಿಳಿಸುವಂತಹ ವಿಚಾರಣೆಯ ಸ್ಥಳವಾಗಲೀ, ಸೇವೆಯ ವಿವರವನ್ನು ತಿಳಿಯಲು ಬಂದವರಿಗೆ ಮಾಹಿತಿಯನ್ನೂ ತಿಳಿಸುವಂತಹ ಸೇವಾಕೌಂಟರ್ ನ ಯಾವುದೇ ತರಹದ ವ್ಯವಸ್ಥೆಯಾಗಲೀ ಇರುವುದಿಲ್ಲಾ ! ಇಲ್ಲಿಗೆ ಬರುತ್ತಿರುವಂತಹ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಪಡೆದು ಕೊಳ್ಳುವ ಅವಕಾಶವೇ ಇರುವುದಿಲ್ಲಾ ! ಬಾಯಾರಿಕೆಯಾದವರಿಗೆ ಕುಡಿಯಲು ನೀರೂ ಸಹ ಸಿಗುತ್ತಿಲ್ಲಾ . ಹಸಿದು ಬಂದವರಿಗೆ ಅನ್ನಪ್ರಸಾದದ ಯಾವುದೇ ವ್ಯವಸ್ಥೆಯೂ ಇರುವುದಿಲ್ಲಾ ! ಸುತ್ತಮುತ್ತಲೂ ಇರುವವರನ್ನು ಕೇಳಿದರೆ ಯಾರೂ ಏನನ್ನೂ ಕೊಡುವುದಿಲ್ಲಾ ! ಮನಬಂದಂತೆ ನಿಂದಿಸಿರುತ್ತಾರೆ. ಇಷ್ಟೇ ಅಲ್ಲದೇ,
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶಿಲ್ಪ ಶಾಸ್ತ್ರ , ದೇವಾಲಯದ ವಾಸ್ತು ಶಾಸ್ತ್ರದ ಅರಿವೇ ಇಲ್ಲದ ಅವಿವೇಕೀ ಪಂಡಿತರೊಂದಿಗೆ ಸೇರಿಕೊಂಡು ಸನಾತನ ಹಿಂದೂ ಧರ್ಮದ ನಾಶಕ್ಕೆ ಕಾರಣ ಕರ್ತರಾಗಿರುತ್ತಾರೆ. ಪುರಾತನವಾದ ತೀರ್ಥಗಳು, ಕಲ್ಯಾಣೀ, ಕೆಲವು ದೇವಸ್ಥಾನವನ್ನು ಮುಚ್ಚಿ ಹಾಕಿರುವುದೇ ಅಲ್ಲದೇ, ಅವುಗಳ ಮೇಲೆ ಗೃಹ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿರುವಂತಹವರಾಗಿದ್ದಾರೆ. ಶ್ರೀ ಕಾರ್ಯಸಿದ್ಧಿ ಮಾರುತಿ ದೇವಸ್ಥಾನದ ಎದುರಿನಲ್ಲಿದ್ದ ಶಿಲ್ಪ ದೀಪ ಸ್ತಂಭವನ್ನು ರಸ್ತೆಯ ಅಗಲೀಕರಣದ ಸಂದರ್ಭದಲ್ಲಿ ಸಂಪೂರ್ಣವಾಗಿ ತೆಗೆದುಹಾಕಿರುವುದೇ ಇದಕ್ಕೆ ಸಾಕ್ಷಿಯಾಗಿದೆ . ಇದಲ್ಲದೇ ಒಂದು ದೇವಸ್ಥಾನದ ಎದುರಿನಲ್ಲಿದ್ದ ಕಬ್ಬಿಣದ ದೊಡ್ಡದಾದ ನಕ್ಷತ್ರ ಮಾಲಿಕೆ ದೀಪಸ್ತಂಭ ವನ್ನು ನಷ್ಟ ಮಾಡಿ ನವೀಕರಣದ ನೆಪದ ಕಾರಣದಿಂದ ದೇವಾಲಯದ ಮುಖ್ಯ ದ್ವಾರವನ್ನು ಬೀಗಮುದ್ರೆ ಇದ್ದರೂ ಸಹ ಹಗಲಿನಲ್ಲಿಯೇ ಗೋಡೆ ಸಹಿತ ಕೆಡವಿ ಹಾಕಿದ್ದು , ಅಶಾಸ್ತ್ರೀಯವಾಗಿ ವಿಮಾನ ಗೋಪುರ ನಿರ್ಮಾಣ ಮಾಡಿ ಕೊಳವೆಯ ಮೇಲೆ ಶಿಖರದ ಕಳಸವನ್ನು ಇಡಿಸಿರುತ್ತಾರೆ . ದೇವಾಲಯದ ವಾಸ್ತುವನ್ನು ಹಾಳುಮಾಡಿದ್ದಾರೆ . ಇದರಂತೆ ಕೆಲವು ದೇವಸ್ಥಾನಗಳೂ , ಬಾವಿಗಳೂ , ಕಲ್ಯಾಣಿಯೂ ಸಹ ಕಣ್ಮರೆಯಾಗಿವೆ .
ಇದಕ್ಕೆ ಸಂಬಂಧಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮುಜರಾಯಿ ಅಧಿಕಾರಿಗಳು, ಶಾಸಕರು , ಸಂಸದರೂ , ಸಚಿವರುಗಳು ಮುಖ್ಯಮಂತ್ರಿಗಳು , ರಾಜ್ಯಪಾಲರು , ಪ್ರಧಾನಮಂತ್ರಿಗಳು , ರಾಷ್ಟ್ರಪತಿಗಳು , ಈ ಕ್ಷೇತ್ರದ ಕಡೆಗೆ ಗಮನ ಹರಿಸಿ ಉತ್ಖನನವನ್ನು ನಡೆಯಿಸಿ , ಅಪೂರ್ವ ತೀರ್ಥಗಳೂ ಕಲ್ಯಾಣಿಯೂ ದೇವಸ್ಥಾನಗಳೂ ಪುನಃ ಗೋಚರಿಸುವಂತೆ ಮಾಡಿ ಮರೆಯಾಗಿರುವ ಸ್ಮಾರಕಗಳು ಬಯಲಿಗೆ ಬರುವಂತೆ ಮಾಡಿ ಅವುಗಳನ್ನು ಸಂರಕ್ಷಣೆ ಮಾಡಲು ವಿನಂತಿ ಮಾಡಿ ಕೊಳ್ಳುತ್ತಿದ್ದೇವೆ. ಹಾಗೂ ಇಲ್ಲಿಗೆ ಬರುವ ಯಾತ್ರಿಕರು, ಪ್ರವಾಸಿಗರಿಗೆ, ಭಕ್ತಾದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ,
ಹರಿಹರ ನಗರದ ಆರೇಳು ಕಡೆಗಳಿಂದಲೂ ನದಿಗೆ ಕಲುಷಿತಗೊಂಡು ಸೇರುವ ಜಲವನ್ನು ತಪ್ಪಿಸಿ, ಉತ್ತಮ ಗುಣಮಟ್ಟದ ಸ್ನಾನ ಘಟ್ಟವನ್ನು ನಿರ್ಮಾಣ ಮಾಡಿ, ಒಂದು ಸುಂದರವಾದ ದೇವತಾ ವೃಕ್ಷಗಳಿಂದ ಕೂಡಿದ ಉದ್ಯಾನವನವನ್ನು ನಿರ್ಮಾಣ ಮಾಡಿ, ಯಾತ್ರಿಕರು , ಪ್ರವಾಸಿಗರಿಗೆ , ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾತ್ರೀ ನಿವಾಸವನ್ನು ನಿರ್ಮಾಣ ಮಾಡಿ , ದೇವಾಲಯದ ದೇವರ ಸೇವೆ ಮಾಡಿಸಲು ಬರುವಂತಹ ಭಕ್ತಾದಿಗಳಿಗೆ ಅನುಕೂಲವಾಗುವ ಸೇವಾ ಮಾಹಿತಿ ಕೊಡುವಂತಹ ಸ್ಥಾನವನ್ನು , ತೀರ್ಥ ಪ್ರಸಾದ ವಿತರಣೆಯ ಸ್ಥಾನವನ್ನು ನಿರ್ಮಾಣ ಮಾಡಿ , ಈ ಶ್ರೀ ಹರಿಹರೇಶ್ವರ ಸ್ವಾಮಿಯ ದೇವಾಲಯವಿರುವ ಹರಿಹರ ನಗರವನ್ನು ಉತ್ತಮ ಗುಣಮಟ್ಟದ ಪ್ರೇಕ್ಷಣೀಯ ಪ್ರವಾಸಿ ತಾಣವನ್ನಾಗಿಸಿ , ಈ ನಗರದ ಸೌಂದರ್ಯವನ್ನು ಹೆಚ್ಚಿಸಿ , ಶ್ರೀ ಗುಹಾರಣ್ಯ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಹರಿಹರ ನಗರದ ಸಮಸ್ತ ನಾಗರಿಕರು ತಮ್ಮಲ್ಲಿ ಸವಿನಯದಿಂದ ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇವೆ .
0 Comments