ಇಂದು ಹರಿಹರದ ಜೆಡಿಎಸ್ ಕಚೇರಿಯಲ್ಲಿ "ತುರ್ತು ಸಭೆ"



ಮಂದಾರ ನ್ಯೂಸ್, ಹರಿಹರ: ಇಂದು ಸಂಜೆ 4:00ಗೆ ಹರಿಹರದ ಜೆಡಿಎಸ್ ಕಚೇರಿಯಲ್ಲಿ ಪಕ್ಷದ ತುರ್ತು ಕಾರ್ಯಕರ್ತರ ಸಭೆಯನ್ನು ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಹೆಚ್. ಎಸ್ ಶಿವಶಂಕರ್ ರವರ ನೇತೃತ್ವದಲ್ಲಿ ಕರೆಯಲಾಗಿದೆ.

ಇಂದಿನ ಸಭೆಗೆ ಪಕ್ಷದ ಗೌರವಾನ್ವಿತ ನಗರಸಭೆಯ ಸದಸ್ಯರು ,ಮುಖಂಡರು, ಮಹಿಳೆಯರು, ಅಭಿಮಾನಿಗಳು, ಕಾರ್ಯಕರ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾಧ್ಯಕ್ಷರಾದ ಬಿ ಚಿದಾನಂದಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಬಿಜೆಪಿ ಅಭ್ಯರ್ಥಿಯಾಗಿ ಗಾಯತ್ರಿ ಜಿ ಎಂ ಸಿದ್ದೇಶ್ ಅವರು ಕಣಕ್ಕಿಳಿದಿದ್ದಾರೆ. ಈಗಾಗಲೇ ಮಾಜಿ ಶಾಸಕರು ಹರಿಹರ ವಿಧಾನಸಭಾ ಕ್ಷೇತ್ರಾದ್ಯಂತ ಪ್ರಚಾರವನ್ನು ಆರಂಭಿಸಿದ್ದಾರೆ.

ಇಂದು ಸಂಜೆ 4:00ಗೆ ಹರಿಹರ ಜೆಡಿಎಸ್ ಕಚೇರಿಯಲ್ಲಿ ತುರ್ತು ಸಭೆ .ದಯವಿಟ್ಟು ಎಲ್ಲರೂ ಬನ್ನಿ.

Post a Comment

0 Comments