ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಎಸ್ ರಾಮಪ್ಪನವರ ಮನೆಗೆ ಕಾಂಗ್ರೆಸ್ ಪಕ್ಷದ ಲೋಕಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಬಿ.ಜಿ ವಿನಯ್ ಕುಮಾರ್ ಅವರು ನಿನ್ನೆ ತಡರಾತ್ರಿ ಮಾಜಿ ಶಾಸಕರೊಂದಿಗೆ ಗುಪ್ತ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಮಾಜಿ ಶಾಸಕರು ಹಾಗೂ ವಿನಯ್ ಕುಮಾರ್ ಅವರ ನಡುವೆ ನಡೆದಿರುವ ಮಾತುಕತೆಯಾದರು ಏನು? ಎಂಬ ಕುತೂಹಲ ಪಕ್ಷದ ಕಾರ್ಯಕರ್ತರಲ್ಲಿ ಮನೆ ಮಾಡಿದೆ.
ವಿನಯ್ ಕುಮಾರ್ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಎಸ್. ರಾಮಪ್ಪನವರು ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿರಬಹುದೇ? ಅಥವಾ ಎಸ್ ರಾಮಪ್ಪನವರು ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಒತ್ತಡ ಹೇರಿರಬಹುದೇ? ಅಥವಾ ವಿನಯ್ ಕುಮಾರ್ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಮಾಜಿ ಶಾಸಕರು ಬೆಂಬಲ ನೀಡಬಹುದೇ? ಅಥವಾ ವಿನಯ್ ಕುಮಾರ್ ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಹೇಳಿರಬಹುದೇ? ಅಥವಾ ಎಲ್ಲಾ ಮನಸ್ತಾಪವನ್ನು ಬದಿಗಿಟ್ಟು ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ತಿಳುವಳಿಕೆ ಹೇಳಿರಬಹುದೇ? ವಿನಯ್ ಕುಮಾರ್ ಅವರು ಮಾಜಿ ಶಾಸಕರನ್ನು ಗುಪ್ತವಾಗಿ ಭೇಟಿಯಾಗುವ ಹಿಂದಿನ ಉದ್ದೇಶವಾದರೂ ಏನು? ಗುಪ್ತವಾಗಿ ಭೇಟಿಯಾಗುವ ಅವಶ್ಯಕತೆಯಿತ್ತೆ? ಲೋಕಸಭಾ ಚುನಾವಣೆಗೆ ಏನಾದರೂ ರಾಜಕೀಯ ತಂತ್ರಗಳನ್ನ ಹೇಳಲು ಭೇಟಿಯಾಗಿರಬಹುದೇ? ಒಟ್ಟಾರೆಯಾಗಿ ಇವರಿಬ್ಬರ ಭೇಟಿಯ ಹಿಂದಿನ ಉದ್ದೇಶ ಏನು ಎಂಬ ಹತ್ತು ಹಲವು ಪ್ರಶ್ನೆಗಳು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಮೂಡಿದೆ.
ಈ ಎಲ್ಲಾ ಗೊಂದಲಗಳ ಪ್ರಶ್ನೆಗೆ ಸ್ವತಃ ಮಾಜಿ ಶಾಸಕರಾದ ಎಸ್ ರಾಮಪ್ಪನವರು ಉತ್ತರ ನೀಡಬಹುದೇ? ಅಥವಾ ಮುಂದಿನ ದಿನದಲ್ಲಿ ಬಿ ಜಿ ವಿನಯ್ ಕುಮಾರ್ ಅವರೇ ರಾಮಪ್ಪನವರನ್ನು ಭೇಟಿಯಾದ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಬಹುದೇ? ಯಾವುದಕ್ಕೂ ಇವರಿಬ್ಬರ ರಹಸ್ಯ ಭೇಟಿ ,ನಡೆದ ಗುಪ್ತ ಮಾತುಕತೆ ಏನು ಎಂಬುದು ತಿಳಿಯಲು ಒಂದೆರಡು ದಿನ ಕಾಯಬೇಕಾಗಿದೆ.
0 Comments