ಮರಳಿ ಗೂಡು ಸೇರಿದ ಹರಿಹರದ "ಹಿಂದೂ ಹುಲಿ"ಎ.ಬಿ.ಎಂ. ವಿಜಯ್ ಕುಮಾರ್.



ಮಂದಾರ ನ್ಯೂಸ್ ಹರಿಹರ: ಆರ್‌ ಎಸ್ ಎಸ್ ಕಟ್ಟಾಳು, ಹಿಂದೂಪರ ಹೋರಾಟಗಾರ, ಹರಿಹರದ "ಹಿಂದು ಧರ್ಮ ರಕ್ಷಕ" ಎಬಿಎಂ ವಿಜಯ್ ಕುಮಾರ್ ಅವರು ಮತ್ತೆ ಮಾತೃ ಪಕ್ಷ ಬಿಜೆಪಿಯನ್ನು ಸೇರಿಕೊಂಡಿದ್ದಾರೆ.

ನಿನ್ನೆ ತಾನೆ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದರು. ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಎಬಿಎಂ ವಿಜಯ್ ಕುಮಾರ್ ಅವರು ಮತ್ತೆ ಬಿಜೆಪಿ ಪಕ್ಷಕ್ಕೆ ಮರಳಿ ಬಂದಿದ್ದಾರೆ.

ಎ ಬಿ ಎಂ ವಿಜಯ್ ಕುಮಾರ್ ಅವರನ್ನು ಪಕ್ಷಕ್ಕೆ ಮರಳಿ ತರುವಲ್ಲಿ ದಾವಣಗೆರೆ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಶಿವಕುಮಾರ್ ರಾಜನಹಳ್ಳಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. 

ಹಿಂದುತ್ವದ ಸಿದ್ಧಾಂತವನ್ನು ಬಿಟ್ಟುಕೊಡಲು ಮನಸ್ಸಿಲ್ಲದೆ ಹಾಗೂ ಕಾರ್ಯಕರ್ತರ ಒತ್ತಡದಿಂದಾಗಿ ಎಬಿಎಂ ವಿಜಯ್ ಕುಮಾರ್ ಅವರು ಮತ್ತೆ ಬಿಜೆಪಿ ಪಕ್ಷವನ್ನು ಸೇರಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ರಾಜನಹಳ್ಳಿ ಶಿವಕುಮಾರ , ನಗರಸಭಾ ಸದಸ್ಯೆ ಶ್ರೀಮತಿ ಅಶ್ವಿನಿ ಕೃಷ್ಣ,
 ಆನಂದ್ Ac, ರಾಜು, ಕಿರಣ್ ಮೂಲಿಮನಿ , ಮಲ್ಲಿಕಾರ್ಜುನ ,ಭರತ್ ,ಪ್ರೇಮ್ ಕುಮಾರ್, ಕೃಷ್ಣ ಉಪಸ್ಥಿತರಿದ್ದರು.

Post a Comment

0 Comments