ಮಂದಾರ ನ್ಯೂಸ್, ಹರಿಹರ: ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಜಿ ಎಂ ಸಿದ್ದೇಶ್ ಅವರ ಪರವಾಗಿ ಹರಿಹರ ವಿಧಾನಸಭಾ ಕ್ಷೇತ್ರದ ಜೋಡೆತ್ತುಗಳಾದ ಬಿಜೆಪಿಯ ಹಾಲಿ ಶಾಸಕರಾದ ಬಿಪಿ ಹರೀಶ್ ಹಾಗೂ ಜೆಡಿಎಸ್ ಪಕ್ಷದ ಮಾಜಿ ಶಾಸಕರಾದ ಎಚ್ ಎಸ್ ಶಿವಶಂಕರ್ ಅವರಿಂದ ಮತ ಪ್ರಚಾರ.
ದೇಶದ ಭದ್ರತೆಯ ದೃಷ್ಟಿಯಿಂದ ಸಮರ್ಥ ನಾಯಕರನ್ನು ನಾವು ಆಯ್ಕೆ ಮಾಡಬೇಕಾಗಿದೆ. ಇಂದು ಭಾರತ ವಿಶ್ವ ಭೂಪಟದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿದೆ. ನರೇಂದ್ರ ಮೋದಿ ಅವರ ನಾಯಕತ್ವದ ಫಲವಾಗಿ ಭಾರತ ವಿಶ್ವಗುರುವಾಗಿದೆ. ವಿಶ್ವದ ಪ್ರಮುಖ ದೇಶದ ನಾಯಕರು ಭಾರತದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. ಭಾರತದ ಪ್ರಧಾನಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ವಿಶ್ವದ ಪ್ರಮುಖ ದೇಶದ ನಾಯಕರು ತಲೆಬಾಗುತ್ತಿದ್ದಾರೆ. ಇದಕ್ಕೆ ಕಾರಣ ಸನ್ಮಾನ್ಯ ಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿಯವರು. ಅವರ ನಾಯಕತ್ವದ ಫಲವಾಗಿ ಇಂದು ಭಾರತ ವಿಶ್ವಗುರುವಾಗಿ ಬೆಳಗುತ್ತಿದೆ. ಇಂತಹ ಸಮರ್ಥ ನಾಯಕರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಬೇಕಾದರೆ ನಾವು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಜಿ ಎಂ ಸಿದ್ದೇಶ್ ಇವರಿಗೆ ಮತವನ್ನ ನೀಡೋಣ. ಆ ಮೂಲಕ ಪ್ರಧಾನಮಂತ್ರಿಯವರ ಕೈಯನ್ನು ಬಳಪಡಿಸೋಣ ಎಂದು ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಹೆಚ್ ಎಸ್ ಶಿವಶಂಕರ್ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಸಮರ್ಥ ನಾಯಕ ಮತ್ತು ನಾಯಕತ್ವದ ಪರಿಣಾಮದಿಂದ ದೇಶ ಇಂದು ಸುಭದ್ರವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಚಿತ್ರಣವೇ ಬದಲಾಗಿದೆ. ಆರ್ಥಿಕತೆಯಲ್ಲಿ ಭಾರತ ಮೂರನೇ ಸ್ಥಾನಕ್ಕೆ ಬಂದು ನಿಂತಿದೆ. ವಿಶ್ವದ ಭೂಪಟದಲ್ಲಿ ಭಾರತ ತನ್ನದೇ ಆದ ಹೆಸರು ಮತ್ತು ಗೌರವವನ್ನು ಸಂಪಾದಿಸಿದೆ ಇದಕ್ಕೆಲ್ಲ ಕಾರಣ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವ. ಇವರ ನಾಯಕತ್ವದಲ್ಲಿ ದೇಶ ಮುನ್ನಡೆಯಬೇಕಾಗಿದೆ ಹಾಗಾಗಿ ಈ ಬಾರಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡೋಣ .ಆ ನಿಟ್ಟಿನಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಜಿ .ಎಂ ಸಿದ್ದೇಶ್ವರ್ ಅವರನ್ನು ಅತ್ಯಧಿಕ ಮತದಿಂದ ಗೆಲ್ಲಿಸೋಣ ಎಂದು ಕರೆ ನೀಡಿದರು.
ಇದಕ್ಕೂ ಮೊದಲು ಮತದಾರರನ್ನು ಉದ್ದೇಶಿಸಿ ಮಾತನಾಡಿದ ಹರಿಹರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾದ ಬಿಪಿ ಹರೀಶ್ ಅವರು ಮಾತನಾಡಿ ಕಳೆದ ಹತ್ತು ವರ್ಷಗಳ ಹಿಂದೆ ಬಿಜೆಪಿ ಪಕ್ಷಕ್ಕೆ ನೀಡಿದ ಮತಗಳಿಂದಾಗಿ ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ 1070 ಕೋಟಿ ರೂಪಾಯಿಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಹಾಯವಾಗಿದೆ. ಇದರ ಜೊತೆಗೆ 106 ಕೋಟಿ ವೆಚ್ಚದಲ್ಲಿ ಸರ್ಕಾರಿ ಹೈಟೆಕ್ ಬಸ್ ನಿಲ್ದಾಣ ತಲೆ ಎತ್ತಿ ನಿಂತಿದೆ. ಈಗಾಗಲೇ 51,000 ಪಾಸ್ಪೋರ್ಟ್ ಗಳನ್ನು ವಿತರಣೆ ಮಾಡಲಾಗಿದೆ. 15 ಕೋಟಿ ವೆಚ್ಚದಲ್ಲಿ ಇಎಸ್ ಐ ಆಸ್ಪತ್ರೆ, ತುಂಗಾ ನಾಲಾ ಆಧುರೀಕರಣ, 29 ಜನ ಔಷಧಿ ಕೇಂದ್ರಗಳು, ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ 790 ಕಿಲೋಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿ, 13.5 ಕೋಟಿ ರೂ ವೆಚ್ಚದಲ್ಲಿ ಕೇಂದ್ರೀಯ ವಿದ್ಯಾ ಶಾಲೆ ,25 ಕೋಟಿ ವೆಚ್ಚದಲ್ಲಿ ದಿವ್ಯಾಂಗ ವ್ಯಕ್ತಿಗಳ ಚಿಕಿತ್ಸಾ ಕೇಂದ್ರ ,ರೈತರಿಗೆ ಭೀಮ ಫಸಲ್ ಯೋಜನೆ ಅಡಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳುವ ಮೂಲಕ ದಾವಣಗೆರೆ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಆದ್ದರಿಂದ ನಾವು ಈ ಬಾರಿ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಜಿ ಎಂ ಸಿದ್ದೇಶ್ವರ್ ಅವರನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸುವಂತೆ ಮತದಾರರಲ್ಲಿ ಶಾಸಕರು ಮನವಿ ಮಾಡಿಕೊಂಡರು.
ಜೋಡೆತ್ತುಗಳ ಮತ ಪ್ರಚಾರದ ಸಂದರ್ಭದಲ್ಲಿ ಹರಿಹರ ನಗರಸಭೆಯ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಶ್ರೀಮತಿ ನಿಂಬಕ್ಕ ನಿಂಗಪ್ಪ ಚಂದಾಪುರ್, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಅಜಿತ್ ಸಾವಂತ್, ಸುರೇಶ್ ಚಂದಾಪುರ್, ಅಡಿಕೆ ಪ್ರೇಮ್ ಕುಮಾರ್, ಪೂಜಾರ್ ಈರಣ್ಣ, ಬೆಣ್ಣೆ ರೇವಣಸಿದ್ದಪ್ಪ ಗೌಡ್ರು ಪುಟ್ಟಪ್ಪ, ಜಿ ನಂಜಪ್ಪ, ಬಸವರಾಜಪ್ಪ, ರೂಪ ಕಾಟ್ವೆ, ಬೆಣ್ಣೆ ಸಿದ್ದೇಶ್, ಮೋಹನ್ ಕೊಂಡಜ್ಜಿ ,ವೇದಮೂರ್ತಿ, ಸಂತೋಷ್ ಗುಡಿಮನಿ, ರಾಘು ಚೌಗಲೆ ,ದೊಗ್ಗಳ್ಳಿ ಗುರುಮೂರ್ತಿ ,ಸುನಂದಾ ಬಿ ಆರ್, ಸುರೇಶ್, ರುದ್ರೇಶ್, ಹಾಲೇಶ್, ಮಂಜುನಾಥ್, ಪಾಪಣ್ಣ, ಸುನಿಲ್, ಬಾತಿ ಚಂದ್ರಶೇಖರ್, ಹಾವನೂರು ಈರಣ್ಣ ,ಮಜ್ಜಿಗೆ ಚಂದ್ರಪ್ಪ, ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಜೋಡೆತ್ತುಗಳ ಪ್ರಚಾರದ ರೂವಾರಿಗಳಾದರು.
0 Comments