ಮಂದಾರ ನ್ಯೂಸ್, ಹರಿಹರ ನಗರದ ಅಮರಾವತಿ ಮಲ್ಲೇಶಪ್ಪ ಅವರ ಮಕ್ಕಳಾದ ಎಬಿಎಂ ವಿಜಯ್ ಕುಮಾರ್ ಮತ್ತು ಎಬಿಎಂ ವಿಶ್ವನಾಥ್ ಅವರು ಎಸ್.ಎಸ್. ಮಲ್ಲಿಕಾರ್ಜುನ್, ನಂದಿಗಾವಿ ಶ್ರೀನಿವಾಸ್, ಮಾಜಿ ಶಾಸಕ ಎಸ್.ರಾಮಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಎಸ್.ಬಸಪ್ಪ, ಕೃಷ್ಣ ಸಾ ಭೂತೆ, ವಕೀಲ ಎಂ. ನಾಗೇಂದ್ರಪ್ಪ, ರೇವಣಸಿದ್ದಪ್ಪ, ಶಂಕರ ಖಟಾವಕರ್, ಸೈಯದ್ ಸನಾವುಲ್ಲಾ, ಹಾಲೇಶ್ ಗೌಡ, ಕೆ.ಕೆ.ರಫೀಕ್, ಅಲೀಂಬಾಷಾ, ಜಾಕೀರ್ ಸಾಬ್, ನಜೀರ್ ಹುಸೇನ್, ಎನ್.ಹುಲಿಗೇಶ್, ಕಾಂಗ್ರೆಸ್ ಹಿರಿಯ ಮುಖಂಡರು ಮತ್ತು ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.
ಹರಿಹರ ಶಾಸಕರಾದ ಬಿ.ಪಿ ಹರೀಶ್ ರವರ ಆಪ್ತರು, ಆರ್.ಎಸ್.ಎಸ್.ಕಟ್ಟಾಳು, ಹಿಂದೂಪರ ಹೋರಾಟಗಾರರಾದ ಎಬಿಎಂ ವಿಜಯ್ ಕುಮಾರ್ ಮತ್ತು ಎಬಿಎಂ ವಿಶ್ವನಾಥ್ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಹರಿಹರ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಬಂದಂತಾಗಿದೆ.
0 Comments