ಮನೆಗಳ್ಳತನದ ಆರೋಪಿತರ ಬಂಧನ , 32 85 ಲಕ್ಷ ಮೊತ್ತದ ಸ್ವತ್ತು ವಶ.!!

ಮಂದಾರ ನ್ಯೂಸ್ ಹರಿಹರ : ದಿನಾಂಕ 12.07.2024ರಂದು ಮನೆ ಕಳ್ಳತನ ಮಾಡುವ ತಂಡ ಒಂದು ದಾವಣಗೆರೆ ಜಿಲ್ಲೆ ಹರಿಹರ ನಗರದಲ್ಲಿ ಕಳ್ಳತನ ಮಾಡಲು ಬಂದಿರುವ ಬಗ್ಗೆ ಖಚಿತ ಮಾಹಿತಿಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರಿಗೆ ಬಂದಿರುತ್ತದೆ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ವಿಜಯಕುಮಾರ್ ಎಂ , ಸಂತೋಷ್ ಮತ್ತು ಶ್ರೀ ಮಂಜುನಾಥ ಜಿ ಇವರ ಮಾರ್ಗದರ್ಶನದಲ್ಲಿ ದಾವಣಗೇರಿ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಸವರಾಜ್ ಬಿ ಎಸ್ ಮತ್ತು ಹರಿಹರ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದೇವಾನಂದ ಬಿ ಇವರುಗಳ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಚೇರಿಯ ಡಿಸಿಆರ್‌ಬಿ ವಿಭಾಗದ ಸಿಬ್ಬಂದಿಗಳು ಹಾಗೂ ಹರಿಹರ ನಗರ ಠಾಣೆಯ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಶಿಸಿ ಆರೋಪಿತರ ಪತ್ತೆಗೆ ಸೂಚಿಸಿದ್ದು, ಸದರಿ ತಂಡವು ಕಾರ್ಯಚರಣೆ ನಡೆಸಿ ದಿನಾಂಕ 12.07.2024 ರಂದು ಹರಿಹರ ನಗರದ ವಿದ್ಯಾನಗರದಲ್ಲಿ ಮನೆ ಕಳ್ಳತನಕ್ಕೆ ಹೊಂಚು ಹಾಕಿ ಮನೆ ಕಳ್ಳತನ ಮಾಡಲು ಬಂದ ತಂಡವನ್ನು ಬೆನ್ನತ್ತಿ ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದು, ನಂತರ ಆರೋಪಿತರನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ಮಾಡಿದಾಗ ಸದರಿ ಆರೋಪಿತರು ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಗುನ್ನೇ ನಂಬರ್ 148/2023 ಕಲಂ 454, 457, 380 ಐಪಿಸಿ ರೀತ್ಯಾ ದಾಖಲಾಗಿದ್ದ ಹರಿಹರ ನಗರದ ಜೆಸಿ ಬಡಾವಣೆಯಲ್ಲಿನ ಮನೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ.
ಏರಿಯಾ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡವು ಮನೆ ಕಳ್ಳತನದ ಆರೋಪಿಗಳಾದ 24 ವರ್ಷ ವಯಸ್ಸಿನ ಕಿರಣ ಗುಬ್ಬಿ, 22 ವರ್ಷ ವಯಸ್ಸಿನ ಕೊಟ್ರೇಶ್ ಸಿ ಕೆ ಅಲಿಯಾಸ್ ಕುಪ್ರಸಾದ್, 24 ವರ್ಷ ವಯಸ್ಸಿನ ನಿತ್ಯಾನಂದ ಅಲಿಯಾಸ್ ನಿತ್ಯಾನಂದ ಕೆಳಗಿನಮನಿ, 32 ವರ್ಷ ವಯಸ್ಸಿನ ಶಿವು ಇವರುಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು ಆರೋಪಿತರಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಸ್ವತ್ತನ್ನು ವಶಪಡಿಸಿಕೊಂಡಿರುತ್ತಾರೆ. 

ಆರೋಪಿತರಿಂದ ವಶಪಡಿಸಿಕೊಂಡ ಸ್ವತ್ತಿನ ವಿವರ ಈ ಕೆಳಕಂಡಂತೆ ಇರುತ್ತದೆ. 
32 ಲಕ್ಷ ರೂಪಾಯಿ ಬೆಲೆಯ 434 ಗ್ರಾಂ ತೂಕದ ವಿವಿಧ ಬಂಗಾರದ ಆಭರಣಗಳು, 40,000 ಬೆಲೆಯ 500 ಗ್ರಾಂ ತೂಕದ ಬೆಳ್ಳಿಗಟ್ಟಿ, 45,000 ಬೆಲೆಯ ಆಪಲ್ ಐಫೋನ್ ವಾಚ್, ಒಟ್ಟು 32 ಲಕ್ಷದ 85,000 ಬೆಲೆಯ ಸ್ವತ್ತನ್ನು ವಶಪಡಿಸಿಕೊಂಡಿರುತ್ತಾರೆ. 
ಸದರಿ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ರಾಣೆಬೆನ್ನೂರು ಪೊಲೀಸ್ ಠಾಣಾ ಸರಹದ್ದಿನ ಕೂಲಿ ಕೆಲಸ ಮಾಡುವ 33 ವರ್ಷ ವಯಸ್ಸಿನ  ಶಂಕರ್ ಗುಬ್ಬಿ ಈ ವ್ಯಕ್ತಿಯ ಮೇಲೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್ 50/2024 ಕಲಂ 395 ಐಪಿಸಿ ಕೇಸಿನಲ್ಲಿ ಹಾವೇರಿ ಜಿಲ್ಲಾ ಕಾರ್ಯಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುತ್ತಾನೆ.

ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರ ಪತ್ತೆ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ದಾವಣಗೆರೆ ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಸವರಾಜ್ ಬಿ ಎಸ್ ರವರು, ಹರಿಹರ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ದೇವಾನಂದ ಎಸ್ ರವರು,ಶ್ರೀ ವಿಜಯ್ ಜಿ ಎಸ್. ಪಿಎಸ್ಐ, ಶ್ರೀಪತಿ ಗಿನ್ನಿ, ಪಿಎಸ್ಐ, ಹಾಗೂ ಡಿಸಿಆರ್ ಬಿ ಸಿಬ್ಬಂದಿಗಳಾದ ಮಜೀದ್ ಕೆ ಸಿ, ಆಂಜನೇಯ ಕೆ ಟಿ, ರಾಘವೇಂದ್ರ, ರಮೇಶ್ ನಾಯ್ಕ ,ಬಾಲಾಜಿ ಸಿ ಎಸ್, ಇವರುಗಳು ಹಾಗೂ ಡಿವೈಎಸ್ಪಿ ಕಚೇರಿಯ ಎಎಸ್ಐ ಕರಿಬಸವರಾಜು, ತಿಮ್ಮೇಶ್, ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ಶಾಂತರಾಜು, ರಾಮಚಂದ್ರ ಜಾಧವ್ ಮತ್ತು ಹರಿಹರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನಾಗರಾಜ್ ಸುಣಗಾರ, ರುದ್ರ ಸ್ವಾಮಿ ಕೆ ಸಿ, ಹೇಮಾ ನಾಯ್ಕ್ ಬಿ ಎಸ್, ರವಿ ಆರ್, ಸಿದ್ದೇಶ್ ಹೆಚ್ ಸಿದ್ದರಾಜು ತಿಪ್ಪೇಶ್ ಸ್ವಾಮಿ ಕೆಎಲ್, ಸತೀಶ್ ಟಿ ವಿ, ರಂಗನಾಥ್, ಇವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಮತಿ ಉಮಾ ಪ್ರಶಾಂತ್ ಐಪಿಎಸ್ ಇವರು ಶ್ಲಾಘಿಸಿರುತ್ತಾರೆ.

Post a Comment

0 Comments