ಮಂದಾರ ನ್ಯೂಸ್ ಹರಿಹರ : ಶಿಕ್ಷಣ ಇಲಾಖೆಯಲ್ಲಿ 38 ವರ್ಷ 10 ತಿಂಗಳು ಸುದೀರ್ಘ ಸೇವೆಯನ್ನು ಸಲ್ಲಿಸಿ ವಯೋನಿವೃತ್ತಿ ಹೊಂದಿದ ರೇವಣಸಿದ್ದಪ್ಪ ಅಂಬಿಗೇರ ನಂದಿಗಾವಿ ಇವರಿಗೆ ಹರಿಹರ ಕ್ಷೇತ್ರ ಶಿಕ್ಷಣ ಇಲಾಖೆಯ ಸಹ ನೌಕರರಿಂದ ಗೌರವ ಸನ್ಮಾನ ಕಾರ್ಯಕ್ರಮವನ್ನು ನಿನ್ನೆ ದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ರೇವಣಸಿದ್ದಪ್ಪ ಅಂಬಿಗೇರ ಇವರು 21.02.1986 ರಲ್ಲಿ ಹರಿಹರ ತಾಲೂಕು ಮಲೆಬೆನ್ನೂರು ಹೋಬಳಿ ಹಾಲಿವಾಣ ಪ್ರೌಢಶಾಲೆಯ ಎಸ್ ಡಿ ಎ ಆಗಿ ಸೇವೆ. ಶಿವಮೊಗ್ಗ ಜಿಲ್ಲೆಯ ಉದ್ರಿಯಲ್ಲಿ 1 ವರ್ಷ ಎಸ್ ಡಿ ಎ ಆಗಿ ಸೇವೆ, ಹರಿಹರದ ಡಿ ಆರ್ ಎಂ ಕಾಲೇಜು, ಡಿಡಿಪಿಐ ಕಚೇರಿಯಲ್ಲಿ ಎಪ್ ಡಿ ಎ ನೌಕರರಾಗಿ ಸೇವೆ, ದಾವಣಗೆರೆಯ ಲೋಕಸಭಾ ಕ್ಷೇತ್ರದ ಅಂದಿನ ದಿವಂಗತ ಮಲ್ಲಿಕಾರ್ಜುನಪ್ಪ ಇವರಿಗೆ ಆಪ್ತ ಸಹಾಯಕರಾಗಿ ಸೇವೆ, ಪುಟ್ಟಣ್ಣ ಉಪ ಸಭಾಪತಿಗಳು ,ಹಾಲಿ ಎಂಎಲ್ಸಿ ಶಿಕ್ಷಕರ ಕ್ಷೇತ್ರ .ಇವರಿಗೆ ಆಪ್ತ ಸಹಾಯಕರಾಗಿ ಸೇವೆ, ಹರಿಹರ ಕ್ಷೇತ್ರ ಶಿಕ್ಷಣ ಇಲಾಖೆಯಲ್ಲಿ ಸೇವೆ, ಹೀಗೆ ಶಿಕ್ಷಣ ಇಲಾಖೆಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ ದಿನಾಂಕ 30 /5 /2024ರಂದು ವಯೋ ನಿವೃತ್ತಿ ಹೊಂದಿರುವ ರೇವಣಸಿದ್ದಪ್ಪ ಅಂಬಿಗೇರ ನಂದಿಗಾವಿ ಇವರನ್ನು ಇಂದು ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇತರ ನೌಕರರು ಹಾಗೂ ಸಿಬ್ಬಂದಿಗಳು ಇವರನ್ನು ಗೌರವಿಸಿ, ಸನ್ಮಾನಿಸಿದರು...
ಈ ಸರಳ ಕಾರ್ಯಕ್ರಮದ ಸಂದರ್ಭದಲ್ಲಿ ಮಹಮ್ಮದ್ ಅಸ್ಲಾಂ, ಕಚೇರಿಯ ವ್ಯವಸ್ಥಾಪಕರು. ಲೋಹಿತ್ ಕುಮಾರ್, ಕುಮಾರಸ್ವಾಮಿ ಅಧೀಕ್ಷಕರು. ಕೃಷ್ಣಮೂರ್ತಿ, ಶಿವಮೂರ್ತಿ, ತಿಮ್ಮಕ್ಕ, ಅಮೂಲ್ಯಶ್ರೀ, ನಾಗರತ್ನಮ್ಮ, ಶಿವರಾಜ್ ಎಸಿ ,ಬಾಬುರೆಡ್ಡಿ, ರಮೇಶ್, ಗಣೇಶ್, ವೆಂಕಟೇಶ್, ರಾಮಚಂದ್ರಗೌಡ, ಕೊಟ್ರೇಶ್ ಎಂ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
0 Comments