ಮಂದಾರ ನ್ಯೂಸ್ ಹರಿಹರ: ಜನ ದಟ್ಟನೆಯ ಪ್ರದೇಶ, ಬ್ಯಾಂಕುಗಳ ಮುಂದೆ ಅಪರಿಚಿತ ವ್ಯಕ್ತಿಗಳ ರೂಪದಲ್ಲಿರುವ ಕಳ್ಳರು ಜನರ ಗಮನವನ್ನು ಬೇರೆ ಕಡೆ ಸೆಳೆದು ಹಣ ಕಳ್ಳತನ ಮಾಡುತ್ತಿದ್ದರು.
ಕಳೆದ ಆರು ತಿಂಗಳ ಹಿಂದೆ ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿ ಬಿ ರಸ್ತೆಯ ಪಕ್ಕದಲ್ಲಿರುವ ಎಸ್ ಬಿ ಐ ಬ್ಯಾಂಕಿನಿಂದ ಕಾಳಿದಾಸ ನಗರ 2 ಮೇನ್ 4ನೇ ಕ್ರಾಸ್ ಬಿರ್ಲಾ ಗ್ರಾಸಿಮ್ ಕಂಪನಿಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದ ರಾಮಚಂದ್ರಪ್ಪ ಅರಳಿಕಟ್ಟೆ ಇವರು ದಿನಾಂಕ 6 /3 /2024 ರಂದು ನಗರದ ಎಸ್‌ಬಿಐ ಬ್ಯಾಂಕಿನಿಂದ ತಮ್ಮ ಖಾತೆಯಲ್ಲಿದ್ದ 6 ಲಕ್ಷ ರೂಪಾಯಿ ಹಣವನ್ನು ಬಿಡಿಸಿಕೊಂಡು ತಮ್ಮ ಮೋಟರ್ ಬೈಕ್ ಸೈಡ್ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗುವಾಗ ತಮಿಳುನಾಡು ರಾಜ್ಯದ ಆರೋಪಿ ಮಧನ್ ಈತನು ರಾಮಚಂದ್ರಪ್ಪ ಅರಳಿಕಟ್ಟೆ ಇವರ ಗಮನಕ್ಕೆ ಬಾರದ ರೀತಿಯಲ್ಲಿ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ.
ಇದೇ ಕಳ್ಳ ಪುನಃ 15.07.2024ರಂದು ಮತ್ತೆ ಕಳ್ಳತನ ಮಾಡಲು ಬಂದಾಗ ಹರಿಹರ ನಗರ ಪೊಲೀಸರು ಆರೋಪಿಯನ್ನು ಹಿಡಿದು ವಿಚಾರಣೆ ಮಾಡಿದಾಗ ಆರೋಪಿಯು ಪೊಲೀಸರ ಮುಂದೆ ಜನರ ಗಮನವನ್ನು ಬೇರೆ ಕಡೆ ಸೆಳೆದು ಕಳ್ಳತನ ಮಾಡಲು ಬಂದಿದ್ದಾಗಿ ಹಾಗೂ ಈ ಹಿಂದೆ ಸುಮಾರು ಮೂರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದರಿಂದ ಆತನಿಂದ ಸುಮಾರು ಎರಡೂವರೆ ಲಕ್ಷ ರೂಪಾಯಿ ನಗದು ಹಣವನ್ನು ಹರಿಹರ ಪೊಲೀಸರು ವಶಪಡಿಸಿಕೊಂಡಿರುತ್ತಾರೆ.
ಕಳ್ಳತನ ಮಾಡಿದ ಆರೋಪಿತನನ್ನು ಹೇಗಾದರೂ ಮಾಡಿ ಪತ್ತೆ ಮಾಡಬೇಕು ಎಂದು ಮಾನ್ಯ ಪೋಲಿಸ್ ಉಪಾಧೀಕ್ಷಕರಾದ ಶ್ರೀ ಬಸವರಾಜ್ ಬಿಎಸ್ ಗ್ರಾಮಾಂತರ ಉಪ ವಿಭಾಗ, ದಾವಣಗೆರೆ. ಇವರ ಮಾರ್ಗದರ್ಶನದಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿರುತ್ತಾರೆ. ಈ ತಂಡದ ತನಿಖಾ ಅಧಿಕಾರಿಯಾಗಿ ಶ್ರೀ ಎಸ್ ದೇವಾನಂದ ಪಿ.ಐ ಹರಿಹರ ನಗರ ಠಾಣೆಯವರ ನೇತೃತ್ವದ ಶ್ರೀ ವಿಜಯ್ ಪಿಎಸ್ಐ ,ಶ್ರೀಪತಿ ಗಿನ್ನಿ ,ಪಿ ಎಸ್ ಐ. ಅಂತೋನಿ ಎ ಎಸ್ ಐ, ಸಿಬ್ಬಂದಿವರಾದ ನಾಗರಾಜ್ ಸುಣಗಾರ,ರವಿ ಆರ್ ಸಿದ್ದೇಶ್ ಹೆಚ್, ಹೇಮಾ ನಾಯಕ್ ಬಿಎಸ್, ರುದ್ರಸ್ವಾಮಿ ಕೆ ಸಿ ,ಹನುಮಂತ ಗೋಪಾನಾಳ, ಸತೀಶ್ ಟಿವಿ, ಚಾಲಕರಾದ ರಂಗನಾಥ್ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ಶಾಂತರಾಜ ಹಾಗೂ ಜಿಲ್ಲಾ ಅಪರಾಧ ಪತ್ತೆ ತಂಡದವರಾದ ಶ್ರೀ ಮಜೀದ್, ರಾಘವೇಂದ್ರ, ಆಂಜನೇಯ, ರಮೇಶ್ ನಾಯ್ಕ, ಬಾಲಾಜಿ ಇವರನ್ನೊಳಗೊಂಡ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಪತ್ತೆ ಮಾಡಿ ಸ್ವತ್ತನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ .ಸದರಿ ತಂಡಕ್ಕೆ ಮಾನ್ಯ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಉಮಾ ಪ್ರಶಾಂತ್ ಮಾನ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ವಿಜಯಕುಮಾರ್ ಸಂತೋಷ್ ಹಾಗೂ ಶ್ರೀ ಮಂಜುನಾಥವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
0 Comments