ಹರಿಹರ ಗ್ರಾಮಾಂತರ ಪೊಲೀಸರಿಂದ ಮಿಂಚಿನ ಕಾರ್ಯಚರಣೆ, ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ.!!

ಮಂದಾರ ನ್ಯೂಸ್, ಹರಿಹರ : ಹರಿಹರ ಗ್ರಾಮಾಂತರ ಪೊಲೀಸ್ ಇಲಾಖೆಯವರು ಮಿಂಚಿನ ಕಾರ್ಯಾಚರಣೆ ನಡೆಸಿ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿ ಅವರಿಂದ 2,20,000/ ಮೌಲ್ಯದ ನಗದು ಮತ್ತು ಆಭರಣಗಳನ್ನು ಜಪ್ತಿ ಮಾಡಿದ್ದಾರೆ.

23 ವರ್ಷ ವಯಸ್ಸಿನ ಶಂಷಿಪುರ ಗ್ರಾಮದ ಪ್ರದೀಪ್ ತಂದೆ ನಾಗರಾಜಪ್ಪ, ಅದೇ ಗ್ರಾಮದ 24 ವರ್ಷ ವಯಸ್ಸಿನ ಬಸವರಾಜ್ @ ಬಸ್ಯ ಇವರನ್ನು ಬಂಧಿಸಿ .ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ 1, 05,000  ಮೌಲ್ಯದ ನಗದು, ಒಂದು ಲಕ್ಷದ 3000 ಬೆಲೆಯ 15 ಗ್ರಾಂ ತೂಕದ ಬಂಗಾರದ ಆಭರಣಗಳು, 10000 ಮೌಲ್ಯದ 110 ಗ್ರಾಂ ಬೆಳ್ಳಿಯ ಆಭರಣಗಳು ಒಟ್ಟು ಬಂಧಿತ ಆರೋಪಿಗಳಿಂದ 2,20,000 ಮೌಲ್ಯದ ನಗದು ಹಾಗೂ ಆಭರಣಗಳನ್ನ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತನಿಖೆಯನ್ನು ಮುಂದುವರಿಸಿರುತ್ತಾರೆ. 
ಸದರಿ ಆರೋಪಿಗಳ ವಿರುದ್ಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗೊನ್ನೆ ನಂಬರ್ 113/2023 ಕಲಂ ನಾನೂ 154 457 380 ಐಪಿಸಿ ರಿತ್ಯ ಪ್ರಕರಣದ ಪತ್ತೆ ಕಾರ್ಯವನ್ನು ಮಾನ್ಯ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ವಿಜಯಕುಮಾರ್ ಸಂತೋಷ್ ಹಾಗೂ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ಮಂಜುನಾಥ ಮತ್ತು ಗ್ರಾಮಾಂತರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಸವರಾಜ್ ಬಿಎಸ್ ಇವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕರಾದ ಸುರೇಶ್ ಸಗರಿ ಇವರ ನೇತೃತ್ವದಲ್ಲಿ ಗ್ರಾಮಾಂತರ ಪೋಲಿಸ್ ಉಪ-ನಿರೀಕ್ಷಕರಾದ ಮಂಜುನಾಥ್ ಕುಪ್ಪೇಲೂರು ಇವರ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಎ ಎಸ್ ಐ ರವರುಗಳಾದ ತಿಪ್ಪೇಶ್ ಸ್ವಾಮಿ, ರಾಮಚಂದ್ರಪ್ಪ ,ರಶೂಲ್ ,ಹೆಚ್ ಸಿ ರವರುಗಳಾದ ಕರಿಯಪ್ಪ, ರಮೇಶ್, ನೀಲಮೂರ್ತಿ, ಇಲಿಯಾಜ್, ನಾಗರಾಜ್, ಚೆನ್ನಕೇಶವ, ಸಿಪಿಸಿ ರವರುಗಳಾದ ಅರ್ಜುನ್ ರಾಯಲ್, ಅನಿಲ್ ಕುಮಾರ್ ನಾಯ್ಕ ,ಹನುಮಂತ, ನವೀನ್ ಕುಮಾರ್ ,ಗಂಗಾಧರ್, ದ್ವಾರಕೇಶ್, ನಾಗರಾಜ್  ಋಶಿರಾಜ್, ಪ್ರಸನ್ನಕಾಂತ್, ಸುರೇಶ್, ರಾಮಾಂಜನೇಯ, ರೂಪ, ಸಿದ್ದಪ್ಪ, ಮುರುಳಿ ರವರನ್ನ ಒಳಗೊಂಡ ತಂಡವು ಆರೋಪಿಗಳ ಪತ್ತೆ ಹಚ್ಚುವ ಕಾರ್ಯದಲ್ಲಿ ಯಶಸ್ವಿಯಾಗಿರುತ್ತಾರೆ. 
ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ದಾವಣಗೆರೆ ಜಿಲ್ಲಾ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀಮತಿ ಉಮಾ ಪ್ರಶಾಂತ್ ಇವರು ಶ್ಲಾಘಿಸಿರುತ್ತಾರೆ.

Post a Comment

0 Comments