ಲೋಕ ಕಲ್ಯಾಣಕ್ಕಾಗಿ ಹರಿಹರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸುರೇಶ್ ಸಗರಿ ನೇತೃತ್ವದಲ್ಲಿ ಗಣೇಶನಿಗೆ ವಿಶೇಷ ಪೂಜೆ.

ಹರಿಹರ : ಹರಿಹರ ತಾಲೂಕು ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ, ನೊಂದವರ ನೋವಿಗೆ ಧ್ವನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರ ಕಷ್ಟಕಾರ್ಪಣ್ಯಗಳಿಗೆ ಮುಕ್ತಿ ದೊರೆಯಲೆಂದು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಸುರೇಶ ಸಗರಿ ಅವರು ವಿಘ್ನ ನಿವಾರಕ ಗಣೇಶನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ನಗರದ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಗಣೇಶನ ವಿಗ್ರಹಕ್ಕೆ ಬೆಣ್ಣೆ ಅಲಂಕಾರದೊಂದಿಗೆ ಪಂಚಾಮೃತದ ಅಭಿಷೇಕ ನೆರವೇರಿಸಿ ,ವಿಶೇಷ ಪೂಜೆಯೊಂದಿಗೆ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದರು.

ತಾಲೂಕಿನ ಜನರು ಸಾಮರಸ್ಯದೊಂದಿಗೆ ಸಹ ಬಾಳುವೆಯ ಜೀವನವನ್ನು ನಡೆಸಿ,ಎಲ್ಲರೂ ಅಣ್ಣ- ತಮ್ಮಂದಿರಂತೆ ಬದುಕಲಿ. ಯಾವುದೇ ಅಹಿತಕರ ಘಟನೆಗಳಿಗೆ ಕಾರಣವಾಗದೆ, ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತೋಷದ ದಿನವನ್ನು ಕಳೆಯಲಿ. ಹುಟ್ಟು ಅಕಸ್ಮಿಕ , ಸಾವು ನಿಶ್ಚಿತ. ಇದರ ನಡುವಿನ ಬದುಕು ನಾಲ್ಕು ಜನರ ನೆಮ್ಮದಿಗೆ ಕಾರಣವಾಗಿ ಸಾರ್ಥಕ ಜೀವನವನ್ನು ನಡೆಸುವಂತಾಗಲಿ. ಭಗವಂತನ ಆಶೀರ್ವಾದ ಸದಾ ಜನತೆಯ ಮೇಲೆ ಇರಲಿ. ಈ ಬಾರಿ ದೇವರ ದಯೆಯಿಂದ ಉತ್ತಮ ಮಳೆಯಾಗಿದ್ದು,ರೈತರ ಮುಖದಲ್ಲಿ ಮಂದಹಾಸ ಮೂಡಿದೆ ‌.ಅದೇ ರೀತಿ ಜನಸಾಮಾನ್ಯರ ಮುಖದಲ್ಲೂ ಮಂದಹಾಸ ಮೂಡುವಂತಾಗಲಿ.ನಗರದ ಹಾಗೂ ಗ್ರಾಮೀಣ ಭಾಗದಲ್ಲಿ ಶಾಂತಿ & ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿ ಸಹಕರಿಸಿ ಎಂದು ಹರಿಹರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸುರೇಶ್ ಸಗರಿಯವರು ತಮ್ಮ ಭಕ್ತಿಯ ಮಾತುಗಳನ್ನು ಆಡಿದರು. 
ಈ ವಿಶೇಷ ಪೂಜಾ ಸಂದರ್ಭದಲ್ಲಿ ಹರಿಹರ ಗ್ರಾಮಾಂತರ ಡಿವೈಎಸ್ಪಿ ಬಸವರಾಜ್ ಬಿಎಸ್, ನಗರ ಠಾಣಾ ವೃತ್ತ ನಿರೀಕ್ಷಕರಾದ ದೇವಾನಂದ ಎಸ್, ಹರಿಹರ ತಾಲೂಕು ದಂಡಾಧಿಕಾರಿ ಕೆಎಂ ಗುರುಬಸವರಾಜ್, ಹರಿಹರ ಗ್ರಾಮಾಂತರ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಕುಪ್ಪೇಲೂರು, ನಗರ ಪೊಲೀಸ್ ಠಾಣಾ ನಿರೀಕ್ಷಕರಾದ ಶ್ರೀಪತಿ ಗಿನ್ನಿ, ಮೇಲೆಬೆನ್ನೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕರಾದ ಪ್ರಭು ಕೆಳಗಿನಮನೆ, ಹರಿಹರ ಗ್ರಾಮಾಂತರ ನಿರೀಕ್ಷಕರಾದ ಚಿದಾನಂದ ಸೇರಿದಂತೆ ಹರಿಹರ ನಗರ ಹಾಗೂ ಗ್ರಾಮಾಂತರ ಪೊಲೀಸ್ ಇಲಾಖೆಯ ಸರ್ವ ಸಿಬ್ಬಂದಿಗಳು, ತಾಲೂಕು ಕಚೇರಿಯ ನೌಕರರು, ಹರಿಹರ ನಗರ ಸಭೆಯ ಚುನಾಯಿತ ಸದಸ್ಯರು ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ತಾಲೂಕಿನ ಪ್ರಜ್ಞಾವಂತ ನಾಗರಿಕರು ಉಪಸ್ಥಿತರಿದ್ದು ವಿಘ್ನ ನಿವಾರಕ ಗಣೇಶನಿಗೆ ಪೂಜೆ ಸಲ್ಲಿಸಿ ಹರಿಹರದ ಸಮಸ್ತ ಜನರ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು.

Post a Comment

0 Comments