ಮಂದಾರ ನ್ಯೂಸ್ ರಾಣೆಬೆನ್ನೂರು: ಕಳೆದ ನಾಲ್ಕು ದಿನಗಳ ಹಿಂದೆ ಕುಮಾರ ಪಟ್ಟಣಂ ಪೊಲೀಸ್ ಠಾಣೆ ಸರಹದ್ದು ಕೊಡಿಯಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪದ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ಬಾರಿ ದುರಂತ ನಡೆದೆ ಹೋಗುವ ಸಾಧ್ಯತೆ ಇತ್ತು. ಕುಮಾರ ಪಟ್ಟಣಂ ಪೊಲೀಸರ ಸಮಯಪ್ರಜ್ಞೆಯಿಂದ ನಡೆಯಬಹುದಾದ ಬಾರಿ ದುರಂತ ತಪ್ಪಿದೆ.
ಘಟನೆ: ದಿನಾಂಕ 4 /9 /2024ರ ರಾತ್ರಿ ಸರಿಸುಮಾರು ಎಂಟು ಗಂಟೆ ಸಮಯದಲ್ಲಿ ಟಿಪ್ಪರ್ ಲಾರಿಯ ಬಾಡಿ ವಿದ್ಯುತ್ ತಂತಿಗೆ ತಾಗುವುದರ ಜೊತೆಗೆ ಆ ತಂತಿಗೆ ಸಿಕ್ಕಿಕೊಂಡು ಸ್ವಲ್ಪ ದೂರ ತಂತಿಯನ್ನು ಎಳೆದುಕೊಂಡು ಹೋಗುವುದರ ಜೊತೆಗೆ ಪಕ್ಕದಲ್ಲಿ ಇದ್ದ ರಸ್ತೆಯ ಚರಂಡಿಗೆ ಡಿಕ್ಕಿ ಹೊಡೆಯುವ ಮೂಲಕ ದೊಡ್ಡ ಅಪಘಾತ ಸಂಭವಿಸಿತು. ಇದೇ ಸಮಯದಲ್ಲಿ ಇದೇ ಮಾರ್ಗದಲ್ಲಿ ರಾಣೇಬೆನ್ನೂರು ಮಾರ್ಗದಿಂದ ಹರಿಹರ ಮಾರ್ಗದ ಕಡೆ ಹಾಗೂ ಹರಿಹರ ಮಾರ್ಗದಿಂದ ರಾಣೇಬೆನ್ನೂರು ಮಾರ್ಗದ ಕಡೆ ಸಾವಿರಾರು ಸಂಖ್ಯೆಯ ವಾಹನಗಳು ಸಂಚರಿಸುತ್ತಿದ್ದವು. ಲಾರಿಯು ವಿದ್ಯುತ್ ತಂತಿಗೆ ಸಿಕ್ಕಿಕೊಂಡು ಎಡಭಾಗದಿಂದ ಬಲ ಭಾಗದ ಚಿರಂಡಿಗೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ತಂತಿ ರಸ್ತೆಯ ಮಧ್ಯದಲ್ಲಿ ತೇಲಾಡುತ್ತಿತ್ತು. ತಕ್ಷಣ ಅಪಘಾತ ಸಂಭವಿಸುತ್ತಿದ್ದಂತೆ ಎಚ್ಚೆತ್ತುಕೊಂಡ ನಾಗರಿಕರೊಬ್ಬರು ಕೂಡಲೇ ಕುಮಾರ ಪಟ್ಟಣ ಪೊಲೀಸ್ ಠಾಣೆಗೆ ಕರೆ ಮಾಡುತ್ತಾರೆ .ಪೊಲೀಸ್ ಇಲಾಖೆಯ ಸಿಬ್ಬಂದಿಗಳು ತತಕ್ಷಣವೇ ಕಾರ್ಯಪ್ರವೃತ್ತರಾಗಿ ವಿದ್ಯುತ್ ಸರಬರಾಜು ಆಗುತ್ತಿದ್ದ ಪ್ರಮುಖವಾದ ಟಿಸಿಯ ಪೀಜನ್ನು ತೆಗೆಯುವ ಮೂಲಕ ನೆಡೆಯಬಹುದಾಗಿದ್ದ ಬಹುದೊಡ್ಡ ದುರಂತವನ್ನು ತಪ್ಪಿಸಿ ,ನೂರಾರು ಜನರ ಪ್ರಾಣವನ್ನ ಉಳಿಸಿದ್ದಾರೆ.
ಕೂಡಲೆ ವಿದ್ಯುತ್ತು ಸರಬರಾಜು ಆಗುತ್ತಿದ್ದ ಟ್ರಾನ್ಸ್ಫಾರ್ಮರ್ ಪೀಜನ್ನು ತೆಗೆಯುವ ಕೆಲಸ ಪೋಲಿಸ್ ಇಲಾಖೆಯ ಕೆಲವು ಸಿಬ್ಬಂದಿಗಳು ಮಾಡಿದರೆ ,ಇನ್ನೂ ಕೆಲವು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆಯ ಮಧ್ಯದಲ್ಲಿ ತೇಲಾಡುತ್ತಿದ್ದ ತಂತಿಯನ್ನು ತೆಗಿಸುವ ಕಾರ್ಯವನ್ನು ವಿದ್ಯುತ್ ಇಲಾಖೆಯ ಸಿಬ್ಬಂದಿಗಳ ಸಹಾಯದಿಂದ ಮಾಡಿದರು.
ದೇವರ ದಯೆಯಿಂದ ಟಿಪ್ಪರ್ ಲಾರಿಯ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಮಾರ ಪಟ್ಟಣಂ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗುವ ಮೂಲಕ ನೂರಾರು ಜೀವಿಗಳನ್ನು ಉಳಿಸಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ ರೀತಿಗೆ ಸಾರ್ವಜನಿಕರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಕಾರ್ಯದಲ್ಲಿ ಕುಮಾರ ಪಟ್ಟಣ ಪೊಲೀಸ್ ಠಾಣೆಯ ಹವಲ್ದಾರ್ ಸತೀಶ್ ಅಗಡಿ ಹಾಗೂ ಮಂಜುನಾಥ್ ಹಿರೇಬಿದರಿ, ಪಿಎಸ್ಐ ಕಾರು ಚಾಲಕರಾದ ಉಮೇಶ್ ಹೆಚ್ ಕೆ ಇವರು ತಮ್ಮ ಪ್ರಾಣದ ಹಂಗು ತೊರೆದು ಜನರ ಜೀವವನ್ನು ಕಾಪಾಡಿದ್ದಾರೆ. ಇಂತಹ ಸಮಾಜಮುಖಿ ಕಾರ್ಯದ ಜೊತೆಗೆ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆ ತೋರಿದ ಕುಮಾರ ಪಟ್ಟಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗೂ ನಮ್ಮ ಮಂದಾರ ನ್ಯೂಸ್ ಸುದ್ದಿ ವಾಹಿನಿಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
0 Comments