ಮಂದಾರ ನ್ಯೂಸ್ ಹರಿಹರ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಡಾಲ್ಫಿನ್ ಪಬ್ಲಿಕ್ ಶಾಲೆಯಲ್ಲಿ ಇಂದು ಮಕ್ಕಳಲ್ಲಿ ಓದುವ ಅಭ್ಯಾಸ ಬೆಳೆಸುವ ವಿಶಿಷ್ಟ ಕಾರ್ಯಕ್ರಮವಾದ "ಓದುವ ಅಭಿಯಾನ "ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಇತ್ತೀಚಿನ ದಿನದಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು ಮಕ್ಕಳಿಗೆ ಹೆಚ್ಚಾಗಿ ಹೋಮ್ ವರ್ಕ್ ಗಳನ್ನು ನೀಡಲಾಗುತ್ತಿದೆ. ಶಾಲೆಯ ಶಿಕ್ಷಕರು ನೀಡಿರುವ ಹೋಂವರ್ಕನ್ನು ಮುಗಿಸುವುದರಲ್ಲಿ ಮಕ್ಕಳು ಸಮಯವನ್ನು ಕಳೆಯಬೇಕಾಗಿದೆ ಈ ಸಂದರ್ಭದಲ್ಲಿ ಮಕ್ಕಳು ಓದುವ ಅಭ್ಯಾಸವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಇದರಿಂದ ಮಕ್ಕಳು ಹೊರಬರಬೇಕು ಓದುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಡಾಲ್ಫಿನ್ ಪಬ್ಲಿಕ್ ಶಾಲೆಯಲ್ಲಿ "ಓದುವ ಅಭಿಯಾನ" ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.
ಈಗಾಗಲೇ ಡಾಲ್ಫಿನ್ ಪಬ್ಲಿಕ್ ಸ್ಕೂಲ್ ತಾಲೂಕಿನಲ್ಲಿ ಅತ್ಯಂತ ಜನಪ್ರಿಯವಾದ ಶಾಲೆಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತ ಶಿಕ್ಷಣವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ನೀಡಲಾಗುತ್ತಿದೆ.
ಅತ್ಯಲ್ಪ ಸಮಯದಲ್ಲೇ ಡಾಲ್ಫಿನ್ ಪಬ್ಲಿಕ್ ಸ್ಕೂಲ್ ನೂರಾರು ಸಂಖ್ಯೆಯ ಮಕ್ಕಳನ್ನು ಹೊಂದಿದ್ದು ಅನೇಕ ಸೌಲಭ್ಯಗಳಿಂದ ಕೂಡಿದ ಶಾಲೆಯೆಂಬ ಹೆಗ್ಗಳಿಕೆಯ ಜೊತೆಗೆ ಪೋಷಕರ ಮೆಚ್ಚಿನ ಶಾಲೆ ಎನಿಸಿಕೊಂಡಿದೆ.
ಇಂದಿನ ಕಾಲಮಾನಕ್ಕೆ ತಕ್ಕಂತೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದರ ಜೊತೆಗೆ ನಾಡು, ನುಡಿ, ಭಾಷೆ ದೇಶದ ಸಂಸ್ಕೃತಿಯನ್ನು ಸಹ ಪರಿಚಯಿಸಿಕೊಡಲಾಗುತ್ತಿದೆ.
ಈಗಾಗಲೇ ಮಕ್ಕಳು ಓದಿನಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಿದ್ದು ಅನೇಕ ಗಣ್ಯ ವ್ಯಕ್ತಿಗಳಿಂದ ಈ ಶಾಲೆಯು ಉತ್ತಮ ಶಾಲೆಯೆಂಬ ಹೊಗಳಿಕೆಯನ್ನು ಪಡೆದಿದೆ.
ನುರಿತ ಶಿಕ್ಷಕರನ್ನು ಹೊಂದಿರುವ ಡಾಲ್ಫಿನ್ ಪಬ್ಲಿಕ್ ಸ್ಕೂಲ್ ಗೆ ಮಕ್ಕಳನ್ನು ಸೇರಿಸಲು ಪೋಷಕರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
ಇಂದಿನ ವಿಶೇಷ ವಿಶಿಷ್ಟ ಕಾರ್ಯಕ್ರಮವಾದ "ಓದುವ ಅಭಿಯಾನ "ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
0 Comments