ಕಾರ್ಯಾಂಗ ಶಾಸಕಾಂಗ ಒಟ್ಟಾಗಿ ಹೋದಾಗ ನಗರದ ಅಭಿವೃದ್ಧಿ ಸಾಧ್ಯವಾಗಿತ್ತು.....

ಮಂದಾರ ನ್ಯೂಸ್ ಹರಿಹರ : ನಾಗರಿಕ ಸೌಲಭ್ಯಗಳು ಸಮರ್ಪಕವಾಗಿ ಜನರಿಗೆ ತಲುಪಬೇಕಾದರೆ ಕಾರ್ಯಾಂಗ ಮತ್ತು ಶಾಸಕಾಂಗ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಆಗ ನಾಗರಿಕರಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಹರಿಹರ ನಗರಸಭೆಯ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳು ಒಟ್ಟಾಗಿ ಹೋಗುತ್ತಿರುವ ಪರಿಣಾಮ ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿರುವುದು ನಗರದ ಅಭಿವೃದ್ಧಿಯ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆ ಆಗಿದೆ.

ಈ ಹಿಂದಿನ ಅಧ್ಯಕ್ಷರಾಗಿದ್ದ ನಿಂಬಕ್ಕ ನಿಂಗಪ್ಪ ಚಂದಾಪುರವರ ಅಧಿಕಾರವಧಿ ಮುಗಿಯುತ್ತಿದ್ದಂತೆ ಹರಿಹರ ನಗರಸಭೆಯ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿತ್ತು.ನಿಂಬಕ್ಕ ನಿಂಗಪ್ಪ ಚಂದಾಪುರವರು ತಮಗೆ ಸಿಕ್ಕ ಅವಧಿಯಲ್ಲಿ ನಗರದ ಅಭಿವೃದ್ಧಿಗೆ ಶ್ರಮಿಸುವ ಪ್ರಯತ್ನ ಮಾಡಿದರು.ಆದರೆ ಅವರಿಗೆ ಹೆಚ್ಚಿನ ಸಮಯ ಸಿಗಲಿಲ್ಲ. ಆದರೂ ಚಿಕ್ಕ ಸಮಯದಲ್ಲೇ ಸ್ವಚ್ಛವಾಗಿ ಆಡಳಿತವನ್ನು ನಡೆಸಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದರು.

ಅವರು ತಮ್ಮ ಅಧಿಕಾರವನ್ನು ಮುಗಿಸುತ್ತಿದ್ದಂತೆ ಹರಿಹರ ನಗರಸಭೆಗೆ ಗ್ರಹಣ ಹಿಡಿಯಯಿತು. ಜಿಲ್ಲಾಧಿಕಾರಿಗಳು ಆಡಳಿತ ಅಧಿಕಾರಿಗಳಾಗಿ ತಮ್ಮ ಜವಾಬ್ದಾರಿಯನ್ನ ನಿಭಾಯಿಸುವಲ್ಲಿ ವಿಫಲರಾದರು. ಹಿಂದಿನ ಪೌರಾಯುಕ್ತಾರಾದ ಬಸವರಾಜ್ ಐಗುರವರು ಸರ್ವಾಧಿಕಾರಿಯಂತೆ ವರ್ತಿಸ ತೊಡಗಿದರು. ಇದರಿಂದ ಆಡಳಿತ ಯಂತ್ರ ಜಡ್ಡುಗಟ್ಟಿತು,ಜನಸಾಮಾನ್ಯರ ಕೆಲಸ- ಕಾರ್ಯಗಳು ವಿಳಂಬವಾಗ ತೊಡಗಿದವು.ನಗರದ ವಾರ್ಡಿನ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ ವಹಿಸಲಾಯಿತು.ಇದರ ನಡುವೆ ಲೋಕಾಯುಕ್ತರ ದಾಳಿಯು ಒಂದು ಕಡೆ ಅಧಿಕಾರಿಗಳನ್ನು ಬೆಚ್ಚಿಬಿಳಿಸಿತು. ಈ ಎಲ್ಲಾ ಪರಿಣಾಮ ನಗರದ ಅಭಿವೃದ್ಧಿಯ ಮೇಲೆ ಬಿರಿತ್ತು. 

ಸರಿಸುಮಾರು 10 ತಿಂಗಳ ನಂತರ ಹರಿಹರ ನಗರಸಭೆಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಕವಿತಾ ಮಾರುತಿ ಬೇಡರ್ ಅವರು ಅಧ್ಯಕ್ಷರಾದರೆ ಉಪಾಧ್ಯಕ್ಷರಾಗಿ ಜಂಬಣ್ಣನವರು ಆಯ್ಕೆಯಾದರು.

ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮತ್ತು ಪೌರಾಯುಕ್ತರು ಒಟ್ಟಾಗಿ ಸಾಗುತ್ತಿರುವ ಪರಿಣಾಮದಿಂದಾಗಿ ನಗರದ ಅನೇಕ ವಾರ್ಡುಗಳ ಅದೆಷ್ಟೋ ವರ್ಷದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಎಲ್ಲರೂ ಒಟ್ಟಾಗಿ ಮಾಡುತ್ತಿದ್ದಾರೆ.

ಅಧ್ಯಕ್ಷರು ,ಉಪಾಧ್ಯಕ್ಷರು ಹಾಗೂ ಪೌರಾಯುಕ್ತರ ಉತ್ಸಾಹ ಜನಸಾಮಾನ್ಯರಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದೆ. ನಗರದ ಅದೆಷ್ಟೋ ವರ್ಷದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂಬ ಆಶಾಭಾವನೆಯಲ್ಲಿ ಅವರಿದ್ದಾರೆ. ಸದ್ಯ ಇವರ ಕಾರ್ಯ ವೈಖರಿಗೆ ಜನಸಾಮಾನ್ಯರು ಪ್ರಸಂಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಕಾರ್ಯಾಂಗ ಮತ್ತು ಶಾಸಕಾಂಗ ಒಟ್ಟಾಗಿ ಹೆಜ್ಜೆ ಇಟ್ಟಾಗ ನಗರದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂಬ ಅಚಲವಾದ ನಂಬಿಕೆಯಿಂದ ಅಧ್ಯಕ್ಷರು ,ಉಪಾಧ್ಯಕ್ಷರು ಹಾಗೂ ಪೌರಾಯುಕ್ತರು ಒಟ್ಟಾಗಿ ಮುನ್ನಡೆಯುತ್ತಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಈಗಾಗಲೇ ಮಾಡಿದ್ದಾರೆ. ನಗರಸಭೆಯ ನೂತನ ಕಟ್ಟಡಕ್ಕೆ ಮತ್ತೊಮ್ಮೆ ವಾಸ್ತು ಪೂಜೆಯನ್ನು ನೆರವೇರಿಸುವ ಮೂಲಕ ಶೀಘ್ರ ಕಟ್ಟಡ ನಿರ್ಮಾಣವಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ. ಹೀಗೆ ನೂತನ ಪೌರಾಯುಕ್ತರೊಂದಿಗೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ನಗರದ ಅಭಿವೃದ್ಧಿಗೆ ಟೊಂಕಕಟ್ಟಿ  ನಿಂತಿರುವುದಂತೂ ಸತ್ಯ.

ಕಾರ್ಯಾಂಗ ಮತ್ತು ಶಾಸಕಾಂಗಗಳು ಒಟ್ಟಾಗಿ ಸಾಗಬೇಕು. ತಮ್ಮ ತಿಕ್ಕಾಟಗಳನ್ನು ಮನಸ್ತಾಪಗಳನ್ನು ಬದಿಗಿಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಬೇಕು.ಇವರಿಬ್ಬರೂ ಅಭಿವೃದ್ಧಿಯ ಚಿಂತಕರಾಗಬೇಕು. ಆಗ ಅಭಿವೃದ್ಧಿ ಎಂಬ ಪದಗಳಿಗೆ ಅರ್ಥ ಬರಲು ಸಾಧ್ಯವಾಗುತ್ತದೆ. 

ಕಾರ್ಯಾಂಗ ಮತ್ತು ಶಾಸಕಾಂಗಗಳಿಂದ ಹರಿಹರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿ.ಹರಿಹರ ಅಭಿವೃದ್ಧಿಪಥದಲ್ಲಿ ಸಾಗಲಿ. ಆಡಳಿತ ಯಂತ್ರ ಚುರುಕಾಗಿ ಕೆಲಸ ಮಾಡಲಿ. ಭ್ರಷ್ಟಾಚಾರ ಮುಕ್ತ ಹರಿಹರ ನಗರಸಭೆ ಎಂಬ ಹೆಗ್ಗಳಿಕೆ ಪಡೆಯಲಿ. ಲೋಕಾಯುಕ್ತರ ಕಣ್ಣು ಕಚೇರಿಯ ಮೇಲೆ ಬೀಳದಿರಲಿ ಎಂಬುದು ನಮ್ಮ ಮಾಧ್ಯಮದ ಆಶಯವಾಗಿದೆ.

ಸದ್ಯದ ಕಾರ್ಯಾಂಗ ಮತ್ತು ಶಾಸಕಾಂಗ ಕಾರ್ಯವೈಖರಿಗೆ ನಮ್ಮ ಮಾಧ್ಯಮದ ವತಿಯಿಂದ ತುಂಬು ಹೃದಯದ ಅಭಿನಂದನೆಗಳು...

Post a Comment

0 Comments