ವ್ಯಕ್ತಿ ಓರ್ವನನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಲೆ, ದಾವಣಗೆರೆ ಕೆಟಿಜೆ ನಗರದ ಪ್ರಕಾಶ್ ಬಾರ್ ನಲ್ಲಿ ನಡೆದ ಘಟನೆ.!

ಮಂದಾರ ನ್ಯೂಸ್ : ದಾವಣಗೆರೆ: ಬಾರ್ ನಲ್ಲಿ ಕುಳಿತು ಮದ್ಯ ಸೇವನೆ ವೇಳೆ ಏಕಾಏಕಿ ನುಗ್ಗಿದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ನಗರದ ಕೆಟಿಜೆ ನಗರದ ಪ್ರಕಾಶ್ ಬಾರ್ ನಲ್ಲಿ ನಡೆದಿದೆ.

ಕುಮಾರ್ (36) ಚಾಕು ಇರಿತಕ್ಕೆ ಒಳಗಾಗಿ ಹತ್ಯೆಗೀಡಾದ ವ್ಯಕ್ತಿ. ಗೌತಮ್ (38) ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದವನು ಎಂದು ಗುರುತಿಸಲಾಗಿದೆ.
ಬಾರ್ ನಲ್ಲಿ ಕುಳಿತ ವ್ಯಕ್ತಿಗೆ ಚಾಕು ಇರಿತ ಮಾಡಿದ್ದು, ಪೊಲೀಸ್ ಜೀಪ್ ನಲ್ಲಿ ಕರೆದೊಯ್ದಿದ್ದು ಆಸ್ಪತ್ರೆಯಲ್ಲಿ ಕೊನೆಯಿಸಿರೆಳೆದಿದ್ದಾನೆ.

ದಾವಣಗೆರೆಯ ಪ್ರಕಾಶ್ ಬಾರ್ ನಲ್ಲಿ ರಾತ್ರಿ ಸ್ನೇಹಿತರ ಜೊತೆ ಮದ್ಯ ಸೇವನೆ ಮಾಡುತ್ತಿದ್ದ ಕುಮಾರ್ ಗೆ ಏಕಾಏಕಿ ಬಂದ ಗೌತಮ್ ಚಾಕುವಿನಿಂದ ಮನಸ್ಸಿಗೆ ಬಂದಂತೆ ಇರಿದಿದ್ದಾನೆ.‌ ಕೆಳಗಡೆ ಬಿದ್ದರೂ ಬಿಡದೇ ಚುಚ್ಚಿ ಚುಚ್ಚಿ ಸಾಯಿಸಿದ್ದಾನೆ

Post a Comment

0 Comments