ಮಂದಾರ ನ್ಯೂಸ್ ಹರಿಹರ: ಅಕ್ರಮ ಮರಳು, ಮಣ್ಣು, ಕಲ್ಲು ಗಣಿಗಾರಿಕೆ ನಡೆಸುವವರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದ ದಕ್ಷ ,ಪ್ರಾಮಾಣಿಕ ಅಧಿಕಾರಿ ನವೀನ್ ಅವರನ್ನು ಹಾವೇರಿ ಜಿಲ್ಲೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇವರು ಶಿವಮೊಗ್ಗ ಜಿಲ್ಲೆಯಲ್ಲಿ ಹಿರಿಯ ಭೂ ಮತ್ತು ಗಣಿ ಇಲಾಖೆಯ ಅಧಿಕಾರಿಗಳಾಗಿ ಕಳೆದ ಒಂದುವರೆ ವರ್ಷದ ಹಿಂದೆ ಅಧಿಕಾರವನ್ನು ವಹಿಸಿಕೊಂಡಿದ್ದರು. ಇವರು ಅಧಿಕಾರದಲ್ಲಿ ಇದ್ದಷ್ಟು ದಿನ ಅಕ್ರಮ ದಂಧೆ ಕೋರರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದ ಇವರು ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ನಷ್ಟವಾಗುತ್ತಿದ್ದ ಕೋಟ್ಯಾಂತರ ರೂಪಾಯಿ ನಷ್ಟವನ್ನು ಬರಿಸುವಲ್ಲಿ ತಮ್ಮ ಕರ್ತವ್ಯದಲ್ಲಿ ಪ್ರಾಮಾಣಿಕತೆಯನ್ನು ಮೆರೆದಿದ್ದರು. ಇದೀಗ ಇವರನ್ನು ಹಾವೇರಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.
ಇವರ ವರ್ಗಾವಣೆಯಿಂದ ಹಾವೇರಿ ಜಿಲ್ಲೆಯಲ್ಲಿ ಹೊಸ ತಲ್ಲಣವನ್ನುಂಟು ಮಾಡಿದೆ. ಅಕ್ರಮ ಮರಳು ಮಣ್ಣು ಗಣಿಗಾರಿಕೆ ನಡೆಸುತ್ತಿರುವವರು ಇವರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬೇಕಾದರೆ ಇವರ ಇತಿಹಾಸವನ್ನು ಒಮ್ಮೆ ತೆಗೆದು ನೋಡಿ. ಶಿವಮೊಗ್ಗದಲ್ಲಿ ಕರ್ತವ್ಯ ನಿರ್ವಹಿಸುವ ಮೊದಲು ಚಿಕ್ಕಮಂಗಳೂರಿನಲ್ಲಿ ಉಪ್ಪು ಮತ್ತು ಗಣಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ಒಳ್ಳೆಯ ಹೆಸರು ಮಾಡಿದ ಅಧಿಕಾರಿಯಾಗಿದ್ದಾರೆ.
ಶಿವಮೊಗ್ಗದಂತಹ ನಗರಕ್ಕೆ ಒಂದಷ್ಟು ಪ್ರಾಮಾಣಿಕತೆ ಒಂದಷ್ಟು ದಕ್ಷತೆ ಇರುವ ಅಧಿಕಾರಿಗಳ ಅವಶ್ಯಕತೆ ಇದೆ ಆ ದಿಕ್ಕಿನಲ್ಲಿ ನವೀನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು ಹಗಲು ರಾತ್ರಿ ಎನ್ನದೆ ಯಾವಾಗ ಕರೆ ಮಾಡಿದರು ಸಾರ್ವಜನಿಕರ ಕರೆಗೆ ಸ್ಪಂದಿಸಿ ತಮಗೆ ಸರ್ಕಾರ ನೀಡಿರುವ ಸೀಮಿತ ಸಿಬ್ಬಂದಿಗಳನ್ನು ಬಳಸಿಕೊಂಡು ಅವರಿಗೂ ಉತ್ತೇಜನ ನೀಡಿ ಅಕ್ರಮಗಳು ನಡೆಯುತ್ತಿದ್ದ ಜಾಗಕ್ಕೆ ದಿಢೀರ್ ಭೇಟಿ ನೀಡಿ ಅಕ್ರಮಕ್ಕೆ ಬಳಸುತ್ತಿದ್ದ ಟಿಪ್ಪರ್, ಲಾರಿ, ಜೆಸಿಬಿಗಳನ್ನು ವಶಪಡಿಸಿಕೊಂಡು ಶೇಖರಿಸಿಟ್ಟಿದ್ದ ದಾಸ್ತಾನನ್ನು ನಾಶಪಡಿಸುತ್ತಿದ್ದರು ಹಾಗೂ ವೆಹಿಕಲ್‌ಗಳನ್ನು ಸಂಬಂಧಪಟ್ಟ ಪೊಲೀಸ್ ಇಲಾಖೆಗೆ ಒಪ್ಪಿಸುತ್ತಿದ್ದರು .ತಾವು ಕೂಡ ದಂಡ ವಿಧಿಸುತ್ತಿದ್ದರು ಆ ದಂಡದ ಪ್ರಮಾಣವೇ ಸುಮಾರು 2 ಕೋಟಿ ಅಷ್ಟಾಗಿದೆ. ಇಷ್ಟು ಒಳ್ಳೆ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಯ ವರ್ಗಾವಣೆಯಾಗಿ ಹಾವೇರಿ ಜಿಲ್ಲೆಗೆ ಬಂದಿರುವುದು ಜಿಲ್ಲೆಯ ಹಿತ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದ್ದು. ತುಂಗಭದ್ರಾ ನದಿಯ ಒಡಲಿಗೆ ಕನ್ನ ಹಾಕುತ್ತಿದ್ದವರ ಎದೆಯಲ್ಲಿ ನಡುಕ ಶುರುವಾಗಿದೆ.
0 Comments