ಮಂದಾರ ನ್ಯೂಸ್ ಸಾಗರ : ಸುತ್ತಲಿನ ಹತ್ತೂರಿನ ಒಡತಿ, ತ್ಯಾಗರ್ತಿ ಗ್ರಾಮದ ಆದಿ ದೇವತೆ ಶ್ರೀ ಮಾರಿಕಾಂಬ. ಶ್ರೀ ಮಾರಿಕಾಂಬ ದೇವಿಯನ್ನು ನೂತನ ಕಟ್ಟಡದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲು ದಿನಗಣನೆ ಆರಂಭವಾಗಿದೆ. ಈ ನಡುವೆ ಶ್ರೀ ಮಾರಿಕಾಂಬ ದೇವಿಯ ಭಕ್ತರು ದೇವಸ್ಥಾನದ ಜೀವನೋದ್ಧಾರಕ್ಕಾಗಿ ತಮ್ಮ ತನು- ಮನ- ಧನ ಸಾಕಾರದೊಂದಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಈಗಾಗಲೇ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ತ್ಯಾಗರ್ತಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರಿಂದ ದೇಣಿಗೆ ಹರಿದು ಬರುತ್ತಿದೆ.
ದೇವಸ್ಥಾನದ ನೂತನ ಅಧ್ಯಕ್ಷರಾದ ಕೆಬಿ ಗಣಪತಪ್ಪ ಇವರ ನೇತೃತ್ವದ ಮಾರಿಕಾಂಬ ಸಮಿತಿ ಉತ್ತಮವಾದ ಕಾರ್ಯವನ್ನು ಮಾಡುತ್ತಿದ್ದು, ಈಗಾಗಲೇ ನೂತನ ಕಟ್ಟಡದ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ದೇವಿಯ ಪ್ರತಿಷ್ಠಾಪನೆಯ ದಿನಾಂಕವನ್ನು ಈಗಾಗಲೇ ಅಂತಿಮಗೊಳಿಸಿದ್ದಾರೆ.
ಭಕ್ತರ ಹಲವು ವರ್ಷದ ಕನಸನ್ನು ನನಸು ಮಾಡಲು ಹೊರಟಿರುವ ಮಾರಿಕಾಂಬ ಸೇವಾ ಸಮಿತಿಯ ನೂತನ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳಿಗೆ ಆ ದೇವಿ ಒಳಿತನ್ನು ಮಾಡಲಿ ಎಂದು ನಮ್ಮ ಸುದ್ದಿ ವಾಹಿನಿಯು ಆಶಿಸುತ್ತದೆ.
ದೇವಿಯ ಭಕ್ತರು ದೇವಿಯ ಮೇಲೆ ಅಪಾರ ನಂಬಿಕೆಯನ್ನು ಹೊಂದಿದ್ದು, ಭಕ್ತರ ನಂಬಿಕೆಯನ್ನು ಉಳಿಸುವ ನಿಟ್ಟಿನಲ್ಲಿ ನೂತನ ಸಮಿತಿಯು ಪಾರದರ್ಶಕವಾಗಿ ತಮ್ಮ ಆಡಳಿತವನ್ನು ನಡೆಸಲಿ, ಭಕ್ತರ ಸಮ್ಮುಖದಲ್ಲಿ ಲೆಕ್ಕಪತ್ರವನ್ನು ಪ್ರಾಮಾಣಿಕವಾಗಿ ಮುಂದಿರುವಂತಹ ಪ್ರಯತ್ನ ಮಾಡಲಿ, ಆ ಮೂಲಕ ಭಕ್ತರ ನಂಬಿಕೆಗೆ ಪಾತ್ರರಾಗಿ, ದೇವಿಯ ಕೃಪೆಗೆ, ಅನುಗ್ರಹಕ್ಕೆ ಕಾರಣರಾಗಿ ಎಂಬುದು ಸರ್ವಭಕ್ತರ ಅಭಿಲಾಷೆಯಾಗಿದೆ.
ಸದ್ಯ ದೇವಸ್ತಾನದ ಜೀರ್ಣೋದ್ಧಾರಕ್ಕಾಗಿ ಸರ್ವಧರ್ಮದ ಸರ್ವ ಜನರು ತಮ್ಮ ಕೈಲಾದ ಸಹಾಯ ಮಾಡುತ್ತಿರುವುದು ದೇವಸ್ಥಾನದ ನಿರ್ಮಾಣದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ. ತಾಯಿಯ ಆಶೀರ್ವಾದದಿಂದ ಗ್ರಾಮದಲ್ಲಿ ಸೌಹಾರ್ಧ ಸಾಮರಸ್ಯದಿಂದ ಜೀವನ ಸಾಗಿಸುವಂತಹ ವಾತಾವರಣ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
0 Comments