ಮಂದಾರ ನ್ಯೂಸ್ ಹರಿಹರ : ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ನಗರದಲ್ಲಿ ಪಟಾಕಿ ಅಂಗಡಿಗಳನ್ನು ತೆರೆಯಲು ಸಂಬಂಧಿಸಿದ ಇಲಾಖೆಗಳಿಂದ ಅನುಮತಿಯನ್ನು ಪಡೆದು ಅಂಗಡಿಗಳನ್ನು ತೆರೆಯುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಅಂಗಡಿಯ ಮಾಲೀಕರಿಗೆ ಸೂಚನೆಯನ್ನು ನೀಡಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಪಟಾಕಿ ಅಂಗಡಿಗಳನ್ನು ತೆರೆಯುವ ಅಂಗಡಿಯ ಮಾಲೀಕರು ಸಂಬಂಧಿಸಿದ ಇಲಾಖೆಗಳಿಂದ ಅನುಮತಿಯನ್ನು ಪಡೆಯಬೇಕಾಗಿತ್ತು. ಆದರೆ ಹರಿಹರದ ಹೊರವಲಯದಲ್ಲಿ ಹಾಕಿರುವ ಪಟಾಕಿ ಅಂಗಡಿಯ ಮಾಲೀಕರು ನಗರಸಭೆಯಿಂದ ಅನುಮತಿಯನ್ನು ಪಡೆಯದೆ ಪಟಾಕಿ ಅಂಗಡಿಯನ್ನು ತೆರೆದು ವ್ಯಾಪಾರವನ್ನು ನಿನ್ನೆಯಿಂದಲೇ ಆರಂಭಿಸಿದ್ದಾರೆ.
ಸ್ಥಳೀಯ ಸಂಸ್ಥೆಗೆ ಗೌರವ ನೀಡಿ, ನಗರಸಭೆಯ ಷರತ್ತುಗಳಂತೆ ಅಂಗಡಿಗಳನ್ನು ಹಾಕಿ, ಆ ಎಲ್ಲಾ ಷರತ್ತುಗಳನ್ನು ಪಾಲನೆ ಮಾಡಿ ಅಂಗಡಿ ನಡೆಸಬೇಕಾದ ಪಟಾಕಿ ಅಂಗಡಿಯ ಮಾಲೀಕರು ಈ ರೀತಿ ಅನುಮತಿಯನ್ನು ಪಡೆಯದೆ ಅಂಗಡಿ ಹಾಕುವುದು ಎಷ್ಟರಮಟ್ಟಿಗೆ ಸರಿ? ಏನಾದರೂ ಅವಘಡ ಸಂಭವಿಸಿದರೆ ಜವಾಬ್ದಾರರು ಯಾರು? ನಾಗರಿಕರ ಹಿತದೃಷ್ಟಿಯಿಂದ ನಗರಸಭೆಯಿಂದ ಅನುಮತಿಯನ್ನು ಪಡೆಯಬೇಕಾಗಿತ್ತು ಅಲ್ಲವೇ? ಇದರ ಜೊತೆಗೆ ಜಿಲ್ಲಾಧಿಕಾರಿಗಳು ಪಟಾಕಿ ಅಂಗಡಿಯ ಮಾಲೀಕರಿಗೆ ನೀಡಿರುವ ಷರತ್ತುಗಳನ್ನು ಅಂಗಡಿಯ ಮಾಲೀಕರು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ಡಿಎಸ್ಎಸ್ ತಾಲೂಕು ಸಂಚಾಲಕರಾದ ಮಂಜುನಾಥ್ ಮಾಡಿದ್ದಾರೆ.
ಹರಿಹರದಲ್ಲಿ 8 ಪಟಾಕಿ ಅಂಗಡಿಗಳನ್ನು ತೆರೆಯಲು ಮಾತ್ರ ಅನುಮತಿ ಇರುತ್ತದೆ. ಆದರೆ 10 ಅಂಗಡಿಗಳನ್ನು ಈಗಾಗಲೇ ತೆರೆಯಲಾಗಿದೆ. ಈಗ ತೆರೆದಿರುವ 10 ಅಂಗಡಿಗಳ ಮಾಲೀಕರ ಹೆಸರಿನಲ್ಲಿ ಅನುಮತಿ ಇರುವುದಿಲ್ಲ, ಬೇರೆಯವರ ಲೇಷನ್ಸ್ ಲೇಷನ್ಸ್ ನಲ್ಲಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಕೆಲವು ಲೇಷನ್ಸ್ ರಿನಿವಲ್ ಮಾಡಿಕೊಂಡಿಲ್ಲ , ಕೆಲವರು ಜಿಎಸ್‌ಟಿ ನಂಬರನ್ನು ಪಡೆದುಕೊಂಡಿಲ್ಲ, ಯಾರದು ಹೆಸರಿನಲ್ಲಿ ಅನುಮತಿ ಪಡೆದು ಇನ್ಯಾರೋ ಅಂಗಡಿಯನ್ನು ನಡೆಸುತ್ತಿದ್ದಾರೆ, ಇದು ಕಾನೂನಿಗೆ ವಿರುದ್ಧವಾಗಿದೆ. ಇದರ ಜೊತೆಗೆ ಪಟಾಕಿ ಅಂಗಡಿಯ ಮಾಲೀಕರು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಸುರಕ್ಷತಾ ಸಾಮಗ್ರಿಗಳನ್ನು ಸಹ ಇಟ್ಟುಕೊಂಡಿರುವುದಿಲ್ಲ. ಶೈಕ್ಷಣಿಕ ಉದ್ದೇಶಕ್ಕಾಗಿ ಪಡೆದಿರುವ ಜಾಗದಲ್ಲಿ ವಾಣಿಜ್ಯ ವ್ಯಾಪಾರವನ್ನು ನಡೆಸಲಾಗುತ್ತಿದೆ. ಅಗ್ನಿಶಾಮಕ ದಳದ ವಾಹನ ಇರುವುದಿಲ್ಲ. ತುರ್ತು ಸಹಾಯಕ್ಕಾಗಿ ಆಂಬುಲೆನ್ಸ್ ವ್ಯವಸ್ಥೆ ಹೊಂದಿರುವುದಿಲ್ಲ. ಕೂಡಲೇ ಬೆಂಕಿಯನ್ನು ನಂದಿಸುವ ಮರಳಿನ ಚೀಲವನ್ನು ಹೊಂದಿರುವುದಿಲ್ಲ. ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಕನಿಷ್ಠ 20 ಅಡಿ ಅಂತರವಿರಬೇಕು ಎಂಬ ನಿಯಮವಿದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಹೀಗೆ ಹತ್ತು ಹಲವು ಷರತ್ತುಗಳನ್ನು ಉಲ್ಲಂಘಿಸಿ ಅಂಗಡಿಗಳನ್ನು ನಡೆಸುತ್ತಿದ್ದರು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡುತನವನ್ನು ಪ್ರದರ್ಶಿಸಿದ್ದಾರೆ ಎಂದು ಮಂಜುನಾಥ್ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಅಂಗಡಿಯ ಮಾಲೀಕರು ನಗರಸಭೆಗೆ ಗೌರವವನ್ನು ನೀಡಿ ಕೂಡಲೇ ಅನುಮತಿಯನ್ನು ಪಡೆದು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಹಬ್ಬದ ಸಂಭ್ರಮವನ್ನು ಆಚರಣೆ ಮಾಡಲು ತಾವು ಕಾರಣರಾಗಬೇಕು ಎಂಬುದು ನಮ್ಮ ಸುದ್ದಿ ವಾಹಿನಿಯ ಆಶಯವಾಗಿದೆ.
0 Comments